ಕಲಿಕಾ ಚೇತರಿಕೆ ವರ್ಷ : ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಪುನರಾರಂಭ..
Cnewstv.in / 16.05.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕಲಿಕಾ ಚೇತರಿಕೆ ವರ್ಷ : ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಪುನರಾರಂಭ..
ಬೆಂಗಳೂರು : ಇಂದಿನಿಂದ ರಾಜ್ಯಾದ್ಯಂತ ಎಲ್ಲಾ ಮಾದರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಪುನರಾರಂಭಗೊಂಡಿದೆ.
ಎರಡು ವರ್ಷಗಳ ನಂತರ ರಾಜ್ಯಾದ್ಯಂತ ಪೂರ್ಣಪ್ರಮಾಣದಲ್ಲಿ ಶಾಲೆಗಳು ಆರಂಭವಾಗುತ್ತಿದ್ದು, ಆನ್ಲೈನ್ ಕ್ಲಾಸ್ನಲ್ಲಿ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿಗಳು ಇದೀಗ ಮತ್ತೆ ತರಗತಿಗಳಂತ ಮುಖ ಮಾಡಿದ್ದಾರೆ.
2022-23 ನೇ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಘೋಷಿಸಲಾಯಿತು. ಈ ವರ್ಷವನ್ನು ನಿಗದಿತ ಸಮಯಕ್ಕಿಂತ 15 ದಿನಗಳ ಮೊದಲೇ ಆರಂಭಿಸಲಾಗುತ್ತಿದ್ದು, ಎರಡು ವರ್ಷ ಮನೆಯಲ್ಲೇ ಇದ್ದಂತಹ ಮಕ್ಕಳು ಶಾಲೆಗೆ ಬಂದ ತಕ್ಷಣ ಪಾಠಗಳಿಗೆ ಹೊಂದಿಕೊಳ್ಳುವುದು ಕಷ್ಟವಾಗಿರುವುದರಿಂದ ಶಾಲಾ ಆರಂಭದ ಎರಡು ವಾರಗಳ ಕಾಲ ಮಕ್ಕಳನ್ನು ಶಾಲೆಯತ್ತ ಆಕರ್ಷಿಸಲು ಮಳೆಬಿಲ್ಲು ಎಂಬ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಶಾಲೆಗಳಲ್ಲಿ ಹಬ್ಬದ ವಾತಾವರಣ ನಿರ್ಮಿಸಲಾಗಿದ್ದು, ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಸಿಹಿ ಹಂಚಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಲಾಯಿತು.
ಇದನ್ನು ಒದಿ : https://cnewstv.in/?p=9823
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
2022-05-16