ಹುಲಿಯನ್ನು ಬೋನಿನಲ್ಲಿ ಕೂಡಿ ಹಾಕಿಟ್ಟರೂ ಅದು ಹೊಟ್ಟೆ ಹಸಿದಿದೆ ಎಂದು ಹುಲ್ಲು ತಿನ್ನುವುದಿಲ್ಲ – ಬಿ.ವೈ. ವಿಜಯೇಂದ್ರ
Cnewstv.in / 29.05.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಹುಲಿಯನ್ನು ಬೋನಿನಲ್ಲಿ ಕೂಡಿ ಹಾಕಿಟ್ಟರೂ ಅದು ಹೊಟ್ಟೆ ಹಸಿದಿದೆ ಎಂದು ಹುಲ್ಲು ತಿನ್ನುವುದಿಲ್ಲ – ಬಿ.ವೈ. ವಿಜಯೇಂದ್ರ
ಬೆಂಗಳೂರು : ಹುಲಿಯನ್ನು ಬೋನಿನಲ್ಲಿ ಕೂಡಿ ಹಾಕಿಟ್ಟರೂ ಅದು ಹೊಟ್ಟೆ ಹಸಿದಿದೆ ಎಂದು ಹುಲ್ಲು ತಿನ್ನುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಹೊಳೆನರಸೀಪುರದಲ್ಲಿ ನೆನ್ನೆ ನಡೆದ ಬಸವೇಶ್ವರರ 889ನೇ ಹಾಗೂ ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಹುಲಿ ಎಂದಿಗೂ ಹುಲಿಯೇ. ಅದು ಬೇಟೆ ಆಡುವುದನ್ನು ಬಿಡುವುದಿಲ್ಲ’ ಎಂದಿರುವುದು ಕುತೂಹಲ ಕೆರಳಿಸಿದೆ.
ನಮ್ಮ ವೀರಶೈವ-ಲಿಂಗಾಯತರು ಎಂದೆಂದಿಗೂ ಹುಲಿಗಳೇ ಎಂಬುದನ್ನು ಮತ್ತೊಮ್ಮೆ ಹೇಳಬೇಕಿಲ್ಲ ಎಂದ ಅವರು ಕೊನೆಗೆ “ಈ ಸಮಾರಂಭದಲ್ಲಿ ರಾಜಕೀಯ ಮಾತನಾಡುವುದು ಸರಿಯಲ್ಲ’ ಎಂದು ಹೇಳಿ ಸುಮ್ಮನಾದರು.
12ನೇ ಶತಮಾನದಲ್ಲಿ ಎಲ್ಲ ಶೋಷಿತ ವರ್ಗದವರಿಗೂ ಸಮಾಜದಲ್ಲಿ ಸ್ಥಾನಮಾನ ಕಲ್ಪಿಸಿದ ಗುರು ಬಸವಣ್ಣ. ಅದೇ ರೀತಿ ಯಡಿಯೂರಪ್ಪ ರಾಜ್ಯದ ಶೋಷಿತ ವರ್ಗಗಳು, ಮಹಿಳೆಯರಿಗೆ ಸಹಾಯ ಹಸ್ತ ಚಾಚಿ ಸಮಾಜದ ಮುಖ್ಯ ವಾಹಿನಿಗೆ ತಂದ ಧೀಮಂತ ನಾಯಕ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಬಸವಣ್ಣ ಅವರ ಆದರ್ಶಗಳು ಮೋದಿ ಅವರಿಗೂ ಪ್ರೇರಣೆಯಾಗಿವೆ. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿ ನಾಡಿನ ಏಳಿಗೆಗೆ ಕಾರಣರಾದವರು. ನಾನು ಅವರ ಪುತ್ರನಾಗಿರುವುದಕ್ಕೆ ಹೆಮ್ಮೆ ಇದೆ.

ವಿಧಾನ ಪರಿಷತ್ ಟಿಕೆಟ್ ಕೈತಪ್ಪಿರುವ ಬಗ್ಗೆ ಸಾಕಷ್ಟುಚರ್ಚೆ ಆಗಿದೆ. ಮತ್ತೆ ಮತ್ತೆ ಅದನ್ನೇ ಮಾತನಾಡುವುದರಲ್ಲಿ ಅರ್ಥ ಇಲ್ಲ. ಟಿಕೆಟ್ ಕೈತಪ್ಪಿದ್ದಕ್ಕೆ ನನಗೆ ಯಾವುದೇ ಬೇಸರ ಇಲ್ಲ. ಟಿಕೆಟ್ ಕೊಟ್ಟರೆ ಮುಂಬರುವ ವಿಧಾನಸಭಾ ಚುನಾವಣೆಗೆ ಎದುರಿಸಲು ಸಿದ್ಧನಿದ್ದೇನೆ. ಇಲ್ಲದಿದ್ದರೆ ಪಕ್ಷಕ್ಕಾಗಿ ದುಡಿಯುತ್ತೇನೆ. ರಾಜ್ಯ ನಾಯಕರು, ಕೇಂದ್ರ ನಾಯಕರು ಏನು ಆದೇಶ ಮಾಡುತ್ತಾರೋ ಅದನ್ನು ಪರಿಪಾಲನೆ ಮಾಡುತ್ತೇನೆ. ಎಲ್ಲವೂ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದರು.
ಇದನ್ನು ಒದಿ : https://cnewstv.in/?p=9990
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ಹುಲಿಯನ್ನು ಬೋನಿನಲ್ಲಿ ಕೂಡಿ ಹಾಕಿಟ್ಟರೂ ಅದು ಹೊಟ್ಟೆ ಹಸಿದಿದೆ ಎಂದು ಹುಲ್ಲು ತಿನ್ನುವುದಿಲ್ಲ - ಬಿ.ವೈ. ವಿಜಯೇಂದ್ರ 2022-05-29