Cnewstv.in / 23.11.2021/ ಭೋಪಾಲ್ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಾಲೆ ಬಸ್ ತಪ್ಪಿತೆಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಭೋಪಾಲ್: ಶಾಲೆಗೆ ತೆರಳಬೇಕಿದ್ದ ಬಸ್ ತಪ್ಪಿತೆಂದು ಮನನೊಂದ ವಿದ್ಯಾರ್ಥಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯಲ್ಲಿ ನಡೆದಿದೆ. ಖಾಸಗಿ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 14 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಸಂಬಂದಿಸಿದಂತೆ ಆಮ್ಧೋಹ್ ಗ್ರಾಮದ ಘೋಡಾಡೋಂಗ್ರಿ ಪೋಲಿಸ್ ಪೋಸ್ಟ್ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೋಷಕರು ಪೊಲೀಸರಿಗೆ ನೀಡಿರುವ ಮಾಹಿತಿಯ ಪ್ರಕಾರ ಬಾಲಕ ಶಾಲೆಗಳಲ್ಲಿ ...
Read More »ರಾಷ್ಟ್ರೀಯ
ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಗೆ ವೀರ ಚಕ್ರ ಪ್ರಶಸ್ತಿ.
Cnewstv.in / 22.11.2021/ ನವದಹಲಿ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ನವದೆಹಲಿ: ಫೆಬ್ರವರಿ 2019 ರಲ್ಲಿ ಬಾಲಕೋಟ್ ಮೇಲಿನ ವೈಮಾನಿಕ ಕಾಳಗದಲ್ಲಿ ಪಾಕಿಸ್ಥಾನದ ಎಫ್ -16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕಾಗಿ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ರವರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಇಂದು ವೀರ ಚಕ್ರವನ್ನು ಪ್ರದಾನ ಮಾಡಿದ್ದಾರೆ. ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಧಮಾನ್ ಅಭಿನಂದನ್ ಅವರ ಸಾಹಸ ಮತ್ತು ಸೇವೆಯನ್ನು ಗೌರವಿಸಲಾಯಿತು. ಪರಮವೀರ ಚಕ್ರದ ಬಳಿಕ ವೀರಚಕ್ರ ಮೂರನೇ ಅತ್ಯುನ್ನತ ಶೌರ್ಯ ಪದಕವಾಗಿದೆ. ಈ ಹಿನ್ನೆಲೆ ...
Read More »ರಾಜ್ಯದಲ್ಲಿ ಮಕ್ಕಳ ಮೇಲಿನ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ. ದೇಶದಲ್ಲಿ ಅತಿ ಹೆಚ್ಚು ಅಪರಾಧಗಳನ್ನು ವರದಿ ಮಾಡುವ ರಾಜ್ಯದಲ್ಲಿ ಕರ್ನಾಟಕ ಮೂರನೇ ಸ್ಥಾನ.
Cnewstv.in / 15.11.2021/ ನವದೆಹಲಿ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ನವದೆಹಲಿ : ರಾಜ್ಯದಲ್ಲಿ ಮಕ್ಕಳ ಮೇಲಿನ ಸೈಬರ್ ಅಪರಾಧಗಳ ಪ್ರಕರಣಗಳ ಸಂಖ್ಯೆಯಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ ಹಾಗೂ ದೇಶದಲ್ಲಿ ಅತಿ ಹೆಚ್ಚು ಅಪರಾಧಗಳನ್ನು ವರದಿ ಮಾಡುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಅಪರಾಧಗಳ ದಾಖಲೆಯ ಬ್ಯೂರೋ ಪ್ರಕಾರ ರಾಜ್ಯದಲ್ಲಿ ಕಳೆದ ವರ್ಷಕ್ಕಿಂತಲೂ 2020 ರಲ್ಲಿ ಮಕ್ಕಳ ಮೇಲಿನ ಸೈಬರ್ ಅಪರಾಧಗಳ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 1.340 ರಷ್ಟು ಹೆಚ್ಚಳವಾಗಿದೆ. ರಾಜ್ಯದಲ್ಲಿ 2020ರಲ್ಲಿ ಮಕ್ಕಳ ಮೇಲೆ ಒಟ್ಟು 144 ಸೈಬರ್ ಅಪರಾಧಗಳು ...
Read More »ರಾಷ್ಟ್ರ ರಾಜಧಾನಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ : ನಿಯಂತ್ರಿಸಲು ಎರಡು ದಿನಗಳ ಲಾಕ್‌ಡೌನ್ ಘೋಷಿಸಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸಲಹೆ.
