ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಾಸಕ ಕುಮಾರ್ ಬಂಗಾರಪ್ಪ, ಜೆಡಿಎಸ್ ನವರು ಅಬಂರೀಷ್ ಸಾವಿನಲ್ಲೂ ರಾಜಕಾರಣ ಮಾಡಿದ್ದರೆ. ರಾಜ್ಯದ ಜನರಿಗೂ ಮೋಸ ಮಾಡಿದ್ದಾರೆ. ಇವರು ಮಾಡಿರುವ ಮೋಸಕ್ಕೆ ತುಮಕೂರು, ಮಂಡ್ಯ ಹಾಸನ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.. ಇನ್ನು ಶಿವಮೊಗ್ಗ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ಒಬ್ಬ ಇಂಪೋರ್ಟೆಡ್ ಕ್ಯಾಂಡಿಡೇಟ್. ಆತ ಮಂಗನಕಾಯಿಲೆ ವಿಷಯದಲ್ಲೂ ರಾಜಕಾರಣ ಮಾಡುತ್ತಿದ್ದಾನೆ.
ಮಧುಬಂಗಾರಪ್ಪನವರಿಗೆ ಲೂಟಿ ಮಾಡುವುದು ಹೇಗೆ ಎಂದು ಅವರಿಗೆ ಗೊತ್ತಿದೆ. ಶರಾವತಿ ಡೆಂಟಲ್ ಕಾಲೇಜು, ಬಗರ್ ಹುಕುಂ ನಲ್ಲೂ ಮಧುಬಂಗಾರಪ್ಪ ಲೂಟಿ ಮಾಡಿದ್ದಾರೆ.ಮಧುಬಂಗಾರಪ್ಪ ನಾನು ಸೋತರೂ ಶಕ್ತಿಶಾಲಿ, ಸೋತರೂ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ತಂದಿದ್ದೇನೆ ಎನ್ನುತ್ತಿದ್ದಾರೆ. ಸೋತರೂ ಅನುದಾನ ತರುತ್ತಾರೆ ಎಂದರೆ ಪದೇ ಪದೇ ಮಧುಬಂಗಾರಪ್ಪ ಅವರನ್ನು ಸೋಲಿಸಬೇಕು ಎಂದು ಕುಮಾರ್ ಬಂಗಾರಪ್ಪ ವಾಗ್ದಾಳಿ ನಡೆಸಿದರು.
C News TV Kannada News Online in cnewstv