ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಆಸ್ತಿ ವಿವರ ಗೊತ್ತಾ??
Cnewstv.in / 01.06.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಆಸ್ತಿ ವಿವರ ಗೊತ್ತಾ??
ಬೆಂಗಳೂರು : ರಾಜ್ಯಸಭಾ ಚುನಾವಣೆಯ ಕಾವು ಏರುತ್ತಿದ್ದು, ಬಿಜೆಪಿಯಿಂದ ಮೂವರು, ಕಾಂಗ್ರೆಸ್ ನಿಂದ ಇಬ್ಬರೂ, ಜೆಡಿಎಸ್ ನಿಂದ ಒಬ್ಬ ಅಭ್ಯರ್ಥಿ ಸ್ಪರ್ಧಿಸುತ್ತಿದ್ದು, ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಆಸ್ತಿಯನ್ನು ಘೋಷಣೆ ಮಾಡಿದ್ದಾರೆ.
ಇದೇ ತಿಂಗಳು 10 ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರವನ್ನು ಘೋಷಣೆ ಮಾಡಿದ್ದು, ಹೀಗಿವೆ..
ಕುಪೇಂದ್ರ ರೆಡ್ಡಿ ( ಜೆಡಿಎಸ್ ಅಭ್ಯರ್ಥಿ ) :
575 ಕೋಟಿಯ 89 ಲಕ್ಷದ 75 ಸಾವಿರದ 550 ರೂಪಾಯಿಗಳು. ಸ್ಥಿರಾಸ್ತಿ 222 ಕೋಟಿಯ 47 ಲಕ್ಷದ 60 ಸಾವಿರದ 624 ರೂಪಾಯಿ, ಚರಾಸ್ತಿ 353 ಕೋಟಿಯ 42 ಲಕ್ಷದ 14 ಸಾವಿರದ 926 ರೂಪಾಯಿಗಳು. ಅವರ ಕೈಯಲ್ಲಿ 21 ಲಕ್ಷದ 12 ಸಾವಿರದ 381 ರೂಪಾಯಿ, ಪತ್ನಿ ಬಳಿ 43 ಲಕ್ಷದ 41 ಸಾವಿರದ 108 ರೂಪಾಯಿಗಳಿವೆ. ಆಭರಣ ಮೌಲ್ಯ 1 ಕೋಟಿಯ 74 ಲಕ್ಷದ 35 ಸಾವಿರದ 500 ರೂಪಾಯಿ, ಪತ್ನಿ ಬಳಿ 3 ಕೋಟಿಯ 51 ಲಕ್ಷದ 77 ಸಾವಿರದ 870 ಕೋಟಿ ರೂಪಾಯಿ ಮೌಲ್ಯದ ಆಭರಣಗಳಿವೆ. 20 ಕೋಟಿಯ 91 ಲಕ್ಷದ 54 ಸಾವಿರದ 125 ರೂಪಾಯಿ ಮೌಲ್ಯದ ಕೃಷಿ ಭೂಮಿಯಿದೆ.
ಚಿತ್ರನಟ ಜಗ್ಗೇಶ್ ( ಬಿಜೆಪಿ ಅಭ್ಯರ್ಥಿ ) :
17.64 ಕೋಟಿ ರೂಪಾಯಿಯಾಗಿದ್ದು, ಸ್ಥಿರಾಸ್ತಿ 13.25 ಕೋಟಿ, ಚರಾಸ್ತಿ 4.39 ಕೋಟಿ ರೂಪಾಯಿಗಳಾಗಿವೆ. ತಮ್ಮ ಬಳಿ 2 ಲಕ್ಷ ರೂಪಾಯಿ ಹಾಗೂ ಪತ್ನಿ ಪರಿಮಳ ಬಳಿ 1,60 ಸಾವಿರ ರೂಪಾಯಿ ನಗದು ಇದೆ, 500 ಗ್ರಾಂ ಚಿನ್ನ ಮತ್ತು ಒಂದು ಕೆಜಿ ಬೆಳ್ಳಿ ಇದೆ, ಪತ್ನಿ ಬಳಿ 500 ಗ್ರಾಂ ಚಿನ್ನ ಹಾಗೂ 3 ಕೆಜಿ ಬೆಳ್ಳಿ ಇದೆ.6.7 ಕೋಟಿ ರೂಪಾಯಿ ಮೌಲ್ಯದ ಕೃಷಿಭೂಮಿ, 6.50 ಕೋಟಿ ರೂಪಾಯಿ ಮೌಲ್ಯದ ಮನೆ, ಪತ್ನಿ ಹೆಸರಿನಲ್ಲಿ 4.50 ಕೋಟಿ ರೂಪಾಯಿ ಮೌಲ್ಯದ ಮನೆ ಹೊಂದಿರುವುದಾಗಿ ತಿಳಿಸಿದ್ದಾರೆ.
