Cnewstv.in / 11.06.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ರಾಜ್ಯ ಸಭೆ ಚುನಾವಣಾ ಫಲಿತಾಂಶ : ಬಿಜೆಪಿಗೆ 3, ಕಾಂಗ್ರೆಸ್ ಗೆ 1, ಜೆಡಿಎಸ್ ಗೆ ಆಘಾತ.
ಬೆಂಗಳೂರು : ಕರ್ನಾಟಕದಿಂದ ನಡೆದ ರಾಜ್ಯಸಭಾ ಚುನಾವಣೆಯ ಮತದಾನ ಮತ್ತು ಎಣಿಕೆ ನೆನ್ನೆ ನಡೆದಿದ್ದು,
ಬಿಜೆಪಿಗೆ 2 ಕಾಂಗ್ರೆಸ್ ಗೆ 1 ಸ್ಥಾನಗಳಿಸಿದ್ದು, ತೀವ್ರ ಕುತೂಹಲ ಮೂಡಿಸಿದ್ದ ನಾಲ್ಕನೇ ಸ್ಥಾನವನ್ನು ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್ ಅವರು ಗೆದ್ದಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಒಮ್ಮತದ ಕೊರತೆ ಬಿಜೆಪಿಗೆ ಲಾಭ ಮಾಡಿ ಕೊಟ್ಟಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಕಾಂಗ್ರೆಸ್ ನಿಂದ ಜೈರಾಂ ರಮೇಶ್ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದು, ಜೆಡಿಎಸ್ ನ ಕುಪೇಂದ್ರ ರೆಡ್ಡಿ ಮತ್ತು ಕಾಂಗ್ರೆಸ್ ನ ಮನ್ಸೂರ್ ಅಲಿ ಖಾನ್ ಸೋಲು ಅನುಭವಿಸಿದ್ದಾರೆ.
Recent Comments