ಸಾಗರ ತಾಲ್ಲೂಕಿನ ಆವಿನಹಳ್ಳಿ ಸಮೀಪ ಕಾಗೇಹಳ್ಳ ಹೊಸೂರು ಬಳಿ ಬೈಕ್ ಹಾಗೂ ಟೆಂಪೋ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಚಲಾಯಿಸುತ್ತಿದ್ದ ಜೆಪಿ ನಗರದ ಓಂಕಾರ್(21) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿಂಬದಿ ಕುಳಿತಿದ್ದ ನಂದೀಶ್(13) ಹಾಗೂ ನಂದನ್(14) ಗೆ ತೀವ್ರ ಪೆಟ್ಟಾಗಿದೆ.. ವರದಿ: ಇಮ್ರಾನ್
Read More »Tag Archives: Shimoga
ತಳ್ಳು ಗಾಡಿಗಳ ತೆರವು ವಿರೋಧಿಸಿ ಪ್ರತಿಭಟನೆ – ಟ್ರಾಫಿಕ್ ಜಾಮ್.
ಶಿವಪ್ಪನಾಯಕನ ವೃತ್ತದ ಸುತ್ತಮುತ್ತಲು ಹೂ, ಹಣ್ಣು-ತರಕಾರಿಗಳನ್ನು ಮಾರಾಟ ಮಾಡುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಈ ಹಿಂದೆ ಮಾರಾಟ ಮಾಡಬೇಡಿ ಎಂದು ಪದೇಪದೇ ಹೇಳಿದರು ಸಹ ಮಾರಾಟ ಮಾಡುವುದನ್ನು ಬಿಟ್ಟಿಲ್ಲ. ಇದರಿಂದ ವಾಹನಗಳ ಸಂಚಾರಕ್ಕೆ ಹಾಗೂ ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಸಂಚಾರಕ್ಕೆ ಅಡ್ಡಿಯಾಗಿದೆ ವ್ಯಾಪಾರಸ್ಥರನ್ನು ತೆರವುಗೊಳಿಸಲು ಪೊಲೀಸರು ಮುಂದಾಗಿದ್ದರು. ಈ ವೇಳೆ ವ್ಯಾಪಾರಿಗಳ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪರಿಣಾಮವಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಯಿತು.
Read More »ನ್ಯಾಚುರಲ್ ಫಿಲ್ಟರ್ : ದೇಹಕ್ಕೂ ತಂಪು – ನೋ ಸೈಡ್ ಎಫೆಕ್ಟ್ .
ನ್ಯಾಚುರಲ್ ಫಿಲ್ಟರ್ : ದೇಹಕ್ಕೂ ತಂಪು – ನೋ ಸೈಡ್ ಎಫೆಕ್ಟ್ . ಹಿಂದಿನ ಕಾಲದಲ್ಲಿ ಮಣ್ಣಿನ ಪಾತ್ರೆಗಳನ್ನು ಬಳಸಿ ಅಡುಗೆ ಮಾಡುವುದು ಮಣ್ಣಿನ ಮಡಿಕೆಯಲ್ಲಿ ನೀರು ಬಳಸುವುದು ಸಾಮಾನ್ಯವಾಗಿತ್ತು. ಆದರೆ ಬದಲಾದ ಕಾಲದಲ್ಲಿ ಮಣ್ಣಿನ ಪಾತ್ರೆಯ ಬಳಕೆ ಕಡಿಮೆಯಾಗಿ ಸ್ಟೀಲ್, ಅಲ್ಯೂಮಿನಿಯಂ, ಗಾಜು ಬಳಕೆಗೆ ಬಂದಿವೆ.. ಪ್ಲಾಸ್ಟಿಕ್ ಪಾತ್ರೆಯಲ್ಲಿ ನೀರು ತುಂಬಿಡುವುದರಿಂದ ರಾಸಾಯನಿಕಗಳು ಬಿಡುಗಡೆಯಾಗಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಕೆಲವರು ನೀರನ್ನು ಫ್ರಿಡ್ಜ್ ನಲ್ಲಿಟ್ಟು ತಂಪು ಮಾಡಿ ಕುಡಿತಾರೆ ಅಂತಹವರಿಗೆ ಶೀತ ಗ್ಯಾರಂಟಿ..ಅದರೆ ನೈಸರ್ಗಿಕವಾಗಿರುವ ಮಣ್ಣಿನ ಮಡಿಕೆಯಲ್ಲಿ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಉತ್ತಮ. ಮಣ್ಣಿನ ...
