ಚೆನೈ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹಸುವಿನ ಆಪರೇಷನ್ ಮಾಡಿದ ವೈದ್ಯರಿಗೆ ಶಾಕ್ ಕಾದಿತ್ತು. ಹಸುವಿನ ಹೊಟ್ಟೆಯ ಆಪರೇಷನ್ ಮಾಡಿದ ವೈದ್ಯರಿಗೆ ಅಲ್ಲಿ ಸಿಕ್ಕಿದ್ದು ಬರೋಬ್ಬರಿ 52 ಕೆಜಿ ಪ್ಲಾಸ್ಟಿಕ್. ಮುನಿರತ್ನಂ ಎಂಬುವರಿಗೆ ಸೇರಿದ ಹಸು ಹೊಟ್ಟೆ ನೋವಿನಿಂದ ಬಳಲುತ್ತಿತ್ತು. ಜೊತೆಗೆ ನೀಡುತ್ತಿದ್ದ ಹಾಲಿನ ಪ್ರಮಾಣವೂ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮುನಿರತ್ನ ಚಿಕಿತ್ಸೆಗಾಗಿ ಹಸುವನ್ನು ತಮಿಳುನಾಡು ಪಶುವೈದ್ಯಕೀಯ ಹಾಗೂ ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಕರೆತಂದಿದ್ದರು. ಈ ಹಸುವಿಗೆ ಡಾ.ವೇಲವನ್ ಆಪರೇಷನ್ ಮಾಡಿದಾಗ ಹಸುವಿನ ಹೊಟ್ಟೆಯ ಒಳಗೆ 52 ಕೆ.ಜಿ.ಪ್ಲಾಸ್ಟಿಕ್ ಸಿಕ್ಕಿದೆ. ಪ್ಲಾಸ್ಟಿಕ್ ಮಾತ್ರವಲ್ಲದೆ ಹಸುವಿನ ಹೃದಯದ ...
Read More »ಶಿವಮೊಗ್ಗ
ಹಳೆಮಂಡ್ಲಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ಶಿವಮೊಗ್ಗ: ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆಗಳ ಒಳಗೆ ನೀರು ನುಗ್ಗಿರುವ ಘಟನೆ ಶಿವಮೊಗ್ಗ ನಗರದ ನ್ಯೂ ಮಂಡ್ಲಿಯಲ್ಲಿ ನಡೆದಿದೆ. ಭಾರಿ ಮಳೆ ಸುರಿದಿದ್ದರಿಂದಾಗಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಆದರೆ ಇದೇ ಭಾಗದಲ್ಲಿ ಚರಂಡಿಗಳು ಹಾಗೂ ರಾಜಕಾಲುವೆಗಳನ್ನು ಕೆಲವರು ಬಂದ್ ಮಾಡಿದ್ದರಿಂದಾಗಿ ನೀರು ಹಳೆಮಂಡ್ಲಿಯ ತಗ್ಗು ಪ್ರದೇಶದಲ್ಲಿರುವ ಮೂವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ವಿಷಯ ತಿಳಿದ ಪಾಲಿಕೆ ಉಪಮೇಯರ್ ಎಸ್.ಎನ್.ಚನ್ನಬಸಪ್ಪ ಹಾಗೂ ಪಾಲಿಕೆ ಅಧಿಕಾರಿಗಳು ಜೆಸಿಬಿ ಮೂಲಕ ರಾಜಕಾಲುವೆಗಳನ್ನು ತೆರವುಗೊಳಿಸುವ ಮೂಲಕ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡಿದರು. ...
Read More »ಹುತಾತ್ಮರ ದಿನಾಚರಣೆ
ಶಿವಮೊಗ್ಗ: ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸರಿಗೆ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛವನ್ನಿರಿಸಿ ನಮನ ಸಲ್ಲಿಸಲಾಯಿತು ನ್ಯಾಯಾಧೀಶ ಆರ್.ಕೆ.ಜಿ.ಎಂ.ಎಂ.ಮಹಾಸ್ವಾಮೀಜಿ, ಜಿಲ್ಲಾರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು,ಎಎಸ್ ಪಿ ಶೇಖರ್ ಸ್ಮಾರಕಕ್ಕೆ ಹೂಚ್ಛವನ್ನಿಟ್ಟು ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ನ್ಯಾಯಾಧೀಶ ಆರ್.ಕೆ.ಜಿ.ಎಂ.ಎಂ.ಮಹಾಸ್ವಾಮೀಜಿ, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ ಸಂದರ್ಭದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುವ ಪೊಲೀಸರ ಸೇವೆಯನ್ನು ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು. ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ ರಕ್ಷಣೆ ಮಾಡುವಾಗ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಕರ್ತವ್ಯ ನಿರ್ವಹಿಸುವ ...
