ಜೈಲ್ ರಸ್ತೆಯಲ್ಲಿ ಅಪ್ರಾಪ್ತ ಬಾಲಕಿ ಅಪಹರಣ.
Cnewstv.in / 27.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಜೈಲ್ ರಸ್ತೆಯಲ್ಲಿ ಅಪ್ರಾಪ್ತ ಬಾಲಕಿ ಅಪಹರಣ.
ಶಿವಮೊಗ್ಗ: ನಗರದ ಜೈಲ್ ರಸ್ತೆ ಕೃಷ್ಣಪ್ಪ ಕಾಂಪೌಂಡಿನಿಂದ ನಿನ್ನೆ ಸಂಜೆ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಿಸಿರುವ ಘಟನೆ ವರದಿಯಾಗಿದೆ.
ಬೆಂಗಳೂರಿನ ಕೆ. ಪಿ. ಅಗ್ರಹಾರದ ಲಿಂಗರಾಜು ಅಲಿಯಾಸ್ ವಿರಾಟ್ ಅಲಿಯಾಸ್ ರಾಜು ತಂದೆ ಲಕ್ಷ್ಮೀನಾರಾಯಣ ಎನ್ನುವ 26 ರ ಯುವಕ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಬಾಲಕಿಯು 5.15 ಅಡಿ ಎತ್ತರ, ಸಾಮಾನ್ಯ ಕಪ್ಪು ಬಣ್ಣದ ಕೂದಲು, ಗೋಧಿ ಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖಹೊಂದಿರುವ ಈಕೆ ಕನ್ನಡ ಮಾತನಾಡುತ್ತಾಳೆ. ಯುವಕನು 5.5 ಅಡಿ ಎತ್ತರವಿದ್ದು, ದುಂಡು ಮುಖ, ಕಪ್ಪು ಕಣ್ಣು, ಎಣ್ಣೆಗೆಂಪು ಬಣ್ಣ, ಚಿಗುರು ಗಡ್ಡ ಮತ್ತು ಮೀಸೆ ಬಿಟ್ಟಿರುತ್ತಾನೆ. ಎಡಗೈ ಮತ್ತು ಬಲಗೈನ ಮೊಣಕೈ ಮೇಲೆ ಗಾಯದ ಗುರುತಿದೆ. ಕನ್ನಡ ಮತ್ತು ತೆಲುಗು ಮಾತನಾಡುತ್ತಾನೆ.
ಇವರು ಪತ್ತೆಯಾದಲ್ಲಿ ಶಿವಮೊಗ್ಗ ಮಹಿಳಾ ಠಾಣೆ 08182-223210, ಮಹಿಳಾ ಇನ್ಸ್ಪೆಕ್ಟರ್- 9480803349 ಇವರನ್ನು ಸಂಪರ್ಕಿಸಬಹುದು.
ಇದನ್ನು ಒದಿ : https://cnewstv.in/?p=9950
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

ಜೈಲ್ ರಸ್ತೆಯಲ್ಲಿ ಅಪ್ರಾಪ್ತ ಬಾಲಕಿ ಅಪಹರಣ. 2022-05-27