Read More »ಜಿಲ್ಲೆಯಲ್ಲಿ ಮತದಾನ ಮಾಡಿದ ಪ್ರಮುಖ ನಾಯಕರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಯು ಇಂದು ಬೆಳಿಗ್ಗೆ 7ಗಂಟೆಯಿಂದ ಆರಂಭವಾಗಿದ್ದು ಶಾಂತಿಯುತವಾಗಿ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯ ಪ್ರಮುಖ ನಾಯಕರುಗಳು ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಹಾಗೂ ಕುಟುಂಬಸ್ಥರು ಶಿಕಾರಿಪುರದಲ್ಲಿ ಮತ ಚಲಾಯಿಸಿದರು. ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ಹಾಗೂ ಕುಟುಂಬಸ್ಥರು ತಮ್ಮ ಸ್ವಗ್ರಾಮ ಕುಬಟೂರಿನಲ್ಲಮತ ಚಲಾಯಿಸಿದರು. ಕೆ ಎಸ್ ಈಶ್ವರಪ್ಪ ಹಾಗೂ ಕುಟುಂಬಸ್ಥರು ಸೈನ್ಸ್ ಮೈದಾನದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತ ಚಲಾಯಿಸಿದರು. ...
Read More »ಇಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಜಿಲ್ಲೆಯಲ್ಲಿ ಮತದಾನ ಜಾಗೃತಿ ಉಂಟು ಮಾಡಲು 19 ರಂದು ಬೆಳಗ್ಗೆ 11 ಗಂಟೆಯಿಂದ 1 ಗಂಟೆವರೆಗೆ ಮಕ್ಕಳ ಅಣಕು ಮತದಾನ ಕಾರ್ಯಕ್ರಮ ಆಯೋಜಿಸಲಾಗಿದೆ. 18 ವರ್ಷಕ್ಕಿಂತ ಮಕ್ಕಳು ಮತ ಚಲಾಯಿಸಬಹುದು. ಮಕ್ಕಳು ಯಾವುದಾದರೂ ಒಂದು ಗುರುತಿನ ಚೀಟಿ ತಂದಲ್ಲಿ ಅವರನ್ನು ಮತದಾರರ ಪಟ್ಟಿಗೆ ಸೇರಿಸಿ ಅಣಕು ಮತದಾನಕ್ಕೆ ಅವರಿಗೆ ಅವಕಾಶ ಮಾಡಿಕೊಡಲಾಗುವುದು. ಈ ಮೂಲಕ ಜನರಲ್ಲಿ ಮತದಾನ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.. ಜಿಲ್ಲೆಯಲ್ಲಿ ಹೆಚ್ಚಾದ ಮತದಾರರು: 28551 ಮತದಾರರು ...
Read More »ಜೆಡಿಎಸ್ ಜನರಿಗೆ ಮಾಡಿರುವ ಮೋಸಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ – ಶಾಸಕ ಕುಮಾರ್ ಬಂಗಾರಪ್ಪ,
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಾಸಕ ಕುಮಾರ್ ಬಂಗಾರಪ್ಪ, ಜೆಡಿಎಸ್ ನವರು ಅಬಂರೀಷ್ ಸಾವಿನಲ್ಲೂ ರಾಜಕಾರಣ ಮಾಡಿದ್ದರೆ. ರಾಜ್ಯದ ಜನರಿಗೂ ಮೋಸ ಮಾಡಿದ್ದಾರೆ. ಇವರು ಮಾಡಿರುವ ಮೋಸಕ್ಕೆ ತುಮಕೂರು, ಮಂಡ್ಯ ಹಾಸನ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.. ಇನ್ನು ಶಿವಮೊಗ್ಗ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ಒಬ್ಬ ಇಂಪೋರ್ಟೆಡ್ ಕ್ಯಾಂಡಿಡೇಟ್. ಆತ ಮಂಗನಕಾಯಿಲೆ ವಿಷಯದಲ್ಲೂ ರಾಜಕಾರಣ ಮಾಡುತ್ತಿದ್ದಾನೆ. ಮಧುಬಂಗಾರಪ್ಪನವರಿಗೆ ಲೂಟಿ ಮಾಡುವುದು ಹೇಗೆ ಎಂದು ಅವರಿಗೆ ಗೊತ್ತಿದೆ. ಶರಾವತಿ ಡೆಂಟಲ್ ಕಾಲೇಜು, ಬಗರ್ ಹುಕುಂ ನಲ್ಲೂ ಮಧುಬಂಗಾರಪ್ಪ ಲೂಟಿ ...
