ಜಿಲ್ಲಾಧಿಕಾರಿಗಳಿಂದ ಮನೆ-ರಸ್ತೆಗಳಿಗೆ ನುಗ್ಗಿದ ನೀರಿನ ಪರಿಶೀಲನೆ : ಪರಿಹಾರ ಕಾರ್ಯ.
Cnewstv.in / 20.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಜಿಲ್ಲಾಧಿಕಾರಿಗಳಿಂದ ಮನೆ-ರಸ್ತೆಗಳಿಗೆ ನುಗ್ಗಿದ ನೀರಿನ ಪರಿಶೀಲನೆ : ಪರಿಹಾರ ಕಾರ್ಯ.
ಶಿವಮೊಗ್ಗ : ಜಿಲ್ಲಾಧಿಕಾರಿ ಡಾ.ಸೆಲ್ವಮಣಿಯವರು ತಹಶೀಲ್ದಾರ್, ಕರ್ನಾಟಕ ನೀರಾವರಿ ನಿಗಮ ಮತ್ತು ಇತರೆ ಅಧಿಕಾರಿಗಳೊಂದಿಗೆ ಇಂದು ಮಳೆಯಿಂದ ಹಾನಿಗೀಡಾದ ಕೆಳಕಂಡ ಪ್ರದೇಶಗಳಿಗೆ ತೆರಳಿ, ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಗುರುಪುರ ಸಮೀಪದ ಶಾಂತಮ್ಮ ಲೇಔಟ್ ಹಾಗೂ ಹೊಳೆಹೊನ್ನೂರು ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ರಿಂಗ್‍ರಸ್ತೆ ಸಮೀಪದ ರಸ್ತೆ ಮತ್ತು ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿರುವ ಕಾರಣ ಜಿಲ್ಲಾಧಿಕಾರಿಗಳು ನೀರಿನ ಒಳ ಹರಿವಿನ ಪರಿಶೀಲನೆಯನ್ನು ಕೈಗೊಂಡು, ಇಸ್ಲಾಪುರದ ಚಾನಲ್‍ನಲ್ಲಿನ ನೀರಿನ ಹರಿವು ಹಾಗೂ ಹರಿಗೆ ಕೆರೆಯ ಕೋಡಿಗೆ ಸ್ವತಃ ಭೇಟಿ ನೀಡಿದರು. ಭೇಟಿ ವೇಳೆ ಚಾನಲ್‍ನಲ್ಲಿ ಕಸ ತುಂಬಿರುವುದನ್ನು ಪರಿಶೀಲಿಸಿ ಕಸವನ್ನು ತೆಗೆಸುವಂತೆ ಕೆಎನ್‍ಎನ್‍ಎಲ್ ಅಧಿಕಾರಿಗಳಿಗೆ ಸೂಚನೆ ನೀಡಿ, ಸ್ಥಳದಲ್ಲಿ ಜೆಸಿಬಿ ಮೂಲಕ ಕಸ ತೆಗೆಯುವ ಕೆಲಸವನ್ನು ಪರಿಶೀಲಿಸಿದರು ಹಾಗೂ ಸ್ಥಳೀಯರೊಂದಿಗೆ ಸಮಸ್ಯೆಗಳ ಕುರಿತು ಚರ್ಚಿಸಿದರು.
ಇದನ್ನು ಒದಿ : https://cnewstv.in/?p=9899
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ಜಿಲ್ಲಾಧಿಕಾರಿಗಳಿಂದ ಮನೆ-ರಸ್ತೆಗಳಿಗೆ ನುಗ್ಗಿದ ನೀರಿನ ಪರಿಶೀಲನೆ : ಪರಿಹಾರ ಕಾರ್ಯ. 2022-05-20