ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಶಿವಮೊಗ್ಗ ಜಿಲ್ಲೆಯ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಶರಾವತಿ ಹಿನ್ನೀರಿನಲ್ಲಿ ಸಂಚರಿಸುವ ಲಾಂಚ್ ನಿಂದ ನೀರಿಗೆ ಹಾರಿ ಅಪರಿಚಿತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಂಚ್ ಅಂಬಾರಗೋಡ್ಲು ಕಡೆಯಿಂದ ಕಳಸವಳ್ಳಿಗೆ ಹೋಗುವಾಗ ಹಿನ್ನೀರಿನ ಮಧ್ಯೆ ಅಪರಿಚಿತ ವ್ಯಕ್ತಿ ಏಕಾಏಕಿ ನೀರಿಗೆ ಧುಮುಕಿದ್ದಾನೆ. ಲಾಂಚ್ ನ ಸಿಬ್ಬಂದಿ ಆತನನ್ನು ರಕ್ಷಿಸಲು ಪ್ರಯತ್ನಸಿದರಾದರೂ ಅಷ್ಟರಲ್ಲಾಗಲೇ ಆತ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದ್ದಾನೆ. ಮೃತನ ಶವಕ್ಕಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Read More »Tag Archives: Shivamogga
ಅಕ್ಟೋಬರ್ 1 ರಿಂದ DL, RC ಪತ್ರದಲ್ಲಿ ಬದಲಾವಣೆ – ಕೇಂದ್ರ ಸರ್ಕಾರ.
ಕೇಂದ್ರ ಸರ್ಕಾರವು ಹೊಸ ಮೋಟರ್ ವಾಹನ ಕಾಯ್ದೆ ಜಾರಿಗೆ ತಂದ ಬಳಿಕ ವಾಹನ ಚಾಲನೆ ಪರವಾನಗಿ ಪತ್ರ ಹಾಗೂ ದಾಖಲಾತಿಗಳಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಇಡೀ ದೇಶಾದ್ಯಂತ ಒಂದೇ ಮಾದರಿಯ DL ಹಾಗೂ RC ಪತ್ರವನ್ನು ನೀಡಲು ಮುಂದಾಗಿದೆ. ಹಳೆ ಮುದ್ರಣ ಶೈಲಿಯೂ ಬದಲಾಗಲಿದೆ. DL ಹಾಗೂ RC ಯನ್ನು ಮೈಕ್ರೋಚಿಪ್ ಹಾಗೂ ಕ್ಯೂಆರ್ ಕೋಡ್ ಮೂಲಕ ಅಳವಡಿಸಲಾಗುವುದು. ಈಗಾಗಲೇ ರಾಜ್ಯದ ಎಲ್ಲಾ ಟ್ರಾಫಿಕ್ ಪೊಲೀಸ್ ಠಾಣೆಗಳಿಗೆ ಟ್ರಾಕಿಂಗ್ ಉಪಕರಣಗಳನ್ನು ಕಳುಹಿಸಲಾಗಿದೆ. ಈ ಟ್ರಾಕಿಂಗ್ ಉಪಕರಣದ ಮುಖಾಂತರ ಯಾವುದೇ ವಾಹನಗಳ ಮಾಹಿತಿಯನ್ನು ...
Read More »ಬ್ಯಾಂಕ್ ನಲ್ಲಿ ಇಟ್ಟ ಹಣ ಬಿಡಿಸಿಕೊಳ್ಳಲು ಗ್ರಾಹಕರ ಪರದಾಟ
ಶಿವಮೊಗ್ಗ: ಬ್ಯಾಂಕ್ ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲ ಎಂದರೆ ಬ್ಯಾಂಕ್ ನವರು ದಂಡ ಹಾಕುತ್ತಾರೆ. ಆದರೆ ಬ್ಯಾಂಕ್ ನಲ್ಲಿ ಡಿಪಾಸಿಟ್ ಇಟ್ಟಿರುವ ಹಣವನ್ನು ಬಿಡಿಸಿಕೊಳ್ಳಲು ಹೋದರೆ ಆ ಹಣವನ್ನು ಗ್ರಾಹಕರಿಗೆ ಕೊಡಲು ಸಾಧ್ಯವಿಲ್ಲ ಎನ್ನುವುದು ಎಷ್ಟರಮಟ್ಟಿಗೆ ಸರಿ. ಇಂಥದ್ದೊಂದು ಸಂದಿಗ್ಧ ಸ್ಥಿತಿಗೆ ಪಂಜಾಬ್ ಅಂಡ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ ಬಂದು ತಲುಪಿಗೆ. ಹೌದು ಇಂದು ಬೆಳಗ್ಗೆ ಈ ಬ್ಯಾಂಕ್ ನ ಗ್ರಾಹಕರಿಗೆ ಅಚ್ಚರಿ ಕಾದಿತ್ತು. ಬ್ಯಾಂಕ್ ನಲ್ಲಿ ತಾವು ಇಟ್ಟಿರುವ ಹಣದಲ್ಲಿ ತಮಗೆಷ್ಟು ಬೇಕೋ ಅಷ್ಟನ್ನು ಬಿಡಿಸಿಕೊಳ್ಳಲು ಹೋದ ಗ್ರಾಹಕರಿಗೆ ಬ್ಯಾಂಕ್ ಸಿಬ್ಬಂದಿ ...
