Breaking News

ಸುಂದರವಾದ ನಗರವನ್ನು ಹಾಳುಗೆಡವಿದ ಕೀರ್ತಿ ಬಿಜೆಪಿ ಶಾಸಕರಿಗೆ, ನಾಯಕರಿಗೆ ಸಲ್ಲುತ್ತದೆ. ಕುವೆಂಪು ರಸ್ತೆ ಬಂದ್ ಮಾಡಿ ಜಿಲ್ಲಾ ಕಾಂಗ್ರೆಸ್ ನಿಂದ ಪ್ರತಿಭಟನೆ.

Cnewstv.in / 24.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಸುಂದರವಾದ ನಗರವನ್ನು ಹಾಳುಗೆಡವಿದ ಕೀರ್ತಿ ಬಿಜೆಪಿ ಶಾಸಕರಿಗೆ, ನಾಯಕರಿಗೆ ಸಲ್ಲುತ್ತದೆ. ಕುವೆಂಪು ರಸ್ತೆ ಬಂದ್ ಮಾಡಿ ಜಿಲ್ಲಾ ಕಾಂಗ್ರೆಸ್ ನಿಂದ ಪ್ರತಿಭಟನೆ.

ಶಿವಮೊಗ್ಗ : ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು, ಸುಂದರವಾದ ನಗರವನ್ನು ಹಾಳುಗೆಡವಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ, ಶಾಸಕರಿಗೆ, ನಾಯಕರಿಗೆ ಸಲ್ಲುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.

ಇಂದು ನಗರದ ಕುವೆಂಪು ರಸ್ತೆ ಬಂದ್ ಮಾಡಿ ಜಿಲ್ಲಾ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಾಯಿತು. ಸ್ಮಾರ್ಟ್ ಸಿಟಿ ವಾರ್ಡ್ ಗಳಲ್ಲಿ ಮಾಡಲಾಗಿರುವ ರಾಜಕಾಲುವೆ, ಒಳಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ, ರಸ್ತೆಯ ಮೇಲೆ ಹರಿಯುತ್ತಿದೆ. ಸ್ಮಾಟ್ ಸಿಟಿಯ ಎಲ್ಲಾ ಕಾಮಗಾರಿಗಳು ಅವೈಜ್ಞಾನಿಕವಾಗಿದೆ. ಎಲ್ಲಾ ಅನಾಹುತಕ್ಕೆ ಬಿಜೆಪಿ ಸರ್ಕಾರವೇ ನೇರ ಹೊಣೆ.

ಅಕಾಲಿಕ ಮಳೆಯಿಂದಾಗಿ ಶಿವಮೊಗ್ಗ ನಗರ ಮುಳುಗಿಹೋಗಿದೆ. ಉಸ್ತುವಾರಿ ಮಂತ್ರಿಗಳು ನೆನ್ನೆ ಕಾಟಾಚಾರಕ್ಕಾಗಿ ಜಿಲ್ಲಾ ಪ್ರವಾಸವನ್ನು ಮಾಡಿದ್ದಾರೆ. ಅದು ಕೂಡ ಅವರಿಗೆ ಬೇಕಾದ ವಾರ್ಡ್ ಗಳಿಗೆ ಮಾತ್ರ ಭೇಟಿ ಮಾಡಿದ್ದಾರೆ. ರಾಜಕಾಲುವೆ ಗಳನ್ನು ಅತ್ಯಂತ ಸಣ್ಣದಾಗಿ ನಿರ್ಮಾಣ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಗೆ ಸಂಬಂಧಿಸಿದಂತೆ ತನಿಖೆ ಆಗಬೇಕು. RML ನಗರದಲ್ಲಿ ರಾಜಕಾಲುವೆ ಕಾಮಗಾರಿ ಇನ್ನೂ ಆಗಿಲ್ಲ. ತುಂಗಾ ಮೇಲ್ದಂಡೆ ಯೋಜನೆ ಚಾನೆಲ್ ತಡೆಗೋಡೆ ಎತ್ತರ ಮಾಡಬೇಕು ಎಂದರು.

ಪ್ರತಿಭಟನೆಯಲ್ಲಿ ಕಾಂಗ್ರೇಸ್ ಜಿಲ್ಲಾ ಅಧ್ಯಕ್ಷ ಹೆಚ್‌ ಎಸ್ ಸುಂದರೇಶ್, ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ರೇಖಾ‌ರಂಗನಾಥ್, ಮೆಹಕ್ ಷರೀಫ್, ಕೆ. ರಂಗನಾಥ್, ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಹೆಚ್‌ ಪಿ ಗಿರೀಶ್‌, ಕೆಪಿಸಿಸಿ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಎನ್ ಡಿ ಪ್ರವೀಣ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನು ಒದಿ : https://cnewstv.in/?p=9923

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*