Breaking News

“ಬೇಬಿ ಬರ್ತ್‌’’ : ತಾಯಂದಿರಿಗೆ ವಿಶೇಷ ಉಡುಗೊರೆ ನೀಡಿದ ಭಾರತೀಯ ರೈಲ್ವೆ ಇಲಾಖೆ

Cnewstv.in / 11.05.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

“ಬೇಬಿ ಬರ್ತ್‌’’ : ತಾಯಂದಿರಿಗೆ ವಿಶೇಷ ಉಡುಗೊರೆ ನೀಡಿದ ಭಾರತೀಯ ರೈಲ್ವೆ ಇಲಾಖೆ

ನವದೆಹಲಿ : ಉತ್ತರ ರೈಲ್ವೆಯು ಮೇ 8 ರ ತಾಯಂದಿರ ದಿನದಂದು ಚಿಕ್ಕಮಕ್ಕಳೊಂದಿಗೆ ಪ್ರಯಾಣಿಸುವ ಮಹಿಳೆಯರಿಗಾಗಿ ಬೇಬಿ ಬರ್ತ್ ಎಂಬ ಹೊಸ ಸೇವೆಯನ್ನು ಆರಂಭ ಮಾಡಿದೆ.

ಉತ್ತರ ರೈಲ್ವೆಯು ಮಹಿಳೆಯರಿಗೋಸ್ಕರ ಈ ಉಡುಗೊರೆಯನ್ನು ನೀಡಿದ್ದು, ತಾಯಿಂದಿರು ತಮ್ಮ ಪುಟ್ಟ ಮಕ್ಕಳನ್ನು ಆರಾಮವಾಗಿ ತಮ್ಮ ಜೊತೆಯಲ್ಲಿ ಮಲಗಿಕೊಳ್ಳಲು ಅನುಕೂಲಕರವಾಗುವಂತೆ ಹೊಸಬಗೆಯ ಸೀಟುಗಳನ್ನು ವಿನ್ಯಾಸ ಮಾಡಲಾಗಿದೆ.

ಉತ್ತರ ರೈಲ್ವೆಯ ದಿಲ್ಲಿ ಮತ್ತು ಲಕ್ನೋ ವಿಭಾಗದಲ್ಲಿ ಪ್ರಯೋಗಿಕವಾಗಿ ಅರಂಭ ಮಾಡಲಾಗಿದೆ. ಮೊದಲು ಲಕ್ನೋದಿಂದ ನವದೆಹಲಿಗೆ ಹೋಗುವ ಲಕ್ನೋವೇಲ್ ಗಾಡಿಯ ಎಸಿ 3 ಕೋಚ್ ನ ಸೀಟಿನ 12 ಮತ್ತು 60 ರಲ್ಲಿ ಇದನ್ನು ಪ್ರಯೋಗಿಕವಾಗಿ ಪ್ರಾರಂಭಿಕವಾಗಿ ಆರಂಭ ಮಾಡಲಾಗಿದೆ.‌

ಬೇಬಿ ಬರ್ತ್ ಸೀಟಿನ ಸೌಲಭ್ಯವೂ ಸುರಕ್ಷಿತವಾಗಿದ್ದು, ಉಪಯೋಗಿಸಲು ಸಹ ಅನುಕೂಲಕರವಾಗಿದೆ. ಭಾರತೀಯ ರೈಲ್ವೆ ಇಲಾಖೆಯ ಈ ಹೊಸ ಸೌಲಭ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನು ಒದಿ‌ : https://cnewstv.in/?p=9776

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*