Breaking News

ಶಿವಮೊಗ್ಗ : ಭಾರೀ ಮಳೆ ಸಾಧ್ಯತೆ. ರೆಡ್ ಅಲರ್ಟ್..

Cnewstv.in / 19.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಶಿವಮೊಗ್ಗ : ಭಾರೀ ಮಳೆ ಸಾಧ್ಯತೆ. ರೆಡ್ ಅಲರ್ಟ್..

ಶಿವಮೊಗ್ಗ : ಜಿಲ್ಲಾದ್ಯಂತ ಕಳೆದ ಎರಡು ದಿನಗಳಿಂದ ಎಡೆಬಿಡದೆ ನಿರಂತರ ಮಳೆ ಸುರಿಯುತ್ತಿದೆ. ಇಂದೂ ಕೂಡಾ ಅತಿಹೆಚ್ಚು ಪ್ರಮಾಣದಲ್ಲಿ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ.

ಶಿವಮೊಗ್ಗ ನಗರದಲ್ಲಿ ಒಟ್ಟು 10 CM ರಿಂದ 15 CM ಸೆಂಟಿಮೀಟರ್ ಮಳೆಯಾಗುವ ಸೂಚನೆಯಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ನಿನ್ನೆ ರಾತ್ರಿಯಿಂದ ವಿರಾಮ ಬಿಡದೆ ಮಳೆ ಸುರಿಯುತ್ತಿದೆ ಇಂದು ಕೂಡ ಮಧ್ಯಾಹ್ನ 12 ಗಂಟೆಯಿಂದ 5 ಗಂಟೆಯ ಸಮಯದಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ನಾಳೆ ಕೂಡ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗಲಿದೆ.

7 ಜಿಲ್ಲೆಗಳಿಗೆ  ‘ರೆಡ್‌ ಅಲರ್ಟ್‌ ’

ಇಂದು ಭಾರೀ ಮಳೆ ಬೀಳಬಹುದು ಎಂದು ಶಿವಮೊಗ್ಗ ಸೇರಿದ್ದಂತೆ 7 ಜಿಲ್ಲೆಗಳಲ್ಲಿ ‘ರೆಡ್‌ ಅಲರ್ಟ್‌ ’ ಘೋಷಿಸಲಾಗಿದೆ.  ಚಿಕ್ಕಮಗಳೂರು, ಹಾಸನ, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅತಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ.

ಇದನ್ನು ಒದಿ : https://cnewstv.in/?p=9864

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*