Breaking News

ಸರ್ಕಾರಿ ನೌಕರರಿಗೆ, ಎಸಿಬಿ ಅಧಿಕಾರಿಗಳೆಂದು ವಂಚಿಸುತ್ತಿದ್ದ ಕದೀಮರ ಬಂಧನ.

Cnewstv.in / 28.05.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಸರ್ಕಾರಿ ನೌಕರರಿಗೆ, ಎಸಿಬಿ ಅಧಿಕಾರಿಗಳೆಂದು ವಂಚಿಸುತ್ತಿದ್ದ ಕದೀಮರ ಬಂಧನ.

ಬೆಂಗಳೂರು : ಸರ್ಕಾರಿ ನೌಕರರನ್ನು ಟಾರ್ಗೆಟ್ ಮಾಡಿ ಎಸಿಬಿ ಅಧಿಕಾರಿಗಳೆಂದು ವಂಚಿಸುತ್ತಿದ್ದ ಕದೀಮರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಾದ ಮುರಿಗೆಪ್ಪಾ ನಿಂಗಪ್ಪ ಕುಂಬಾರ (55) ಹಾಗೂ ರಜನಿಕಾಂತ್ (46) ಎಸಿಬಿ ಅಧಿಕಾರಿಗಳು ಎಂದು ಹೇಳಿಕೊಂಡು ಸರಕಾರಿ ನೌಕರರಿಗೆ ಬೆದರಿಕೆ ಹಾಕಿ ತಮ್ಮ ಖಾತೆಗಳಿಗೆ ಹಣವನ್ನು ಹಾಕಿಸಿಕೊಳ್ಳುತ್ತಿದ್ದರು.

ಮುರಿಗೆಪ್ಪಾ ನಿಂಗಪ್ಪ ವಿರುದ್ಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 40 ಪ್ರಕರಣಗಳು ಹಾಗೂ ರಜನಿಕಾಂತ್ ವಿರುದ್ಧ 6 ಪ್ರಕರಣಗಳು ದಾಖಲಾಗಿದ್ದವು. ಇಂದು ಬೆಳಗ್ಗೆ ಹಾಸನ ಪೊಲೀಸರು ಇವರಿಬ್ಬರನ್ನೂ ಬಂಧಿಸಿದ್ದಾರೆ

ಇದನ್ನು ಒದಿ : https://cnewstv.in/?p=9975

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*