Breaking News

ಶಿವಮೊಗ್ಗ

ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಣೆ

ಶಿವಮೊಗ್ಗ : ಗರ್ಬಿಣಿ, ಬಾಣಂತಿಯರಿಗೆ, ಮಕ್ಕಳಿಗೆ ಸಮರ್ಪಕವಾಗಿ ಪೌಷ್ಠಿಕ ಆಹಾರ ಒದಗಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೇಂದ್ರ‌ಸರ್ಕಾರ ಡಿಜಿಟಲ್ ಇಂಡಿಯಾದ ಪೋಷಣ್ ಅಭಿಯಾನದ ಅಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಿಸಲಾಗಿತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯ 2439 ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತವಾಗಿ ಮೊಬೈಲ್ ವಿತರಿಸಲಾಯಿತು. ಪೇಪರ್‌ಲೆಸ್ ಆಫೀಸ್ ಕಾನ್ಸೆಪ್ಟ್ ಅಡಿ ಮೊಬೈಲ್ ವಿತರಿಸಲಾಗುತ್ತಿದೆ. ಕಾಮನ್ ಅಪ್ಲಿಕೇಷನ್ ಸಿಸ್ಟಮ್ ಹಾಗೂ ಸ್ನೇಹ ಆ್ಯಪ್ ಅಳವಡಿಸಿಕೊಂಡು ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಈ ಮೊಬೈಲ್ ಅನುಕೂಲವಾಗಲಿದೆ. ಸಂಸದ ಬಿ.ವೈ.ರಾಘವೇಂದ್ರ‌ ಹಾಗೂ ಜಿಲ್ಲಾ ಉಸ್ತುವಾರಿ ...

Read More »

ರಾಜ್ಯ ಕಾಂಗ್ರೆಸ್ ಗೆ ಸಚಿವ ಕೆ.ಎಸ್.ಈಶ್ವರಪ್ಪ ಸವಾಲು

  ಶಿವಮೊಗ್ಗ : ಕೃಷಿ ಮಸೂದೆ ಬಗ್ಗೆ ಮೊದಲು 2012ರಲ್ಲಿ ಚರ್ಚೆ ಮಾಡಿದ್ದೇ ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ. ರಾಜ್ಯ ಕಾಂಗ್ರೆಸ್ ನಾಯಕರಿಗೆ ತಾಕತ್ತಿದ್ದರೆ ಮನಮೋಹನ್ ಸಿಂಗ್ ಅವರನ್ನು ಪಕ್ಷದಿಂದ ಉಚ್ಛಾಟಿಸಲು ಕೇಂದ್ರ ಕಾಂಗ್ರೆಸ್ ಗೆ ಶಿಫಾರಸ್ಸು ಮಾಡಲಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಕಾಂಗ್ರೆಸ್ ಚರ್ಚಿಸಿದ್ದ ಮಸೂದೆಯನ್ನೇ‌ ಇಂದು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಆದರೆ ಈ ಮಸೂದೆ ಬಗ್ಗೆ ಇದೀಗ ಕಾಂಗ್ರೆಸ್ ನಾಯಕರು ಬೊಬ್ಬೆ ಹೊಡೆಯುತ್ತಿದ್ದಾರೆ.ಕೂಡಲೇ ರಾಜ್ಯದ ...

Read More »

ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಕಸ ವಿಲೇವಾರಿಗೆ ಸ್ವಚ್ಛ ಸಂಕೀರ್ಣ ಘಟಕ ಸ್ಥಾಪನೆ: ಕೆ.ಎಸ್.ಈಶ್ವರಪ್ಪ

