Cnewstv.in / 18.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
`ಡಯಾಬಿಟಿಸ್ ರಿವರ್ಸಲ್’ ಜಾಗತಿಕ ಟ್ರೆಂಡ್ ಈಗ ಶಿವಮೊಗ್ಗದಲ್ಲಿ…
ಶಿವಮೊಗ್ಗ : ಜಗತ್ತನ್ನು ಕಾಡುತ್ತಿರುವ ಸೈಲೆಂಟ್ ಕಿಲ್ಲರ್ ಎಂದೇ ಕರೆಯಲಾಗುವ ಮಧುಮೇಹವನ್ನು ಸಂಪೂರ್ಣ ನಿರ್ಮೂಲನ ಮಾಡಲು ಸಾಧ್ಯವಿಲ್ಲ. ಆದರೆ, ನಿಯಂತ್ರಣದಲ್ಲಿ ಇಡಬಹುದು ಎಂಬುದು ಇದೂವರೆಗಿನ ನಂಬಿಕೆಯಾಗಿತ್ತು. ಮಧುಮೇಹ ನಿಯಂತ್ರಣದಲ್ಲಿದ್ದರೂ ದೇಹದ ಮೇಲೆ ಆಗುವ ಸೈಡ್ ಎಫೆಕ್ಟ್ ಗಳ ತಪ್ಪಿಸುವುದು ಕಷ್ಟಕರವಾಗಿತ್ತು. ಜೊತೆ ಮಧುಮೇಹಿಗಳು ಔಷಧೋಪಚಾರದಲ್ಲೇ ಇಡೀ ಜೀವನ ಕಳೆಯಬೇಕಿತ್ತು. ಇಂಥ ಮಾರಕ ಮಧುಮೇಹದ ವಿರುದ್ಧದ ಹೋರಾಟದಲ್ಲಿ ಮೈಲಿಗಲ್ಲಾಗಿರುವುದು `ಡಯಾಬಿಟಿಸ್ ರಿವರ್ಸಲ್’
ಈ `ಡಯಾಬಿಟಿಸ್ ರಿವರ್ಸಲ್’ ಬಗ್ಗೆ ಐಸ್ಲೆಟ್ ಡಯಾಬಿಟಿಕ್ ಹಾಸ್ಪಿಟಲ್ ನ ಮ್ಯಾನೇಜಿಂಗ್ ಡೈರಕ್ಟರ್ ಡಾ. ಪ್ರೀತಂ ಹಾಗೂ ಲೈವ್ ಆಲ್ಟ್ ಲೈಫ್ ಸಂಸ್ಥೆಯ ಸಿಇಓ ವಿವೇಕ್ ಸುಬ್ರಹ್ಮಣ್ಯ, ಹಾಗೂ ಸಿಎಫ್ಓ ಪುರುಷೋತ್ತಮ ಗೋವಿಂದ ರಾಜನ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಏನಿದು `ಡಯಾಬಿಟಿಸ್ ರಿವರ್ಸಲ್’?
ಮಧುಮೇಹವನ್ನು ಸಂಪೂರ್ಣ ಇಲ್ಲವಾಗಿಸುವುದು, ಯಾವುದೇ ಔಷಧಗಳಿಲ್ಲದೆ ಜೀವನ ಸಾಗಿಸುವಂತೆ ಮಾಡುವುದೇ ಈ ಶುಗರ್ ರಿವರ್ಸ್.
ಈ ಪದ್ಧತಿ ಅನುಸರಿಸಿದ ಮೂರು ತಿಂಗಳಲ್ಲಿ ಬಹುತೇಕರಿಗೆ ಮಧುಮೇಹ ಸಂಪೂರ್ಣ ಇಲ್ಲವಾಗುತ್ತೆ ಮೂರು ತಿಂಗಳಲ್ಲಿ ಷುಗರ್ ಇಲ್ಲವಾಗದಿದ್ದಲ್ಲಿ ಅಥವಾ ಕಡಿಮೆ ಆಗದಿದ್ದಲ್ಲಿ ಸಂಪೂರ್ಣ ಹಣ ಹಿಂತಿರುಗಿಸಲಾಗುತ್ತದೆ.
ಈ ಪದ್ಧತಿ ಅನುಸರಿಸಿದ 20ರಿಂದ 30 ದಿನದಲ್ಲಿ ಮಧುಮೇಹಕ್ಕೆ ತೆಗೆದುಕೊಳ್ಳುತ್ತಿದ್ದ ಔಷಧಗಳನ್ನು ನಿಲ್ಲಿಸಬಹುದು. ಈ ಪದ್ಧತಿ ಅನುಸರಿಸಿದ ಮೂರು ತಿಂಗಳ ನಂತರ ಪ್ರತಿ ತಿಂಗಳಿಗೆ ಅಗತ್ಯ ಇರುವ ಫುಡ್ ಕಿಟ್ ನೀಡಲಾಗುತ್ತಿದೆ
ಈಗ `ಡಯಾಬಿಟಿಸ್ ರಿವರ್ಸಲ್’ ಜಾಗತಿಕ ಟ್ರೆಂಡ್ ಆಗಿದೆ. ಮಲೆನಾಡಿನ ಜಿಲ್ಲೆಗಳಲ್ಲಿ ಮಧುಮೇಹಿಗಳ ಚಿಕಿತ್ಸೆಗೆ ಹೆಸರಾಗಿರುವ ಶಿವಮೊಗ್ಗದ ಐಲೆಟ್ಸ್ ಡಯಾಬಿಟಿಕ್ ಹಾಸ್ಪಿಟಲ್ ಜಾಗತಿಕ ಸಂಸ್ಥೆಯಾಗಿರುವ ಲೈವ್ ಆಲ್ಟ್ ಲೈಫ್ ಸಂಸ್ಥೆಯ ಸಹಯೋಗದಲ್ಲಿ `ಡಯಾಬಿಟಿಸ್ ರಿವರ್ಸಲ್’ ಪದ್ಧತಿ ಪರಿಚಯಿಸುತ್ತಿದೆ.
