Breaking News

ಕೊಲೆ ಮಾಡಿ ಶವ ಸಾಗಿಸುತ್ತಿದ್ದಾಗ ಡಿಸಿ ಕಚೇರಿಯ ಮುಂದೆ ಬೈಕ್ ಸ್ಕಿಡ್.. ಬಯಲಾಯ್ತು ಕೊಲೆಯ ರಹಸ್ಯ..

Cnewstv.in / 12.05.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕೊಲೆ ಮಾಡಿ ಶವ ಸಾಗಿಸುತ್ತಿದ್ದಾಗ ಡಿಸಿ ಕಚೇರಿಯ ಮುಂದೆ ಬೈಕ್ ಸ್ಕಿಡ್.. ಬಯಲಾಯ್ತು ಕೊಲೆಯ ರಹಸ್ಯ..

ಬೆಂಗಳೂರು : ಮಹಿಳೆಯನ್ನು ಕೊಲೆ ಮಾಡಿ ಮೃತದೇಹವನ್ನು ಬೈಕಿನಲ್ಲಿ ಸಾಗಿಸುವಾಗ ಅದೇ ಬೈಕ್ ಅಪಘಾತಕ್ಕೀಡಾಗಿ ಕೊಲೆಯ ರಹಸ್ಯವನ್ನು ಬಯಲು ಮಾಡಿದ ಘಟನೆ ನಡೆದಿದೆ

ಕೊಲೆಯಾದ ಮಹಿಳೆಯನ್ನು ಶ್ವೇತ ಎಂದು ಗುರುತಿಸಲಾಗಿದ್ದು, ಶ್ವೇತ ಮೃತದೇಹವನ್ನ ಹಂತಕರು ಬೈಕಿನಲ್ಲಿ ಬೆಂಗಳೂರಿನಿಂದ ರಾಮನಗರದ ಕಡೆಗೆ ಸಾಗಿಸುತ್ತಿದ್ದಾಗ ಈ ಅಪಘಾತ ನಡೆದಿದೆ.‌

ಶ್ವೇತಾ ಮದುವೆಯಾಗಿದ್ದರೂ ಗಂಡನಿಂದ ದೂರಾಗಿ ನೊಂದಿದ್ದಳು ಆಕೆ ತನ್ನ ಸ್ನೇಹಿತೆ ದುರ್ಗಾ ಮನೆಯಲ್ಲಿ ವಾಸವಿದ್ದಳು. ಶ್ವೇತ ಮತ್ತು ದುರ್ಗಾ ಇಬ್ಬರೂ ಕಲ್ಯಾಣಮಂಟಪ ಒಂದರಲ್ಲಿ ಕೆಲಸ ಮಾಡುತ್ತಿದ್ದರು.

ಕೆಲದಿನಗಳ ಹಿಂದೆ ದುರ್ಗಾ ಮನೆಯಲ್ಲಿ ಹಣ ಮತ್ತು ಒಡವೆ ಕಳ್ಳತನವಾಗಿತ್ತು ಅದನ್ನೇ ಶ್ವೇತ ಕಳ್ಳತನ ಮಾಡಿದ್ದಾಳೆಂದು ದುರ್ಗಾ ಅನುಮಾನ ಪಟ್ಟು, ಆಕೆಯನ್ನು ರೂಮಿನಲ್ಲಿ ಕೂಡಿಹಾಕಿ ಮನಸೋಇಚ್ಛೆ ಥಳಿಸಿದ್ದಳು. ನಂತರ ಸಂಜೆ ಬಂದು ನೋಡಿದಾಗ ಶ್ವೇತ ಅದೇ ರೂಮಿನಲ್ಲಿ ಮೃತಪಟ್ಟಿದ್ದಳು.

ದುರ್ಗಾ ನಡೆದ ಘಟನೆಯಿಂದ ತನ್ನ ಪತಿ ರಘು ಹಾಗೂ ಸಹೋದರ ನಾಗರಾಜ ತಿಳಿಸಿದಳು. ನಂತರ ಅವರಿಬ್ಬರೂ ರಘುವಿನ ಸ್ನೇಹಿತರಾದ ಅಭಿ ಹಾಗೂ ವಿನೋದ್ ಜೊತೆಯಲ್ಲಿ ಸೇರಿ ಹೆಣವನ್ನು ಶ್ರೀರಂಗಪಟ್ಟಣದ ನದಿಗೆ ಅಥವಾ ಸೇತುವೆಯ ಕೆಳಗೆ ಎಸೆಯಲು ಮಾಸ್ಟರ್ ಪ್ಲಾನ್ ಮಾಡಿದ್ದರು.

ರಘು ಮತ್ತು ದುರ್ಗಾ ಒಂದು ಬೈಕಿನಲ್ಲಿ, ನಾಗರಾಜ್ ವಿನೋದ್ ಹಾಗೂ ಮೃತ ಶ್ವೇತ ಮೃತದೇಹ ಒಂದು ಬೈಕಿನಲ್ಲಿ ಹಾಗೂ ಅಭಿ ಮತ್ತೊಂದು ಬೈಕಿನಲ್ಲಿ ಹೊರಟಿದ್ದರು. ಆದರೆ ಮಾರ್ಗಮಧ್ಯೆ ರಾಮನಗರ ಜಿಲ್ಲಾಧಿಕಾರಿ ಕಚೇರಿಯ ಬಳಿ ಶವ ಇದ್ದ ಬೈಕ್ ಸ್ಕಿಡ್ ಅಗಿ ಕೊಲೆ ವಿಚಾರ ಬೆಳಕಿಗೆ ಬಂದಿದೆ.

ಬೈಕ್ ಸ್ಕಿಡ್ಡಾಗಿ ಬಿದ್ದ ಕೂಡಲೇ ಅಲ್ಲೇ ಇದ್ದ ಪೊಲೀಸರು ಮಹಿಳೆ ಬಿದ್ದಿದ್ದನ್ನು ಗಮನಿಸಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ವೇಳೆ ವೈದ್ಯರು ಪರೀಕ್ಷೆ ಮಾಡಿ ಆಕೆ ಮೃತಪಟ್ಟು ಹಲವು ಗಂಟೆಗಳೇ ಕಳೆದಿದೆ ಎಂದಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ವಿನೋದ್ ಹಾಗೂ ನಾಗರಾಜನನ್ನು ವಿಚಾರಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ಇದನ್ನು ಒದಿ : https://cnewstv.in/?p=9797

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*