  ಶಿವಮೊಗ್ಗ : ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಸ್ವಚ್ಛ ಸಂಕೀರ್ಣ ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಜಿಲ್ಲೆಯ 271ಗ್ರಾಮ ಪಂಚಾಯತ್‍ಗಳ ಪೈಕಿ 201 ಗ್ರಾಮ ಪಂಚಾಯತ್‍ಗಳಲ್ಲಿ ಸ್ವಚ್ಛ ಸಂಕೀರ್ಣ ಘಟಕ ಸ್ಥಾಪನೆಗೆ ಈಗಾಗಲೇ ಜಮೀನು ಗುರುತಿಸಲಾಗಿದ್ದು, ಕೆಲವು ಕಡೆಗಳಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಪ್ರತಿ ಗ್ರಾಮ ಪಂಚಾಯತ್‍ಗೆ ತಲಾ 20ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ತ್ಯಾಜ್ಯ ವಿಲೇವಾರಿ ಮಾತ್ರವಲ್ಲದೆ ಪ್ಲಾಸ್ಟಿಕ್‍ನಂತಹ ತ್ಯಾಜ್ಯಗಳನ್ನು ಮರು ಬಳಕೆ ಮಾಡುವ ...

Read More »

ಶಿವಮೊಗ್ಗದಲ್ಲಿ ಗಾಂಧೀಜಿ ಅವರ ಕುರುಹುಗಳೇನು ಗೊತ್ತಾ ??

  ಶಿವಮೊಗ್ಗ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ‌ ಮಹಾತ್ಮ ಗಾಂಧೀಜಿ ಶಿವಮೊಗ್ಗಕ್ಕೂ ಬಂದಿದ್ದರು.‌ ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ವಾರ ಪ್ರವಾಸ ಕೈಗೊಂಡಿದ್ದ‌ ಗಾಂಧೀಜಿ ಅವರು ಉಳಿಸಿಹೋಗಿರುವ ಕುರುಹುಗಳು ಇನ್ನೂ ಶಿವಮೊಗ್ಗದಲ್ಲಿವೆ. ಈ ಕುರುಹುಗಳನ್ನು ನೋಡಿದಾಗ ಮಹಾತ್ಮಾ ಗಾಂಧಿಜಿ ಮತ್ತೆ ಮತ್ತೆ ನಮಗೆ ನೆನಪಾಗುತ್ತಾರೆ. ಗಾಂಧಿಜಿ ಅವರು ಶಿವಮೊಗ್ಗದಲ್ಲಿ ಉಳಿಸಿರುವ ಕುರುಹುಗಳೇನು ಎಂಬ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ. ವಕೀಲ ದಿವಂಗತ ವೆಂಕಟಸುಬ್ಬ ಶಾಸ್ತ್ರಿ ಅವರ ಸತತ ಪ್ರಯತ್ನದ ಫಲವಾಗಿ ಮಹಾತ್ಮಾ‌ ಗಾಂಧೀಜಿ ಹಾಗೂ ಅವರ ಪತ್ನಿ ಕಸ್ತೂರ‌ ಬಾ ಅವರು 1927ರ ಆಗಸ್ಟ್ 14 ರಂದು ...

Read More »

ಮಾಸ್ಕ್ ಧರಿಸದವರಿಗೆ ದಂಡ‌ ಹಾಕುತ್ತಿರುವ ಪೊಲೀಸರು.

  ಶಿವಮೊಗ್ಗ : ಕರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಮಾಸ್ಕ್ ಬಳಕೆ ಮಾಡಿರುವ ರಾಜ್ಯ ಸರ್ಕಾರ ನಗರ ಪ್ರದೇಶಗಳಲ್ಲಿ ಮಾಸ್ಕ್ ಧರಿಸದವರಿಗೆ 1000 ರೂಪಾಯಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂಪಾಯಿ ದಂಡ ವಿಧಿಸಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲೂ ಪೊಲೀಸರು ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿ ಮಾಸ್ಕ್ ಧರಿಸದಿರುವ ಸಾರ್ವಜನಿಕರಿಗೆ ದಂಡ ವಿಧಿಸಲಾರಂಭಿಸಿದ್ದಾರೆ. ಶಿವಮೊಗ್ಗದಲ್ಲಿ ಪ್ರಾಯೋಗಿಕವಾಗಿ ಮಾಸ್ಕ್ ಧರಿಸದವರಿಗೆ 200 ರೂಪಾಯಿ ದಂಡ ವಿಧಿಸುತ್ತಿದ್ದಾರೆ. ಶಿವಮೊಗ್ಗದ ವಿವಿಧ ಸರ್ಕಲ್ ಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ಮಾಸ್ಕ್ ಧರಿಸದವರನ್ನು ನಿಲ್ಲಿಸಿ ದಂಡ ವಿಧಿಸಲಾಗುತ್ತಿದೆ. ನಾಳಿನಿಂದ ಯಾರು ...