ಜೈರಾಂ ರಮೇಶ್ ( ಕಾಂಗ್ರೆಸ್ ಅಭ್ಯರ್ಥಿ ) :
4.56 ಕೋಟಿ ರೂಪಾಯಿ ಮೌಲ್ಯದ್ದಾಗಿದ್ದು, ಸ್ಥಿರಾಸ್ತಿ 1.72 ಕೋಟಿ ರೂಪಾಯಿ, ಚರಾಸ್ತಿ 2.48 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ವಿವಿಧ ಹಣಕಾಸು ಸಂಸ್ಥೆಗಳಲ್ಲಿ 35.47 ಲಕ್ಷ ರೂಪಾಯಿ ಸಾಲ ಇದೆ.
ನಿರ್ಮಲಾ ಸೀತಾರಾಮ್ ( ಬಿಜೆಪಿ ಅಭ್ಯರ್ಥಿ ) :
2 ಕೋಟಿಯ 50 ಲಕ್ಷದ 99 ಸಾವಿರದ 396 ರೂಪಾಯಿ ಮೌಲ್ಯದ ಆಸ್ತಿಯಿದ್ದು ಸ್ಥಿರಾಸ್ತಿ 1 ಕೋಟಿಯ 87 ಲಕ್ಷದ 60 ಸಾವಿರದ 200 ರೂಪಾಯಿ, ಚರಾಸ್ತಿ 63 ಲಕ್ಷದ 39 ಸಾವಿರದ 196 ರೂಪಾಯಿ ಮೌಲ್ಯದ್ದಾಗಿದೆ. 315 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ, 17, 200 ರೂಪಾಯಿ ಹಣ ಕೈಯಲ್ಲಿ, 45 ಲಕ್ಷದ 04 ಸಾವಿರದ 479 ರೂಪಾಯಿ ಎಫ್ ಡಿಯಿದೆ.
ಮನ್ಸೂರ್ ಅಲಿ ಖಾನ್ ( ಕಾಂಗ್ರೆಸ್ ಅಭ್ಯರ್ಥಿ ) :
₹57.71 ಕೋಟಿ ಮೌಲ್ಯದ ಅಸ್ತಿ ಹೊಂದಿದ್ದು, 18 ಎಕರೆಗೂ ಹೆಚ್ಚು ಕೃಷಿ ಜಮೀನು, 14 ಕೃಷಿಯೇತರ ಜಮೀನು, ವಾಣಿಜ್ಯ ಕಟ್ಟಡಗಳು, ಮಿನಿ ಕೂಪರ್ ಮತ್ತು ಬಿಎಂಡಬ್ಲ್ಯು ಕಾರುಗಳು ತಮ್ಮ ಬಳಿ ಇವೆ ಎಂದು ನಾಮಪತ್ರದ ಜತೆಗಿನ ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ. ಮನ್ಸೂರ್ ಬಳಿ ₹48.34 ಕೋಟಿ ಮೌಲ್ಯದ ಆಸ್ತಿ ಇದ್ದರೆ, ಅವರ ಪತ್ನಿ ತಸ್ಬಿಯಾ ಖಾನ್ ಬಳಿ ₹9.37 ಕೋಟಿ ಆಸ್ತಿ ಇದೆ. ಇಬ್ಬರ ಬ್ಯಾಂಕ್ ಖಾತೆಗಳಲ್ಲೂ ತಲಾ ₹1.21 ಕೋಟಿ ಠೇವಣಿಗಳಿವೆ
ಲೆಹರ್ ಸಿಂಗ್ ಶಿರೋಯಿ ( ಬಿಜೆಪಿ ಅಭ್ಯರ್ಥಿ ) :
40.50 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ. 2.11 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ. ಪತ್ನಿ ಶಾಂತಾಬಾಯಿ ಹೆಸರಿನಲ್ಲಿ 6.94 ಕೋಟಿ ಮೊತ್ತದ ಚರಾಸ್ತಿ. 88 ಲಕ್ಷ ರುಪಾಯಿ ಸ್ಥಿರಾಸ್ತಿ. ಅವಿಭಜಿತ ಕುಟುಂಬದ ಹೆಸರಿನಲ್ಲಿ ಒಂದು 1.21 ಕೋಟಿ ರುಪಾಯಿ ಮೌಲ್ಯದ ಚರಾಸ್ತಿ 6.50 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ಇದನ್ನು ಒದಿ : https://cnewstv.in/?p=10020
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಆಸ್ತಿ ವಿವರ ಗೊತ್ತಾ?? 2022-06-01
Recent Comments