Read More »ರಾಘವೇಂದ್ರ 2 ಲಕ್ಷಕ್ಕೂ ಅಧಿಕ ಮತಗಳಿಂದ ಜಯ ಗಳಿಸುತ್ತಾರೆ – ಬಿಎಸ್ ವೈ.
ಶಿವಮೊಗ್ಗಕ್ಕೆ ಕಾಂಗ್ರೆಸ್ಸಿನಿಂದ ಯಾರು ಪ್ರಚಾರ ಬರ್ತಾರೋ ಬಿಡ್ತಾರೋ ಬಿಡ್ತಾರೋ, ಸರ್ಕಾರವೇ ಬಂದು ಶಿವಮೊಗ್ಗದಲ್ಲಿ ಪ್ರಚಾರ ಮಾಡಿದರು ರಾಘವೇಂದ್ರ ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಜಯ ಗಳಿಸುತ್ತಾರೆ .ಈ ಲೋಕಸಭಾ ಚುನಾವಣೆ ನಂತರ ರಾಜ್ಯ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ. ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಾಗ ತಮಿಳು ಸಮಾಜದ ಇಬ್ಬರು ಮುಖಂಡರಿಗೆ ನಿಗಮ ಮಂಡಳಿ ಅಧ್ಯಕ್ಷರನ್ನಾಗ ಮಾಡುತ್ತೇನೆ ಎಂದು ಭದ್ರಾವತಿಯಲ್ಲಿ ಮಾಧ್ಯಮದವರೊಂದಿಗೆ ಬಿಎಸ್ ಯಡಿಯೂರಪ್ಪನವರು ಹೇಳಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮಕೂರು, ಮಂಡ್ಯ ಹಾಸನದಲ್ಲಿ ಮೊದಲು ಗೆಲ್ಲಲಿ ಬಳಿಕ ಶಿವಮೊಗ್ಗ ಕ್ಷೇತ್ರದತ್ತ ಗಮನಹರಿಸಲಿ ಎಂದ ಬಿಎಸ್ ವೈ. ...
Read More »ಮಾನವೀಯತೆ ಮೆರೆದ ಟ್ರೆಡಿಷನಲ್ ಡೇ.