Read More »

ಡ್ರಗ್ಸ್ ನಿಂದ ದೂರ ಇರುವಂತೆ ಯುವಜನರಿಗೆ ಎಚ್ಚರಿಕೆ‌ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ

      ಶಿವಮೊಗ್ಗ : ಡ್ರಗ್ಸ್ ಸೇವನೆ ಹಾಗೂ ಮಾರಾಟದಿಂದ ದೂರವಿರಿ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಿ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಯುವಜನರಿಗೆ ಎಚ್ಚರಿಕೆ‌ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಲವರು ವ್ಯಕ್ತಿಗಳು ಯುವಕರ ದಾರಿ ತಪ್ಪಿಸಿ ಅವರನ್ನು ಹಾಳು ಮಾಡುತ್ತಿದ್ದಾರೆ. ಕೆಲವರು ಡ್ರಗ್ಸ್ ಸೇವಿಸಿ ಹಾಗೂ ಮಾರಾಟ ಮಾಡಿ ಜೈಲಿಗೆ ಹೋಗುವುದನ್ನು ನಾವು ನೋಡುತ್ತಿದ್ದೇವೆ. ಯುವಜನತೆ ಡ್ರಗ್ಸ್ ನಿಂದ‌ ದೂರ ಇರಬೇಕು. ಆದರೆ ಇಂದು ಯುವನತೆ ಡ್ರಗ್ಸ್ ನಿಂದ ದಾರಿತಪ್ಪುತ್ತಿರುವುದು ಆತಂಕಕಾರಿ ಸಂಗತಿ. ಹೀಗಾಗಿ ಯುವಕರು ಡ್ರಗ್ಸ್ ಸೇವನೆ ...

Read More »

ದಂಡ ಹಾಕಿದ್ದಕ್ಕೆ ಪೊಲೀಸರ ಬೈಕನ್ನೇ ಕದ್ದ ಖದೀಮ.

  ಶಿವಮೊಗ್ಗ: ಮಾಸ್ಕ ಹಾಕದೆ ಓಡಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಹೊಸನಗರ ಠಾಣೆ ಪೊಲೀಸರು ದಂಡ ವಿಧಿಸಿದ್ದರು. ಆದರೆ ದಂಡ ಕಟ್ಟಿದ ಸಿಟ್ಟಿಗೆ ಆತ ಪೊಲೀಸರ ಬೈಕನ್ನೇ ಕದ್ದು ಪರಾರಿಯಾಗಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹೌದು ಚೇತನ್ ಎಂಬಾತ ಮಾಸ್ಕ್ ಹಾಕದೆ ಓಡಾಡುತ್ತಿದ್ದಾಗ ಪೊಲೀಸರು ಆತನನ್ನು ಹೊಸನಗರ ಪೊಲೀಸ್ ಠಾಣೆಗೆ ಕರೆತಂದು ದಂಡ ವಿಧಿಸಿದ್ದಾರೆ. ದಂಡ ಪಾವತಿಸಿ ಹೊರಬಂದ ಚೇತನ್ ಪೊಲೀಸ್ ಠಾಣೆ ಪಕ್ಕದಲ್ಲೇ ನಿಲ್ಲಿಸಿದ್ದ ಪೊಲೀಸ್ ಪೇದೆ‌ ರಾಘವೇಂದ್ರ ಅವರ ಬೈಕ್ ಕದ್ದು ಪರಾರಿಯಾಗಿದ್ದಾನೆ. ಈ ದೃಷ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಸಂಬಂಧ ...

