Breaking News

RSS ಗೆ ಪ್ರಶ್ನೆ ಮಾಡಿದರೆ ಬಿಜೆಪಿಯವರು ಯಾಕೆ ಎದೆ ಬಡಿದುಕೊಳ್ಳುತ್ತೀರಿ ?? RSS ನಾಯಕರಿಗೆ ಓದು-ಬರಹ ಗೊತ್ತಿಲ್ಲವೇ ?? – ಸಿದ್ದರಾಮಯ್ಯ..

Cnewstv.in / 29.05.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

RSS ಗೆ ಪ್ರಶ್ನೆ ಮಾಡಿದರೆ ಬಿಜೆಪಿಯವರು ಯಾಕೆ ಎದೆ ಬಡಿದುಕೊಳ್ಳುತ್ತೀರಿ ?? RSS ನಾಯಕರಿಗೆ ಓದು-ಬರಹ ಗೊತ್ತಿಲ್ಲವೇ ?? – ಸಿದ್ದರಾಮಯ್ಯ..

ಬೆಂಗಳೂರು : RSS, ಬಿಜೆಪಿ, ಕಾಂಗ್ರೆಸ್ ನವರ ನಡುವಿನ ವಾಕ್ ಸಮರ ಮುಂದುವರೆದಿದೆ. ಇಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಣಿ ಟ್ವೀಟ್ ಮೂಲಕ RSS ಹಾಗೂ ಜೆಪಿಯವರನ್ನು ಪ್ರಶ್ನೆ ಮಾಡಿದ್ದಾರೆ.

RSS ಸಂಸ್ಥೆಗೆ ಪ್ರಶ್ನೆ ಮಾಡಿದರೆ ಬಿಜೆಪಿಯವರು ಯಾಕೆ ಎದೆ ಬಡಿದುಕೊಳ್ಳುತ್ತಾರೆ ? RSS ನಾಯಕರಿಗೆ ಓದು-ಬರಹ ಗೊತ್ತಿಲ್ಲವೇ ? ಅವರೇ ಉತ್ತರಿಸಲಿ‌..

RSS ನಾಯಕರು ಅಸ್ಪೃಶ್ಯತೆ, ಅಸಮಾನತೆ ಮತ್ತು ಮೂಢನಂಬಿಕೆಯ ವಿಷಯಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಹಿಂದೂ ಧರ್ಮದ ಸಾಮಾಜಿಕ ಅನಿಷ್ಟಗಳನ್ನು ಪ್ರಶ್ನಿಸುವುದು ಹಿಂದೂ ವಿರೋಧಿ ಎಂದು ಬ್ರಾಂಡ್ ಮಾಡಲು ಕಾರಣವಾದರೆ, ಅದೇ ಕೆಲಸವನ್ನು ಮಾಡಿದ ಸ್ವಾಮಿ ವಿವೇಕಾನಂದ, ಕನಕದಾಸ ಮತ್ತು ನಾರಾಯಣ ಗುರುಗಳನ್ನು ಏನೆಂದು ಕರೆಯುತ್ತೀರಿ?

RSS ನಾಯಕರು ತಮ್ಮ ನಿಷ್ಠೆಯ ಬಗ್ಗೆ ಶುದ್ಧರಾಗಿರಬೇಕೆಂದು ನಾನು ಒತ್ತಾಯಿಸುತ್ತೇನೆ. ನೀವು ತ್ರಿವರ್ಣ ಧ್ವಜ ಅಥವಾ ಕೇಸರಿ ಧ್ವಜಕ್ಕೆ ನಿಷ್ಠರಾಗಿದ್ದೀರಾ? ನೀವು ಸಂವಿಧಾನ ಅಥವಾ ಮನು ಸ್ಮೃತಿಗೆ ನಿಷ್ಠರೇ? ನೀವು ಗಾಂಧೀಜಿ ಅಥವಾ ಗೋಡ್ಸೆಗೆ ನಿಷ್ಠರಾಗಿದ್ದೀರಾ?

RSS ಪ್ರಕಾರ ಒಬ್ಬ ಹಿಂದೂ ಎಂದು ಹೇಗೆ ಗುರುತಿಸಲಾಗುತ್ತದೆ? ಹಿಂದೂ ತಂದೆ ತಾಯಿಗೆ ಹುಟ್ಟಿದರೆ ಸಾಕೆ? ಅಥವಾ ಒಬ್ಬರು BJP ಸದಸ್ಯರಾಗಬೇಕೇ? ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

ಇದನ್ನು ಒದಿ : https://cnewstv.in/?p=9993

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*