Cnewstv.in / 13.11.2021/ ನವದೆಹಲಿ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ರಾಷ್ಟ್ರ ರಾಜಧಾನಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ : ನಿಯಂತ್ರಿಸಲು ಎರಡು ದಿನಗಳ ಲಾಕ್‌ಡೌನ್ ಘೋಷಿಸಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸಲಹೆ. ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದ ಕಾರಣ ಜನರು ಮನೆಯಿಂದ ಹೊರ ಹೋಗುವುದನ್ನು ತಪ್ಪಿಸುವಂತೆ ಕೇಂದ್ರ ಮಾಲಿನ್ಯ ನಿಗಾ ಸಂಸ್ಥೆ ಶುಕ್ರವಾರ ಸಲಹೆ ನೀಡಿದೆ ಮತ್ತು ವಾಹನ ಬಳಕೆಯನ್ನು ಕನಿಷ್ಠ ಶೇಕಡಾ 30 ರಷ್ಟು ಕಡಿಮೆಗೊಳಿಸುವಂತೆ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಿಗೆ ನಿರ್ದೇಶನ ನೀಡಿದೆ. ದೆಹಲಿಯಲ್ಲಿ ಕಳೆದ 24-ಗಂಟೆಗಳ ...
Read More »ಶೀಘ್ರವೇ ಆಯ್ದ ವಯೋಮಿತಿಯವರಿಗೆ ಬೂಸ್ಟರ್ ಡೋಸ್
Cnewstv.in / 13.11.2021/ ನವದೆಹಲಿ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶೀಘ್ರವೇ ಆಯ್ದ ವಯೋಮಿತಿಯವರಿಗೆ ಬೂಸ್ಟರ್ ಡೋಸ್ ನವದೆಹಲಿ : ದೇಶಾದ್ಯಂತ ಕೊರೋನಾ ಮಹಾಮಾರಿಯನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಈಗಾಗಲೇ ದೇಶದಲ್ಲಿ 110 ಕೋಟಿಗೂ ಅಧಿಕ ವ್ಯಾಕ್ಸಿನೇಷನ್ ಮಾಡಲಾಗಿದೆ. ವ್ಯಾಕ್ಸಿನೇಷನ್ ಗೆ ಪೂರಕವಾಗಿ ಬೂಸ್ಟರ್ ಡೋಸ್ ಅನ್ನು ಆಯ್ದ ವಯೋಮಿತಿ ಅವರಿಗೆ ನೀಡಲು ಸರಕಾರ ಶಿಫಾರಸು ಮಾಡಲು ಚಿಂತನೆ ನಡೆಸುತ್ತಿದೆ. ಈಗಾಗಲೇ ಅಮೆರಿಕಾ ಸೇರಿದಂತೆ 36 ದೇಶಗಳಲ್ಲಿ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಕರೋನಾ ಲಸಿಕೆಗಳ ಪ್ರಯೋಗ ನಡೆಸುತ್ತಿರುವ ಲ್ಯಾಬ್ ಗಳ ...
Read More »ಇಂದಿನಿಂದ ಮೂರು ದಿನಗಳ ಕಾಲ ತಿಮ್ಮಪ್ಪನ ವಿಐಪಿ ದರ್ಶನ ಬಂದ್.
Cnewstv.in / 13.11.2021/ ತಿರುಪತಿ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಇಂದಿನಿಂದ ಮೂರು ದಿನಗಳ ಕಾಲ ತಿಮ್ಮಪ್ಪನ ವಿಐಪಿ ದರ್ಶನ ಬಂದ್. ತಿರುಪತಿ : ಇಂದಿನಿಂದ ಮೂರು ದಿನಗಳ ಕಾಲ ತಿರುಪತಿ ತಿಮ್ಮಪ್ಪನ ವಿಐಪಿ ದರ್ಶನ ಬಂದ ಮಾಡಲಾಗಿದೆ. ನವೆಂಬರ್ 13 ರಿಂದ 15 ರವರೆಗೆ ಅಂದರೆ ಇಂದಿನಿಂದ ಮೂರು ದಿನಗಳ ಕಾಲ ತಿರುಪತಿ ತಿಮ್ಮಪ್ಪನ ವಿಐಪಿ ದರ್ಶನಕ್ಕೆ ಅವಕಾಶವಿಲ್ಲ ಎಂದು ಟಿಟಿಡಿ ಆಡಳಿತ ಮಂಡಳಿ ತಿಳಿಸಿದೆ. ತಿರುಪತಿಯಲ್ಲಿ 29ನೇ ಸೌಥ್ ಜೋನಲ್ ಸಭೆ ಇರುವುದರಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. 29ನೇ ಸೌತ್ ...
Read More »ಪ್ರಧಾನಿ ಮೋದಿಯ 4 ಗಂಟೆ ಕಾರ್ಯಕ್ರಮಕ್ಕಾಗಿ 23 ಕೋಟಿ ರೂಪಾಯಿ ಖರ್ಚು ಮಾಡುತ್ತಿರುವ ಮಧ್ಯಪ್ರದೇಶ ಸರ್ಕಾರ.
