Breaking News

Tag Archives: ಮಂಗನಕಾಯಿಲೆಗೆ ಮತ್ತೊಂದು ಬಲಿ

ಮಂಗನಕಾಯಿಲೆಗೆ ಮತ್ತೊಂದು ಬಲಿ

ಶಿವಮೊಗ್ಗ: ವಿಶ್ವದಾದ್ಯಂತ ಕರೋನಾ ವೈರಸ್ ತಲ್ಲಣ ಸೃಷ್ಟಿಸಿದ್ದರೆ ಮಲೆನಾಡಿನಲ್ಲಿ ಕರೋನಾ ಭೀತಿಯ ನಡುವೆ ಮಂನಗನಕಾಯಿಲೆ ಅಟ್ಟಹಾಸ ಮೆರೆಯುತ್ತಿದೆ. ಹೌದು ಮಂಗನಕಾಯಿಲೆಗೆ ಮಲೆನಾಡಿನಲ್ಲಿ ಮತ್ತೊಂದು ಬಲಿಯಾಗಿದೆ. ತೀರ್ಥಹಳ್ಳಿ ತಾಲೂಕು ಉಡುಕೆರೆ ಗ್ರಾಮದ ಸುಬ್ರಹ್ಮಣ್ಯ(53) ಮಂಗನಕಾಯಿಲೆಗೆ ಬಲಿಯಾಗಿದ್ದಾರೆ. ಒಂದುವಾರದ ಹಿಂದೆ ಸುಬ್ರಹ್ಮಣ್ಯ ಅವರಲ್ಲಿ ಕೆಎಫ್ ಡಿ ಕಾಣಿಸಿಕೊಂಡಿತ್ತು. ಅಂದಿನಿಂದಲೂ ಅವರು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ ಸುಬ್ರಹ್ಮಣ್ಯ ಮೃತಪಟ್ಟಿದ್ದಾರೆ. ಇದುವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನಕಾಯಿಲೆಗೆ ಐವರು ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಮೂವರು ಹಾಗೂ ಸಾಗರ ತಾಲೂಕಿನ ಇಬ್ಬರು ಮಹಾಮಾರಿ ಮಂಗನಕಾಯಿಲೆಗೆ ...

Read More »