Breaking News

ಜನರ ಜೀವ ಹಾಗೂ ಜೀವನವನ್ನು ಉಳಿಸಬೇಕು : ಹೆಚ್. ಪಿ.ಗಿರೀಶ್.

Cnewstv.in / 20.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಜನರ ಜೀವ ಹಾಗೂ ಜೀವನವನ್ನು ಉಳಿಸಬೇಕು : ಹೆಚ್. ಪಿ.ಗಿರೀಶ್.

ಶಿವಮೊಗ್ಗ : ಕಳೆದ ಎರಡು ದಿನಗಳಿಂದ ಶಿವಮೊಗ್ಗ ನಗರದಲ್ಲಿ ಮಳೆಯಿಂದ ಆದಂತಹ ಅವಾಂತರಗಳಿಗೆ ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಪಿ ಗಿರೀಶ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಗಾರು ಮಳೆಗೂ ಮುನ್ನವೇ ಎರಡು ದಿನ ಸುರಿದ ಮಳೆಗೆ ಶಿವಮೊಗ್ಗ ನಗರದ ಜನ ತತ್ತರಿಸಿದ್ದಾರೆ. ಸ್ಮಾರ್ಟ್ ಸಿಟಿ ವತಿಯಿಂದ ಮಾಡಿದಂತಹ ಯಾವ ಕಾಮಗಾರಿಯೂ ವೈಜ್ಞಾನಿಕವಾಗಿ ಇಲ್ಲ. ಯಾವುದೇ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ.‌ ಬದಲಾಗಿ ರಸ್ತೆಯ ಮೇಲೆ ಹರಿಯುತ್ತಿದೆ.

ಇದರಿಂದ ನಗರದ ಜನರ ಜೀವನ ಅಧೋಗತಿಗೆ ಹೋಗಿದೆ. ಉಟ್ಟ ಬಟ್ಟೆಯಲ್ಲಿ ಜನರು ಮನೆಯಿಂದ ಹೊರಬಂದ ಪರಿಸ್ಥಿತಿ ನಿರ್ಮಾಣವಾಗಿದೆ. ಶಿವಮೊಗ್ಗ ನಗರ ಶಾಸಕರು, ಮೇಯರ್ ಅಡಳಿತ ಪಕ್ಷದ ನಾಯಕರು ಕೇವಲ ನಾಮಕವಸ್ತೆಗೆ ಕೆಲವು ಕಡೆ ಮಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ಮಾಡಿದ್ದಾರೆ.

ಈಗಾಗಲೇ ಈ ಹಿಂದೆ ಆದಂತಹ ಅತಿವೃಷ್ಟಿಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡದ ಈ ಸರ್ಕಾರ ಈಗ ಆಗಿರುವಂತಹ ಅವಾಂತರಗಳಿಗೆ ಯಾವ ರೀತಿ ಪರಿಹಾರ ಕೊಡುತ್ತಾರೆ ಎಂಬುದು ಜನರ ಪ್ರಶ್ನೆಯಾಗಿದೆ.

ಶಿವಮೊಗ್ಗ ನಗರದ ಪ್ರಮುಖ ಬಡಾವಣೆ ಗಳಾದ ಹೊಸಮನೆ ,ಶರಾವತಿ ನಗರ, ಗಾಂಧಿನಗರ, ವೆಂಕಟೇಶ ನಗರ ,ಟಿಪ್ಪು ನಗರ ಆರ್ .ಎಂ.ಎಲ್ ನಗರ ಗೋಪಾಲ ಗೌಡ ಬಡಾವಣೆಗಳಲ್ಲಿ ಮಳೆಯ ನೀರು ಸರಾಗವಾಗಿ ಹರಿಯದೆ. ಅವಾಂತರ ಸೃಷ್ಟಿ ಮಾಡಿದೆ. ಈ ಬಡಾವಣೆಗಳಲ್ಲಿ ಇರುವ , ಒಳ ಚರಂಡಿ, ರಾಜ ಕಾಲುವೆ ಕಾಮಗಾರಿಗಳು ಅವೈಜ್ಞಾನಿಕವಾಗಿದೆ. ಹಲವು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು ನಗರ ಪಾಲಿಕೆ ಅಡಳಿತ ಮತ್ತು ಅಧಿಕಾರಿಗಳು ಗಾಢಾ ನಿದ್ರೆಯಲ್ಲಿರುವುದು ತ್ರೀವಾ ಖಂಡನಿಯ.

ಕೂಡಲೇ ಈ ಅವಾಂತರಕೆ ಕಾರಣವಾದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ವಿರುದ್ಧ ಕ್ರಮ ತೆಗೆದುಕೊಳ್ಳುಬೇಕು.‌ ಜನರ ಜೀವ ಹಾಗೂ ಜೀವನವನ್ನು ಉಳಿಸಬೇಕು ಎಂದು ಆಗ್ರಹಿಸಿದರು.

ಇದನ್ನು ಒದಿ : https://cnewstv.in/?p=9892

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*