Read More »

ಸಾಮಾಜಿಕ ಜಾಲತಾಣ ಸ್ಪರ್ಧೆಯಲ್ಲಿ ಶಿವಮೊಗ್ಗ ನಂಬರ್ ಓನ್

  ಶಿವಮೊಗ್ಗ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿಗಳಿಗೂ ಫೇಸ್ ಬುಕ್ ಪೇಜ್ ನಲ್ಲಿ ತಮ್ಮ ಹಿಂಬಾಲಕರನ್ನು ವೃದ್ಧಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ನಂಬರ್ ಓನ್ ಸ್ಥಾನಕ್ಕೆ ಏರಿದೆ. ಜುಲೈ 16 ರಿಂದ ಸೆಪ್ಟಂಬರ್ 15 ರವರೆಗಿನ ಅವಧಿಯಲ್ಲಿ ಯಾರು ಹೆಚ್ಚು ಫೇಸ್ ಬುಕ್ ಹಿಂಬಾಲಕರನ್ನು ಹೊಂದುತ್ತಾರೆಯೋ ಅವರು ಪ್ರಥಮ ಸ್ಥಾನ ಪಡೆಯುತ್ತಾರೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಘೋಷಿಸಿತ್ತು. ಅದರಂತೆ ಈ ಅವಧಿಯಲ್ಲಿ ಶಿವಮೊಗ್ಗ ಜಿಲ್ಲಾ ...

Read More »

ಭದ್ರಾ  ಅಧ್ಯಕ್ಷರಾಗಿ ಪವಿತ್ರಾ ರಾಮಯ್ಯ ಅಧಿಕಾರ ಸ್ವೀಕಾರ

  ಶಿವಮೊಗ್ಗ : ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬಿಜೆಪಿ ರೈತ ಮೋರ್ಚಾದ ಮುಖಂಡೆ ಪವಿತ್ರಾ ರಾಮಯ್ಯ ಅವರು ಅಧಿಕಾರ‌ ಸ್ವೀಕರಿಸಿದರು. ಇಂದು ಮಲವಗೊಪ್ಪದಲ್ಲಿರುವ ಭದ್ರಕಾಡಾ‌ ಕಚೇರಿ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಭದ್ರಕಾಡಾ ಅಧ್ಯಕ್ಷರಾಗಿ ಪವಿತ್ರಾ ರಾಮಯ್ಯ ಅಧಿಕಾರ ಸ್ವೀಕರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪವಿತ್ರ ರಾಮಯ್ಯ, ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕವಾಗಿ ನೀರು ಒದಗಿಸಲು ಕ್ರಮಕೈಗೊಳ್ಳಲಾಗುವುದು. ಅಲ್ಲದೆ ಅಚ್ಚುಕಟ್ಟು ಪ್ರದೇಶ ರೈತರ ಸಭೆ ನಡೆಸಿ ರೈತರ ಸಮಸ್ಯೆ ಆಲಿಸಿ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದರು.  

Read More »

ಎರಡು ಕೆಜಿ ಗಾಂಜಾ ವಶ.

ಶಿವಮೊಗ್ಗ: ಸ್ವಿಫ್ಟ್ ಕಾರಿನಲ್ಲಿ ಕಾರ್ಕಳದಿಂದ ತೀರ್ಥಹಳ್ಳಿಗೆ ಸಾಗಿಸುತ್ತಿದ್ದ ಎರಡು ಕೆಜಿ ಗಾಂಜಾವನ್ನು ತೀರ್ಥಹಳ್ಳಿ ಚೆಕ್ ಪೋಸ್ಟ್ ನಲ್ಲಿ ತೀರ್ಥಹಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಾಂಜಾ ಸಾಗಣೆ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ‌. ಕಾರ್ಕಳ ಮೂಲದ ಜೀಶನ್, ಜೀನತ್, ಜಬೀರ್, ಮುಬಾರಕ್ ಸ್ವಿಫ್ಟ್ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ತೀರ್ಥಹಳ್ಳಿ ಚೆಕ್ ಪೋಸ್ಟ್ ನಲ್ಲಿ ಸಿಕ್ಕಿಬಿದ್ದಿದ್ದಾರೆ. ಚೆಕ್ ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ ಮಾಡುವಾಗ ಗಾಂಜಾ ಪತ್ತೆಯಾಗಿದ್ದು, ಪೊಲೀಸರು ಗಾಂಜಾ ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »