ಮೋದಿ ಭೇಟಿ : ಮದುವಣಗಿತ್ತಿಯಂತೆ ತಯಾರಾಗುತ್ತಿರುವ ಮೈಸೂರು..
Cnewstv.in / 17.06.2022 / ಮೈಸೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮೋದಿ ಭೇಟಿ : ಮದುವಣಗಿತ್ತಿಯಂತೆ ತಯಾರಾಗುತ್ತಿರುವ ಮೈಸೂರು..
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು ದಸರಾ ಹಬ್ಬ ಗಿಂತ ಮೊದಲೇ ಮದುವನಗಿತ್ತಿಯಂತೆ ತಯಾರಾಗುತ್ತಿದೆ.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮೈಸೂರು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ನಗರವನ್ನು ಈ ರೀತಿಯಾಗಿ ಶೃಂಗಾರ ಮಾಡಲಾಗುತ್ತಿದೆ.
ಮೈಸೂರು ವಿಮಾನ ನಿಲ್ದಾಣದಿಂದ ಅಗಮಿಸುವ ಪ್ರಧಾನಿಯನ್ನು ಪಾರಂಪರಿಕ ನಗರಿ ಮೈಸೂರಿನಲ್ಲಿ ಶೈಲಿಯಲ್ಲಿ ಸ್ವಾಗತಿಸಲು ಸಜ್ಜುಗೊಳಿಸಲಾಗುತ್ತಿದೆ. ಮೈಸೂರು ನಗರದ ಪ್ರಮುಖ ಜಂಕ್ಷನ್ ಗಳು ಹಾಗೂ ರಸ್ತೆಗಳಲ್ಲಿ ಅಲಂಕಾರಿಕ ಗಿಡಗಳನ್ನು ನೆಟ್ಟು ಮತ್ತಷ್ಟು ಸುಂದರಗೊಳಿಸಲಾಗಿದೆ.
ಮೋದಿಯವರು ಬರುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ರಸ್ತೆಗಳ ಡಾಂಬರೀಕರಣಕ್ಕಾಗಿ 15 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಅಲ್ಲದೆ ಮೋದಿ ಭಾಗವಹಿಸುತ್ತಿರುವ ಯೋಗ ಕಾರ್ಯಕ್ರಮಕ್ಕಾಗಿ 6 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ಜೂನ್ 21 ರಂದು ನಡೆಯಲಿರುವ ಯೋಗ ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಜನ ಪ್ರಧಾನಿಯವರೊಂದಿಗೆ ಯೋಗ ಮಾಡುತ್ತಾರೆ.
ಇದನ್ನು ಒದಿ : https://cnewstv.in/?p=10176
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮೋದಿ ಭೇಟಿ : ಮದುವಣಗಿತ್ತಿಯಂತೆ ತಯಾರಾಗುತ್ತಿರುವ ಮೈಸೂರು.. 2022-06-17
Recent Comments