ಈ `ಡಯಾಬಿಟಿಸ್ ರಿವರ್ಸಲ್’ ಪದ್ಧತಿ ಈಗ ಶಿವಮೊಗ್ಗಕ್ಕೂ ಬಂದಿದೆ. ಹಲವು ವರ್ಷಗಳಿಂದ ಮಲೆನಾಡಿನ ಮಧುಮೇಹಿಗಳ ಪಾಲಿಗೆ ವರದಾನವಾಗಿರುವ ಐಲೆಟ್ಸ್ ಡಯಾಬಿಟಿಕ್ ಹಾಸ್ಪಿಟಲ್ ಈ ಶುಗರ್ ರಿವರ್ಸ್ ವಿಧಾನವನ್ನು ಮಲೆನಾಡಿನ ಜನರಿಗೆ ತಲುಪಿಸುತ್ತಿದೆ. ಐಲೆಟ್ಸ್ ಡಯಾಬಿಟಿಕ್ ಆಸ್ಪತ್ರೆಯು ಲೈವ್ ಆಲ್ಟ್ ಲೈಫ್ ಸಂಸ್ಥೆಯ ಸಹಯೋಗದಲ್ಲಿ ಈ ಜಾಗತಿಕ ಟ್ರೆಂಡನ್ನು ಶಿವಮೊಗ್ಗಕ್ಕೆ ಪರಿಚಯ ಮಾಡಿಸುತ್ತಿದೆ.
`ಡಯಾಬಿಟಿಸ್ ರಿವರ್ಸಲ್’ 19ರಂದು ವಿಶೇಷ ಮಾಹಿತಿ ಶಿಬಿರ…
ಐಲೆಟ್ಸ್ ಡಯಾಬಿಟಿಕ್ ಹಾಸ್ಪಿಟಲ್ ನಲ್ಲಿ `ಡಯಾಬಿಟಿಸ್ ರಿವರ್ಸಲ್’ ಕುರಿತ ಮಾಹಿತಿ ಶಿಬಿರವನ್ನು ಇದೇ ತಿಂಗಳ 19ರಂದು ಬೆಳಗ್ಗೆ 10.00 ಹಮ್ಮಿಕೊಳ್ಳಲಾಗಿದೆ. ಶಿಬಿರವನ್ನು ಐಎಂಎ ಉಪಾಧ್ಯಕ್ಷ ಡಾ. ಶಂಭುಲಿಂಗ ಬಂಕೊಳ್ಳಿ ಅವರು ಉದ್ಘಾಟಿಸಲಿದ್ದಾರೆ. ಐಲೆಟ್ಸ್ ಡಯಾಬಿಟಿಕ್ ಹಾಸ್ಪಿಟಲ್ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಪ್ರೀತಂ, ಲೈವ್ ಆಲ್ಟ್ ಲೈಫ್ ಸಂಸ್ಥೆಯ ಸಿಇಓ ವಿವೇಕ್ ಸುಬ್ರಹ್ಮಣ್ಯ, ಹಾಗೂ ಸಿಎಫ್ಓ ಪುರುಷೋತ್ತಮ ಗೋವಿಂದ ರಾಜನ್ , ಶಿವಮೊಗ್ಗ ಸಿಟಿ ಕ್ಲಬ್ ಕಾರ್ಯದರ್ಶಿ ಜಗತ್ ಗೌಡ, ರೋಟೇರಿಯನ್, ಹಾಗೂ ಲಿಟಲ್ ಎಲ್ಲಿ ಪ್ರಿ ಸ್ಕೂಲ್ ನಿರ್ದೇಶಕ ಅನಿಲ್ ಪಿ ಶೆಟ್ಟಿ ಇರಲಿದ್ದಾರೆ.
ಈ ಶಿಬಿರದಲ್ಲಿ `ಡಯಾಬಿಟಿಸ್ ರಿವರ್ಸಲ್’ ಕುರಿತು ಮುಕ್ತ ಸಂವಾದ ನಡೆಯಲಿದೆ. ಈ `ಡಯಾಬಿಟಿಸ್ ರಿವರ್ಸಲ್’ ಪದ್ಧತಿಯಡಿ ಚಿಕಿತ್ಸೆ ಪಡೆಯಲು ಆಸಕ್ತಿ ಇರುವ ಮಧುಮೇಹಿಗಳು ಈ ತಿಂಗಳ 30 ರ ಒಳಗಾಗಿ ಹೆಸರು ನೋಂದಾವಣೆ ಮಾಡಿಕೊಳ್ಳಬಹುದಾಗಿದೆ.
ಇದನ್ನು ಒದಿ : https://cnewstv.in/?p=9851
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
C News TV Kannada News Online in cnewstv