Breaking News

ಉಚಿತ/ರಿಯಾಯಿತಿ ಬಸ್‍ಪಾಸ್ ವಿತರಣೆಗೆ ಅರ್ಜಿ ಆಹ್ವಾನ.

Cnewstv.in / 24.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಉಚಿತ/ರಿಯಾಯಿತಿ ಬಸ್‍ಪಾಸ್ ವಿತರಣೆಗೆ ಅರ್ಜಿ ಆಹ್ವಾನ.

ಶಿವಮೊಗ್ಗ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಶಿವಮೊಗ್ಗ ವಿಭಾಗದಿಂದ 2022-23 ನೇ ಸಾಲಿನ ‘ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್‍ಪಾಸ್’ಗಳನ್ನು ಸೇವಾಸಿಂಧು ಪೋರ್ಟಲ್(ಆನ್‍ಲೈನ್)ನಲ್ಲಿ ವಿತರಿಸಲು ಮೇ 23 ರಿಂದ ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸುವಾಗ ಸಂಬಂಧಪಟ್ಟ ದಾಖಲೆಗಳನ್ನು ಅಪ್‍ಲೋಡ್ ಮಾಡುವುದು ಕಡ್ಡಾಯವಾಗಿದೆ. ಜೊತೆಗೆ ಭೌತಿಕವಾಗಿ ಬಸ್‍ಪಾಸ್‍ಗಳನ್ನು ಪಡೆಯಲು ಬಂದಾಗ ಮೂಲ ದಾಖಲೆಳು ಹಾಗೂ ಜೆರಾಕ್ಸ್ ಪ್ರತಿಯನ್ನು ಹಾಜರುಪಡಿಸಿ ಪಾಸ್‍ಗಳನ್ನು ಪಡೆಯಬೇಕು.

ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸುವಾಗ ಖಾಯಂ ವಿಳಾಸ ದಾಖಲಾತಿ(ಆಧಾರ್), ಶಾಲಾ/ಕಾಲೇಜಿನ 2022-23 ನೇ ಸಾಲಿನ ಪ್ರವೇಶ ರಸೀದಿ, ನಾನ್ ಸಾಟ್ಸ್ì(Non SATS) ವಿದ್ಯಾರ್ಥಿಗಳು ಕಡ್ಡಾಯವಾಗಿ ವಿದ್ಯಾಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರ, ವಿಳಾಸ ಬದಲಾವಣೆ ಇದ್ದಲ್ಲಿ, ವಿದ್ಯಾರ್ಥಿಗಳ ಸ್ವಯಂ ದೃಢೀಕರಣ ಪತ್ರ ಹಾಗೂ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ಅಪ್‍ಲೋಡ್ ಮಾಡಬೇಕೆಂದು ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಕರು ತಿಳಿಸಿದ್ದಾರೆ.

ಇದನ್ನು ಒದಿ : https://cnewstv.in/?p=9925

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*