ಶಿವಮೊಗ್ಗ: ಕಾಲೇಜುಗಳ ಟ್ರಡಿಷನಲ್ ಡೇ ಎಂದರೆ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚುತ್ತಿರುತ್ತಾರೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮವೂ ಭರ್ಜರಿಯಾಗಿಯೇ ನಡೆಯುತ್ತದೆ. ವಿದ್ಯಾರ್ಥಿಗಳು ಈ ದಿನಗಾಗಿಯೇ ಕಾಯುತ್ತಿರುತ್ತಾರೆ…ಆದರೆ ಇವೆಲ್ಲವುಗಳೊಂದಿಗೆ ಸಾಮಾಜಿಕ ಜವಾಬ್ದಾರಿಯೊಂದಿಗೆ ಮಾನವೀಯತೆ ಮೆರೆದ ಶಿವಮೊಗ್ಗ ಎಟಿಎನ್ ಸಿ ಸಂಜೆ ಕಾಲೇಜಿನ ವಿದ್ಯಾರ್ಥಿಗಳು ಟ್ರಡಿಷನಲ್ ಡೆ ಗೆ ಹೊಸ ಭಾಷ್ಯವನ್ನೇ ಬರೆದಿದ್ದಾರೆ. ಎಟಿಎನ್ ಸಿ ಕಾಲೇಜಿನ ವಿದ್ಯಾರ್ಥಿಗಳು ಟ್ರಡಿಷನಲ್ ಡೆ ಹಾಗೂ ಯುಗಾದಿ ಹಬ್ಬದ ಅಂಗವಾಗಿ ತಮ್ಮ ಅಧ್ಯಾಪಕೊಂದಿಗೆ ಸೇರಿ ಅಕ್ಕಿ ಸಂಗ್ರಹಿಸಿ ಸಂಗ್ರಹವಾದ ಅಕ್ಕಿಯನ್ನು ತಾಯಿಮನೆ ಸಂಸ್ಥೆ ಗೆ ನೀಡಿ ಮಾನವೀಯತೆ ಮೆರೆದಿದ್ದಾರೆ…
Read More »ಶಿವಮೊಗ್ಗ ಲೋಕಸಭಾ ಚುನಾವಣಾ ಅಖಾಡದಲ್ಲಿ 14 ಅಭ್ಯರ್ಥಿಗಳು…
ಶಿವಮೊಗ್ಗ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಲು ಒಟ್ಟು 14 ಅಭ್ಯರ್ಥಿಗಳು 26 ನಾಮಪತ್ರಗಳನ್ನು ಸಲ್ಲಿಸಿದ್ದು 14 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರವಾಗಿದೆ.. ಇಬ್ಬರೂ ಮಾಜಿ ಮುಖ್ಯಮಂತ್ರಿ ಮಕ್ಕಳ ಪೈಪೋಟಿಯ ನಡುವೆಯೂ ಸಹ ಪ್ರತ್ಯೇಕ ಅಭ್ಯರ್ಥಿಗಳು ತಮ್ಮ ಗೆಲುವಿನ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.. ಶಿವಮೊಗ್ಗ ಲೋಕಸಭಾ ಚುನಾವಣೆಯ ಕಣದಲ್ಲಿ ಇರುವಂತಹ 14 ಅಭ್ಯರ್ಥಿಗಳ ವಿವರ.. ಅಭ್ಯರ್ಥಿಯ ಹೆಸರು ಮತ್ತು ಪಕ್ಷದ ಹೆಸರು 1. ಶೇಖರ್ ನಾಯ್ಕ್ – ಪಕ್ಷೇತರ 2.ಬಿ.ವೈ. ರಾಘವೇಂದ್ರ – ಬಿ.ಜೆ.ಪಿ 3.ಎಸ್ ಮಧು ಬಂಗಾರಪ್ಪ ...
Read More »ಪ್ರಜಾಕೀಯ ಪಕ್ಷ ದಿಂದ ಕಣಕ್ಕಿಳಿದ ಅಭ್ಯರ್ಥಿ
ಶಿವಮೊಗ್ಗ ಲೋಕಸಭಾ ಚುನಾವಣೆಗೆ ಈ ಬಾರಿ ಖ್ಯಾತ ಚಲನಚಿತ್ರ ನಟ ರಿಯಲ್ ಸ್ಟಾರ್ ಉಪೇಂದ್ರ ರವರ ಉತ್ತಮ ಪ್ರಜಾತೀಯ ಪಕ್ಷದಿಂದ ಶರಾವತಿ ನಗರ ವೆಂಕಟೇಶ್ ಕಣಕ್ಕಿಳಿದಿದೆ. ಇಂದು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ ವೆಂಕಟೇಶ್, ನಮ್ಮ ಪಕ್ಷ ಜನವೇ ಪ್ರಚಾರ ಮಾಡುವ ಪಕ್ಷ. ನಾವು ಕೇವಲ ಅವರ ಸೇವಕರು. ಈ ಬಾರಿ ಪ್ರಜ್ಞಾಪೂರ್ವಕ ನಾಗರಿಕರು ನಮಗೆ ಮತ ಹಾಕುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
Read More »
Recent Comments