Cnewstv.in / 13.11.2021/ ಮಧ್ಯಪ್ರದೇಶ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಪ್ರಧಾನಿ ಮೋದಿಯ 4 ಗಂಟೆ ಕಾರ್ಯಕ್ರಮಕ್ಕಾಗಿ 23 ಕೋಟಿ ರೂಪಾಯಿ ಖರ್ಚು ಮಾಡುತ್ತಿರುವ ಮಧ್ಯಪ್ರದೇಶ ಸರ್ಕಾರ. ಭೂಪಾಲ್ : ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಬುಡಕಟ್ಟು ಜನರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಮಧ್ಯಪ್ರದೇಶ ಸರ್ಕಾರ 23 ಕೋಟಿ ರೂಪಾಯಿಗಳನ್ನು ರೂಪಾಯಿ ಖರ್ಚು ಮಾಡುತ್ತಿದೆ. ಭಗವಾನ್ ಬಿಸಾ ಮುಂಡಾ ಅವರ ಸ್ಮರಣಾರ್ಥ ಮಧ್ಯಪ್ರದೇಶ ನವೆಂಬರ್ 15ರಂದು ಜಂಜಾಟಿಯ ಗೌರವ್ ದಿವಸ್ ಅನ್ನು ಆಚರಿಸಲಾಗುತ್ತಿದೆ. ಮಧ್ಯಪ್ರದೇಶದ ಜಾಂಬೂರಿ ಮೈದಾನದಲ್ಲಿ ನಡೆಯಲಿರುವ ಈ ...
Read More »ಕರ್ನಾಟಕ ನಕ್ಸಲ್ ನಾಯಕ ಬಿಜಿಕೆ ಮತ್ತು ಸಾವಿತ್ರಿ ಆರಸ್ಟ್
Cnewstv.in / 11.11.2021/ ಚಿಕ್ಕಮಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಚಿಕ್ಕಮಗಳೂರು ಮೂಲದ ಇಬ್ಬರು ಅರೆಸ್ಟ್. ಚಿಕ್ಕಮಗಳೂರು : ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಚಿಕ್ಕಮಂಗಳೂರು ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಕ್ಸಲ್ ವಲಯದಲ್ಲಿ ಬಿಜಿಕೆ ಎಂದೇ ಪ್ರಖ್ಯಾತರಾಗಿರುವ ಬಿಜಿ ಕೃಷ್ಣಮೂರ್ತಿ ಹಾಗೂ ಸಂಘಟನೆಯ ಕಬನಿದಳಂ ನ ಕಮಾಂಡರ್ ಆಗಿರುವ ಸಾವಿತ್ರಿ ಯವರನ್ನು ಬಂಧಿಸಲಾಗಿದೆ. ಕೃಷ್ಣಮೂರ್ತಿಯವರು ಶೃಂಗೇರಿ ಮೂಲದ ವ್ಯಕ್ತಿಯಾಗಿದ್ದು, ಸಾವಿತ್ರಿ ಅವರು ಚಿಕ್ಕಮಗಳೂರು ಜಿಲ್ಲೆ ಕಳಸ ಮೂಲದವರು. 2005ರಲ್ಲಿ ಸಾಕೇತ್ ರಾಜನ್ ಹತ್ಯೆ ನಂತರ ಅವರು ...
Read More »ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 13,091 ಗುಣಮುಖರಾದವರ ಸಂಖ್ಯೆ 13,878
Cnewstv.in / 11.11.2021/ ನವದೆಹಲಿ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 13,091 ಗುಣಮುಖರಾದವರ ಸಂಖ್ಯೆ 13,878 ನವದೆಹಲಿ : ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 13,091 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಕೊರೊನಾದಿಂದ 340 ಜನ ಸಾವನ್ನಪ್ಪಿದಾರೆ. 13,878 ಜನ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,38,556 ಇದೆ. ಈ ವರೆಗೆ ದೇಶಾದ್ಯಂತ ಕೋವಿಡ್ ...
Read More »ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 10,126. ಗುಣಮುಖರಾದವರ ಸಂಖ್ಯೆ 11,982
Cnewstv.in / 9.11.2021/ ನವದೆಹಲಿ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ದೇಶದಲ್ಲಿ ತಗ್ಗಿದ ಕೊರೊನಾ ಅಬ್ಬರ. ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 10,126. ಗುಣಮುಖರಾದವರ ಸಂಖ್ಯೆ 11,982 ನವದೆಹಲಿ : ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 10,126 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಕೊರೊನಾದಿಂದ 332 ಜನ ಸಾವನ್ನಪ್ಪಿದಾರೆ. 11,982 ಜನ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,40,638 ಇದೆ. ...
Read More »
C News TV Kannada News Online in cnewstv