ಮಹಾನಗರಪಾಲಿಕೆಯ ಆಯುಕ್ತೆ ಚಾರುಲತಾ ಸೋಮಲ್ ವರ್ಗಾವಣೆ ಮಾಡದಂತೆ ಕಾಂಗ್ರೆಸ್ ಜೆ.ಡಿ.ಎಸ್ ಪಾಲಿಕೆ ಸದಸ್ಯರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

 

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಜನಪರವಾಗಿ ದಕ್ಷ ಹಾಗೂ ನಿಷ್ಪಕ್ಷಪಾತವಾಗಿ ಸೇವೆಸಲ್ಲಿಸಿದ ಪಾಲಿಕೆ ಆಯುಕ್ತ ಚಾರುಲತಾ ಸೋಮನ್ ರವರ ವರ್ಗಾವಣೆಯನ್ನು ಖಂಡಿಸಿ ಇಂದು ಕಾಂಗ್ರೆಸ್ ಜೆಡಿಎಸ್ ಪಕ್ಷದ ಪಾಲಿಕೆ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಮಾಹಾನಗರಪಾಲಿಕೆ ಸದಸ್ಯ ರಮೇಶ್ ಹೆಗಡೆಯವರು. “ಸರ್ಕಾರ ದಿಢೀರನೆ ಈ ವರ್ಗಾವಣೆ ಮಾಡಿರುವುದು ಖಂಡನೀಯ. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರ ರಹಿತ ಪಾರದರ್ಶಕ ಅಧಿಕಾರವನ್ನು ನೀಡುವುದಾಗಿ ಹೇಳಿದ್ರು ಆದರೆ ಇಂತಹ ದಕ್ಷ ಅಧಿಕಾರಿಯನ್ನು ವರ್ಗಾವಣೆ ಮಾಡ್ತಾ ಇರೋದು ನೋಡಿದರೆ ಈ ಸರ್ಕಾರ ಭ್ರಷ್ಟಾಚಾರ ಪರವಾದ ಸರ್ಕಾರ ಎನಿಸುತ್ತಿದೆ.ಮುಖ್ಯಮಂತ್ರಿಗಳು ಈ ವರ್ಗಾವಣೆಯನ್ನು ಯಾವುದೇ ಕಾರಣಕ್ಕೂ ಅನುಷ್ಠಾನ ಮಾಡಬಾರದು ಎಂದು ವಿನಂತಿಸಿದರು.”

Leave a Reply

Your email address will not be published. Required fields are marked *

*