Breaking News

ಸಿದ್ದರಾಮಯ್ಯ ಒಬ್ಬ ಅಲೆಮಾರಿ..ಅರ್ ಎಸ್ಎಸ್ ಬಗ್ಗೆ ಕಲ್ಪನೆಯೇ ಇಲ್ಲ : ಕೆ.ಎಸ್. ಈಶ್ವರಪ್ಪ.

Cnewstv.in / 27.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಸಿದ್ದರಾಮಯ್ಯ ಒಬ್ಬ ಅಲೆಮಾರಿ..ಅರ್ ಎಸ್ಎಸ್ ಬಗ್ಗೆ ಕಲ್ಪನೆಯೇ ಇಲ್ಲ : ಕೆ.ಎಸ್. ಈಶ್ವರಪ್ಪ.

ಶಿವಮೊಗ್ಗ : RSS ನವರು ಈ ದೇಶದವರು ಅಲ್ಲ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೆ.ಎಸ್ ಈಶ್ವರಪ್ಪನವರು ತಿರುಗೇಟು ನೀಡಿದ್ದಾರೆ.‌

ಸಿದ್ದರಾಮಯ್ಯನವರು ಒಂದು ಬಾರಿ ಒಂದು ಬಾರಿ ಚಾಮುಂಡೇಶ್ವರಿಯಲ್ಲಿ ನಿಂತುಕೊಳ್ಳುತ್ತಾರೆ ಮತ್ತೊಂದು ಬಾರಿ ಬಾದಾಮಿಯಲ್ಲಿ ನಿಂತುಕೊಳ್ಳುತ್ತಾರೆ, ಮುಂದಿನ ಬಾರಿ ಎಲ್ಲಿ ನಿಂತು ಕೊಳ್ಳುತ್ತಾರೋ ಗೊತ್ತಿಲ್ಲ.‌ ಅಲೆಮಾರಿಗೆ ಆರ್ ಎಸ್ಎಸ್ ಬಗ್ಗೆ ಕಲ್ಪನೆಯೇ ಇಲ್ಲ.‌ ನಾವೆಲ್ಲರೂ ಕೂಡ‌ RSS ನಿಂದ ಬೆಳೆದುಬಂದ ಸ್ವಯಂಸೇವಕರು. ನಾವು ಈ ದೇಶದವರು ಅಲ್ಲವಾ ?? ಈ ದೇಶವನ್ನು ಉಳಿಸುತ್ತಿರುವ ಒಂದು ವಿಶೇಷವಾದ ಸಂಘಟನೆಯ ಎಂದರೆ ಅದು RSS.

ಕಾಂಗ್ರೆಸ್ ಪಕ್ಷ ಇಂದು ವಿದೇಶಿಗಳ ಕೈಯಲ್ಲಿದೆ..

ಈ ದೇಶದ ಎಲ್ಲ ಭಾರತೀಯರು ಕೂಡ ರಾಷ್ಟ್ರಭಕ್ತರಾಗಿರಬೇಕು ಎಂದು ಪ್ರತಿಯೊಬ್ಬ ವ್ಯಕ್ತಿನಲ್ಲೂ ಕೂಡ ರಾಷ್ಟ್ರಭಕ್ತಿಯ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತಿರುವ ಸಂಸ್ಥೆ ಎಂದರು.. ಆದರೆ ಈ ಕಾಂಗ್ರೆಸ್ ಪಕ್ಷ ಇಂದು ವಿದೇಶಿಗಳ ಕೈಯಲ್ಲಿದೆ.‌ RSS ರಾಷ್ಟ್ರಭಕ್ತ ಹಿಂದುಸ್ತಾನದಲ್ಲಿ ಇರುವಾಗ ರಾಷ್ಟ್ರ ಭಕ್ತರನ್ನು ನಿರ್ಮಾಣ ಮಾಡ್ತಾ ಇದೆ. ಇಟಲಿಯ ಪ್ರೇರಿತ ವ್ಯಕ್ತಿಗಳು ಕಾಂಗ್ರೆಸ್ ಪಕ್ಷವನ್ನೇ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯನವರಿಗೆ ಕಲ್ಪನೆಯೇ ಇಲ್ಲದ ಅಲೆಮಾರಿ ಎಂದರು..

ಇದನ್ನು ಒದಿ : https://cnewstv.in/?p=9964

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*