Breaking News

ಬಿಜೆಪಿಯವರು ಕೇಸರಿ ಬಣ್ಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

Cnewstv.in / 10.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಬಿಜೆಪಿಯವರು ಕೇಸರಿ ಬಣ್ಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಶಿವಮೊಗ್ಗ : ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಇಂದು ಶಿವಮೊಗ್ಗದಲ್ಲಿ ಕಾಂಗ್ರೆಸ್ ವತಿಯಿಂದ ಜನಧ್ವನಿ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬಿಜೆಪಿಯವರು ಕೇಸರಿ ಬಣ್ಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮಠಮಾನ್ಯಗಳಲ್ಲಿ ಕೇಸರಿ ವಸ್ತ್ರವನ್ನು ಧರಿಸುತ್ತಾರೆ ನಾವು ಅವರಿಗೆ ಗೌರವ ನೀಡುತ್ತೇವೆ. ಅದರೆ ನೀವು ಅದನ್ನು
ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ.

ಬಿಜೆಪಿಗೂ ಕೇಸರಿ ಏನು ಸಂಬಂಧ ?? ಕೇಸರಿ ಶಾಂತಿಯ ಸಂಕೇತ. ಅದರೆ ಬಿಜೆಪಿಯವರು ಸದಾ ರಕ್ತ ಮತ್ತು ಹಿಂಸೆ ಮೇಲೆ ಆಸಕ್ತಿ ಹೊಂದಿದ್ದಾರೆ. ಅದ್ದರಿಂದ ಅವರು ಕೇಸರಿ ಟೋಪಿ ಮತ್ತು ಶಾಲು ಹಾಕುವುದರ ಬದಲಾಗಿ ಕೆಂಪು ಟೋಪಿ ಶಾಲು ಧರಿಸಬೇಕು

ಮಹತ್ಮಗಾಂಧಿ, ರಾಜೀವ್ ಗಾಂಧಿಯವರು ದೇಶದ ಐಕ್ಯತೆಗೆ, ಸಮಗ್ರತೆಗಾಗಿ ಪ್ರಾಣತ್ಯಾಗ ಮಾಡಿದ್ದಾರೆ ಆದರೆ ಬಿಜೆಪಿ ಮುಖಂಡರ ಏನಾದರೂ ದೇಶಕ್ಕಾಗಿ ಪ್ರಾಣ ಬಿಟ್ಟಿದ್ದಾರಾ ಎಂದರು.

ಇದನ್ನು ಒದಿ‌ : https://cnewstv.in/?p=9769

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*