Read More »ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ರಾಣೆಬೆನ್ನೂರು ಅಭ್ಯರ್ಥಿ!
ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಇ.ಕಾಂತೇಶ್ ಅವರು ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆಯೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಹೌದು ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂದು ಕಾಂತೇಶ್ ಅಭಿಮಾನಿಗಳು ಒತ್ತಾಯಿಸಲಾರಂಭಿಸಿದ್ದಾರೆ. ಈ ಬಗ್ಗೆ ಪೇಸ್ ಬುಕ್ ನಲ್ಲಿ ರಾಣೆಬೆನ್ನೂರು ಬಿಜೆಪಿ ಅಭ್ಯರ್ಥಿ ಕಾಂತೇಶಣ್ಣ ಎಂಬ ಪೇಜನ್ನು ಓಪನ್ ಮಾಡಿದ್ದಾರೆ. ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದರೆ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ದಯವಿಟ್ಟು ಕಾಂತೇಶ್ ...
Read More »ಆಯುಷ್ಮಾನ್ ಭಾರತ ಜಾಥಾಗೆ ಚಾಲನೆ
ಶಿವಮೊಗ್ಗ: ಆಯುಷ್ಮಾನ್ ಭಾರತ ಪಾಕ್ಷಿಕ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಗೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಇಂದು ಚಾಲನೆ ನೀಡಿದರು. ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿ ಅವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೂ ಸೂಕ್ತ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೆ ತರಲಾಗಿದ್ದು ಜನಸಾಮನ್ಯರಿಗೆ ತಲುಪುವಂತೆ ಅಧಿಕಾರಿಗಳು ಶ್ರಮಿಸಬೇಕು ಎಂದು ಸಂಸದ ...
Read More »ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆರೋಗ್ಯ ಶಿಬಿರ ಆಯೋಜನೆ
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಶಿವಮೊಗ್ಗ ನಗರ ಬಿಜೆಪಿ ವತಿಯಿಂದ ಶಿವಮೊಗ್ಗ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ನಾರಾಯಣ ಹೃದಯಾಲಯ, ಸರ್ಜಿ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳ ಸಹಯೋಗದೊಂದಿಗೆ ನಗರ ಬಿಜೆಪಿ ಆಯೋಜಿಸಿದ್ದ ಆರೋಗ್ಯ ಶಿಬಿರಕ್ಕೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಂಸದ ರಾಘವೇಂದ್ರ, ಪ್ರಪಂಚ ಕಂಡ ಅಪ್ರತಿಮ ನಾಯಕ ಪ್ರಧಾನಿ ಮೋದಿಯವರು. ಅವರ ಜನ್ಮದಿನದ ಅಂಗವಾಗಿ ನಮ್ಮ ಸಂಘಟನೆ ರಾಷ್ಟ್ರಾಧ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ...
Read More »ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಗೆ ಸಿದ್ಧವಾದ ರಕ್ಷಣಾ ಇಲಾಖೆ
ನಾಳೆ ವಿಸರ್ಜನೆಗೊಳ್ಳುತ್ತಿರುವ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ಭರ್ಜರಿ ಸಿದ್ದತೆ ಮಾಡಿಕೊಂಡಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜು ಓರ್ವ ಎಸ್ಪಿ, ಮೂವರು ಎಎಸ್ಪಿ, 16 ಡಿವೈಎಸ್ಪಿ, 51 ಇನ್ಸ ಸ್ಪೆಕ್ಟರ್ ಅಂಡ್ ಸಬ್ ಇನ್ ಸ್ಪೆಕ್ಟರ್, 3000 ಕ್ಕೂ ಅಧಿಕ ಪೊಲೀಸ್ ತುಕಡಿ, 14 ಕೆ.ಎಸ್.ಆರ್.ಪಿ 13 ಡಿಎಆರ್, 200 ಹೆಚ್ಚುವರಿ ಸಿಸಿ ಕ್ಯಾಮೆರಾ, 3 ಡ್ರೋಣ್ ಅಳವಡಿಸಿಕೊಳ್ಳಲಾಗಿದೆ. 700 ಜನರನ್ನ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರನ್ನ ಗುರುತಿಸಿ ಅವರನ್ನ ವಿಚಾರಣೆ ನಡೆಸಲಾಗಿದೆ. ಈ ವಿಚಾರಣೆಯನ್ನ ...
Read More »ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಲಾಂಚ್ ಗಳ ನಡುವೆ ಡಿಕ್ಕಿ..