Read More »ಶಿವಮೊಗ್ಗ ನಗರದಲ್ಲಿ ಗಾಂಧಿ ಸಂಕಲ್ಪ ಯಾತ್ರೆ
ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಾದ್ಯಂತ ಬಿಜೆಪಿಯಿಂದ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ನಡೆದ ಗಾಂಧಿ ಸಂಕಲ್ಪಯಾತ್ರೆ ಇಂದು ಶಿವಮೊಗ್ಗ ನಗರದಲ್ಲಿ ನಡೆಯಿತು. ಬೆಳಗ್ಗೆ ಗುಡ್ಡೆಮರಡಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಸಂಸದ ರಾಘವೇಂದ್ರ ಪಾದಯಾತ್ರೆ ಆರಂಭಿಸಿದರು. ಬಳಿಕಬೈಪಾಸ್ ರಸ್ತೆ, ನ್ಯೂಮಂಡ್ಲಿ, ಎನ್.ಟಿ.ರಸ್ತೆ, ಆರ್ ಎಂಎಲ್ ನಗರ, ಬಸ್ ಸ್ಟಾಂಡ್‌ಮಾರ್ಗವಾಗಿ ಸಂಕಲ್ಪ ಯಾತ್ರೆ ನಡೆಯಿತು. ಗಾಂಧಿ ಸಂಕಲ್ಪ ಯಾತ್ರೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ ಸಾಥ್ ನೀಡಿದರು.
Read More »ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಎಸ್ ಪಿ
ಶಿವಮೊಗ್ಗ: ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಿದ ಎಸ್ ಪಿ ಶಾಂತರಾಜು ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು. ಶಿವಮೊಗ್ಗ ಉಪವಿಭಾಗದ 200 ಕ್ಕೂ ರೌಡಿಗಳ ಪರೇಡ್ ನಡೆಸಿದ ಎಸ್ ಪಿ ಪ್ರತಿಯೊಬ್ಬ ಅಪರಾಧ ಮಾಹಿತಿಯನ್ನು ಸಂಗ್ರಹಿಸಿದರು. ಜೊತೆಗೆ ಮುಂದೆ ಯಾವುದೇ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿದರೆ ಸುಮ್ಮನಿರುವುದಿಲ್ಲ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
Read More »ತೀರ್ಥಹಳ್ಳಿ ದಸರಾ ಮೆವಣಿಗೆಯಲ್ಲಿ ಕುಸಿದು ಬಿದ್ದು ವ್ಯಕ್ತಿ ಸಾವು
ಶಿವಮೊಗ್ಗ: ದಸರಾ ಮೆರವಣಿಗೆಯಲ್ಲಿ ಬರುತ್ತಿದ್ದ ವೃದ್ದರೊಬ್ಬರು ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ತೀರ್ಥಹಳ್ಳಿಯ ಸಂಜೀವ್ ಶೆಟ್ಟಿ(62) ಮೃತಪಟ್ಟವರು. ದಸರಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಇವರು ಎಲ್ಲರಂತೆ ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದರು. ಆದರೆ ಇದೇ ವೇಳೆ ಅಸ್ವಸ್ಥಗೊಂಡು ಸಂಜೀವ ಶೆಟ್ಟಿ ಕುಸಿದು ಬಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದವರು ನೀರು ಕುಡಿಸಿ ಉಪಚರಿಸಲು ಯತ್ನಿಸಿದರಾದರೂ ಅಷ್ಟರಲ್ಲಾಗಲೇ ಸಂಜೀವ ಶೆಟ್ಟಿ ಮೃತಪಟ್ಟಿದ್ದಾರೆ.
Read More »ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಚಾಲನೆ.
ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಡೆಯುತ್ತಿರುವ ದಸರಾ ಕಾರ್ಯಕ್ರಮದ ಒಂದು ಅಂಗವಾದ ಯುವ ದಸರಾ ಸಮಿತಿಯಿಂದ ಹೊನಲು ಬೆಳಕು ಕಬಡ್ಡಿ ಪಂದ್ಯಾವಳಿಯನ್ನು ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಶಿವಮೊಗ್ಗ ವಲಯದ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎಸ್. ಅರುಣ್ ಅವರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕೆ.ಇ. ಕಾಂತೇಶ್ ರವರು ಉದ್ಘಾಟಿಸಿದರು…ಸುಮಾರು 40 ಕ್ಕು ಹೆಚ್ಚು ಕಬಡ್ಡಿ ತಂಡಗಳು ಉಪಸ್ಥಿತರಿದ್ದರು.
