ರಾಷ್ಟ್ರಪತಿ ಚುನಾವಣೆಯ ವೇಳಾಪಟ್ಟಿ ಪ್ರಕಟ. ಈ ಬಾರಿ ಚುನಾವಣೆಗೆ ವಿಶೇಷ ಪೆನ್ ಬಳಕೆ..
Cnewstv.in / 10.06.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ರಾಷ್ಟ್ರಪತಿ ಚುನಾವಣೆಯ ವೇಳಾಪಟ್ಟಿ ಪ್ರಕಟ. ಈ ಬಾರಿ ಚುನಾವಣೆಗೆ ವಿಶೇಷ ಪೆನ್ ಬಳಕೆ..
ನವದೆಹಲಿ : ರಾಷ್ಟ್ರಪತಿ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿದೆ, ಜುಲೈ 18ಕ್ಕೆ ಚುನಾವಣೆ ನಡೆಯಲಿದ್ದು, ಜುಲೈ 21 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಹಾಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅವಧಿ ಜುಲೈ 24 ರಂದು ಮುಕ್ತಾಯವಾಗಲಿದೆ. ಸಂವಿಧಾನದ 62ನೇ ವಿಧಿ ಪ್ರಕಾರ, ಮುಂದಿನ ರಾಷ್ಟ್ರಪತಿ ಜುಲೈ 25ರೊಳಗೆ ಪ್ರಮಾಣವಚನ ಸ್ವೀಕಾರ ಮಾಡಬೇಕಾಗಿದೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 4,809 ಮತದಾರರು ಮತ ಚಲಾಯಿಸುತ್ತಾರೆ. ಯಾವುದೇ ಪಕ್ಷ ತನ್ನ ಸಂಸದರು, ಶಾಸಕರಿಗೆ ವಿಪ್ ಜಾರಿ ಮಾಡುವಂತಿಲ್ಲ ಎಂದು ಆಯೋಗ ತಿಳಿಸಿದೆ.
ರಾಷ್ಟ್ರಪತಿ ಚುನಾವಣೆಗೆ ವಿಶೇಷ ಪೆನ್..
ರಾಷ್ಟ್ರಪತಿ ಚುನಾವಣೆಗೆ ಚುನಾವಣಾ ಆಯೋಗ ವಿಶೇಷ ಪೆನ್ ಗಳನ್ನು ಮತ ಚಲಾಯಿಸುವುದಕ್ಕೆ ನೀಡಲಿದೆ.
ನವದೆಹಲಿಯ ಸಂಸತ್ ನಲ್ಲಿ ರಾಜ್ಯಗಳಲ್ಲಿ ವಿಧಾನಸಭೆಯಲ್ಲಿ ಮತದಾನ ನಡೆಯಲಿದೆ. ಬ್ಯಾಲಟ್ ಪೇಪರ್ ನಲ್ಲಿ ಮತವನ್ನು ಗುರುತು ಮಾಡುವುದಕ್ಕಾಗಿ ಈ ಪೆನ್ ನ್ನು ಬಳಕೆ ಮಾಡಲಾಗುತ್ತದೆ. ಇದನ್ನು ಹೊರತುಪಡಿಸಿ ಯಾವುದೇ ಪೆನ್ ನ್ನು ಬಳಕೆ ಮಾಡುವಂತಿಲ್ಲ. ಒಂದು ವೇಳೆ ಬೇರೆ ಪೆನ್ ಬಳಸಿದ್ದೇ ಆದಲ್ಲಿ ಆ ಮತ ಅಸಿಂಧುವಾಗಲಿದೆ.
ನಾಮನಿರ್ದೇಶಿತ ಸಂಸದರು, ಶಾಸಕರು ವಿಧಾನಪರಿಷತ್ ಸದಸ್ಯರು ಮತದಾನ ಮಾಡುವಂತಿಲ್ಲ. ಅರ್ಹರು ಮತದಾನ ಮಾಡುವುದಕ್ಕೆ ಆಯೋಗ ನಿರ್ದಿಷ್ಟ ಪೆನ್ ಗಳನ್ನು ನೀಡಲಿದೆ.
ಇದನ್ನು ಒದಿ : https://cnewstv.in/?p=10114
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ರಾಷ್ಟ್ರಪತಿ ಚುನಾವಣೆಯ ವೇಳಾಪಟ್ಟಿ ಪ್ರಕಟ. ಈ ಬಾರಿ ಚುನಾವಣೆಗೆ ವಿಶೇಷ ಪೆನ್ ಬಳಕೆ.. 2022-06-10
Recent Comments