ಶಿವಮೊಗ್ಗ: ಸಾಗರ ತಾಲೂಕಿನ ಸಿಗಂದೂರು ಬಳಿಯ ಶರಾವತಿಯ ಹಿನ್ನೀರಿನಲ್ಲಿಎರಡು ಲಾಂಚ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ 500 ಕ್ಕುಹ ಹೆಚ್ಚು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶರಾವತಿ ಹಿನ್ನೀರಿನಲ್ಲಿ ಸಂಚರಿಸುವ ಶರಾವತಿ-1 ಹಾಗೂ ಶರಾವತಿ-2 ಲಾಂಚ್ ಗಳ ನಡುವೆ ಅಂಬಾರಗೋಡ್ಲು ದಡದ ಸಮೀಪ ಡಿಕ್ಕಿ ಸಂಭವಿಸಿದೆ. ಲಾಂಚ್ ಚಾಲಕರುಗಳ ನಿರ್ಲಕ್ಷವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಲಾಂಚ್ ಗಳ ಡಿಕ್ಕಿಯಲ್ಲಿ ಎರಡೂ ಲಾಂಚ್ ಗಳೂ ಜಖಂಗೊಂಡಿವೆ. ಆದರೆ ಸಂಚಾರ ನಡೆಸಲು ಯಾವುದೇ ಸಮಸ್ಯೆ ಇಲ್ಲದ ಹಿನ್ನೆಲೆಯಲ್ಲಿ ಅಪಘಾತದ ಬಳಿಕವೂ ಮತ್ತೆ ಸಂಚಾರ ಆರಂಭಿಸಿವೆ.
Read More »ಸಚಿವ ನಾಗೇಶ್ ಅಣಕು ಶವಯಾತ್ರೆ.
ಶಿವಮೊಗ್ಗ :ಬಂಜಾರ ತಾಂಡಗಳ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡುವುದಾಗಿ ಹೇಳಿಕೆ ನೀಡಿರುವ ಸಚಿವ ನಾಗೇಶ್ ವಿರುದ್ಧ ಶಿವಮೊಗ್ಗದಲ್ಲಿ ಭಾರಿ ಪ್ರತಿಭಟನೆ ನಡೆಸಲಾಯಿತು. ಶಿವಮೊಗ್ಗದ ಬಸ್ ನಿಲ್ದಾಣದಿಂದ ಗೋಪಿವೃತ್ತದವರೆಗೆ ಸಚಿವ ನಾಗೇಶ್ ಅವರ ಅಣಕು ಶವಯಾತ್ರೆ ನಡೆಸಿದ ಬಂಜಾರ ಸಮುದಾಯದವರು ಸಚಿವ ನಾಗೇಶ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಾಗೇಶ್ ಬಂಜಾರ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಕಾರರು ತಮಟೆ, ಚಟ್ಟದೊಂದಿಗೆ ನಾಗೇಶ್ ಅವರ ಅಣಕು ಶವಯಾತ್ರೆ ನಡೆಸಿದರು. ಬಳಿಕ ಗೋಪಿ ವೃತ್ತದಲ್ಲಿ ನಾಗೇಶ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದರು. ಬಳಿಕ ನಾಗೇಶ್ ...
Read More »ಮದ್ಯಪಾನ ಮಾಡಿದ್ದ ಕಾರು ಚಾಲಕನಿಗೆ ಬಿತ್ತು ಭಾರಿ ದಂಡ
ಶಿವಮೊಗ್ಗ: ಮದ್ಯಪಾನ ಮಾಡಿ ಕಾರು ಚಾಲನೆ ಮಾಡುತ್ತಿದ್ದ ಚಾಲಕನೊಬ್ಬ ದೊಡ್ಡ ಮೊತ್ತದ ದಂಡ ಪಾವತಿಸಿದ್ದಾನೆ. ನೂತನ ವಾಹನ ಕಾಯ್ದೆ ಅಡಿ ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಹೌದು ಸಂಚಾರ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬರು ಬರೋಬ್ಬರಿ 12 ಸಾವಿರ ರೂ. ದಂಡ ತೆತ್ತಿದ್ದಾರೆ. ಶಿಕಾರಿಪುರದ ವ್ಯಕ್ತಿಯೊಬ್ಬರಿಗೆ ಶಿವಮೊಗ್ಗದ 3ನೇ ಜೆಎಂಎಫ್‌ಸಿ ನ್ಯಾಯಾಲಯವು 12 ಸಾವಿರ ರೂ. ದಂಡ ವಿಧಿಸಿದೆ. ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಪ್ರಕರಣದಲ್ಲಿ ಗುರುವಾರ ರಾತ್ರಿ ವ್ಯಕ್ತಿಯೊಬ್ಬರು ಕಾರು ಚಲಾಯಿಸುತ್ತಿದ್ದರು. ಈ ವೇಳೆ ಸಂಚಾರ ಪೊಲೀಸರು ವಾಹನ ತಡೆದು ತಪಾಸಣೆ ...
Read More »
Recent Comments