Read More »ಸಿಗಂದೂರು ಬಳಿ ಲಾಂಚ್ ನಿಂದ ಶರಾವತಿ ನದಿಗೆ ಹಾರಿ ಅಪರಿಚಿತ ಆತ್ಮಹತ್ಯೆ- Exclusive video
ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಶಿವಮೊಗ್ಗ ಜಿಲ್ಲೆಯ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಶರಾವತಿ ಹಿನ್ನೀರಿನಲ್ಲಿ ಸಂಚರಿಸುವ ಲಾಂಚ್ ನಿಂದ ನೀರಿಗೆ ಹಾರಿ ಅಪರಿಚಿತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಂಚ್ ಅಂಬಾರಗೋಡ್ಲು ಕಡೆಯಿಂದ ಕಳಸವಳ್ಳಿಗೆ ಹೋಗುವಾಗ ಹಿನ್ನೀರಿನ ಮಧ್ಯೆ ಅಪರಿಚಿತ ವ್ಯಕ್ತಿ ಏಕಾಏಕಿ ನೀರಿಗೆ ಧುಮುಕಿದ್ದಾನೆ. ಲಾಂಚ್ ನ ಸಿಬ್ಬಂದಿ ಆತನನ್ನು ರಕ್ಷಿಸಲು ಪ್ರಯತ್ನಸಿದರಾದರೂ ಅಷ್ಟರಲ್ಲಾಗಲೇ ಆತ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದ್ದಾನೆ. ಮೃತನ ಶವಕ್ಕಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Read More »ಧಗ ಧಗನೆ ಹೊತ್ತಿ ಉರಿದ ಟವೆರಾ ಕಾರು, ಕಾರಿನಲ್ಲಿದ್ದ ಇಬ್ಬರು ಅಪಾಯದಿಂದ ಪಾರು.
ಸಾಗರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಕಾಸ್ಪಾಡಿ ಬಳಿ ಟವೆರಾ ಕಾರೊಂದು ಚಾಲನೆಯಲ್ಲಿದ್ದಾಗಲೇ ಬೆಂಕಿ ಕಾಣಿಸಿಕೊಂಡಿದೆ. ನಿನ್ನೆ ರಾತ್ರಿ 1.30 ಗಂಟೆಗೆ ಸುಮಾರಿಗೆ ಶಿವಮೊಗ್ಗದಿಂದ ಸಾಗರದ ಕಡೆ ಬರುತ್ತಿದ್ದ ಕಾರಿನಲ್ಲಿ ನಡೆದಿದೆ. ಘಟನೆಯಲ್ಲಿ ಟವೆರಾ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು,ಕಾರಿನಲ್ಲಿದ್ದ ಓರ್ವನಿಗೆ ಸಣ್ಣ ಪುಟ್ಟ ಸುಟ್ಟ ಗಾಯವಾಗಿದೆ. ಶಾರ್ಟ್ ಸರ್ಕ್ಯೂಟ್ ಘಟನೆಗೆ ಕಾರಣ ಎನ್ನಲಾಗಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳಾದ ವಿಲ್ಫ್ರೆಡ್,ಜೆ.ರವಿ,ಪ್ರಕಾಶ್,ರವಿಕುಮಾರ್,ಕುಮಾರಸ್ವಾಮಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಇಮ್ರಾನ್ ಸಾಗರ್
Read More »ಬ್ಯಾಂಕ್ ನಲ್ಲಿ ಇಟ್ಟ ಹಣ ಬಿಡಿಸಿಕೊಳ್ಳಲು ಗ್ರಾಹಕರ ಪರದಾಟ
ಶಿವಮೊಗ್ಗ: ಬ್ಯಾಂಕ್ ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲ ಎಂದರೆ ಬ್ಯಾಂಕ್ ನವರು ದಂಡ ಹಾಕುತ್ತಾರೆ. ಆದರೆ ಬ್ಯಾಂಕ್ ನಲ್ಲಿ ಡಿಪಾಸಿಟ್ ಇಟ್ಟಿರುವ ಹಣವನ್ನು ಬಿಡಿಸಿಕೊಳ್ಳಲು ಹೋದರೆ ಆ ಹಣವನ್ನು ಗ್ರಾಹಕರಿಗೆ ಕೊಡಲು ಸಾಧ್ಯವಿಲ್ಲ ಎನ್ನುವುದು ಎಷ್ಟರಮಟ್ಟಿಗೆ ಸರಿ. ಇಂಥದ್ದೊಂದು ಸಂದಿಗ್ಧ ಸ್ಥಿತಿಗೆ ಪಂಜಾಬ್ ಅಂಡ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ ಬಂದು ತಲುಪಿಗೆ. ಹೌದು ಇಂದು ಬೆಳಗ್ಗೆ ಈ ಬ್ಯಾಂಕ್ ನ ಗ್ರಾಹಕರಿಗೆ ಅಚ್ಚರಿ ಕಾದಿತ್ತು. ಬ್ಯಾಂಕ್ ನಲ್ಲಿ ತಾವು ಇಟ್ಟಿರುವ ಹಣದಲ್ಲಿ ತಮಗೆಷ್ಟು ಬೇಕೋ ಅಷ್ಟನ್ನು ಬಿಡಿಸಿಕೊಳ್ಳಲು ಹೋದ ಗ್ರಾಹಕರಿಗೆ ಬ್ಯಾಂಕ್ ಸಿಬ್ಬಂದಿ ...
Read More »
C News TV Kannada News Online in cnewstv