Breaking News

ಮಕ್ಕಳ ಪಾಲಿಗೆ ಕಂಟಕವಾಗಿ ಗಾಂಧಿ ಪಾರ್ಕ್‌

ಇಂದು ಸಂಜೆ ಗಾಂಧಿ ಪಾರ್ಕ್‌ನಲ್ಲಿ ಅಟವಾಡಲು ಹೋಗಿದ್ದ ಮಕ್ಕಳು ಮರಳಿ ಹೋಗಿದ್ದು ಮನೆಗಲ್ಲ ಬದಲಾಗಿ ಆಸ್ಪತ್ರೆಗೆ. ಗಾಂಧಿ ಪಾರ್ಕ್‌ ನಲ್ಲಿ ಇರುವ ಮಕ್ಕಳ ಅಟದ ಸಾಮಾಗ್ರಿಗಳು ಸಂಪೂರ್ಣವಾಗಿ ಹಾಳಾಗಿದ್ದು ಅಟವಾಡುತ್ತಿದ್ದ ರಾಜು, ಮೋಹನ್, ಸಂಕೇತ, ಸತೀಶ್ ಕುಮಾರ್ ಎಂಬ 4 ಮಕ್ಕಳಿಗೆ ಗಾಯಗಳಾಗಿವೆ. ತುಟಿ, ತಲೆ, ಕೈ-ಕಾಲುಗಳಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆಯೇ ಮಕ್ಕಳ ಅಟದ ಸಾಮಾಗ್ರಿಗಳು ಹಾಳಾಗಿದೆ ಎಂದು ಪೋಷಕರು ತಿಳಿಸಿದ್ದರು ಕೂಡ ಯಾವುದೇ ಕ್ರಮವನ್ನು ಪಾಲಿಕೆ ಅಥವಾ ಅಧಿಕಾರಿಗಳು ತೆಗೆದುಕೊಂಡಿಲ್ಲ. ಈ ಘಟನೆಯ ನಂತರವಾದರೂ ಸಂಬಂಧ ಪಟ್ಟ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಎಚ್ಚೆತುಕೊಂಡು ಪಾರ್ಕ್ ಕಡೆ ಗಮನ ಹರಿಸಲಿ ಎಂಬುದು CNEWSTV.in ಅಶಯ.

Leave a Reply

Your email address will not be published. Required fields are marked *

*