Breaking News

50 ಕೋಟಿ ರೂ. ವೆಚ್ಚದಲ್ಲಿ ಉದ್ಘಾಟನೆಯಾದ ಕ್ರೀಡಾಂಗಣ ಗ್ಯಾಲರಿ 2 ತಿಂಗಳಲ್ಲಿ ಧರೆಗುರುಳಿದೆ.

Cnewstv.in / 10.05.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

50 ಕೋಟಿ ರೂ. ವೆಚ್ಚದಲ್ಲಿ ಉದ್ಘಾಟನೆಯಾದ ಕ್ರೀಡಾಂಗಣ 2 ತಿಂಗಳಲ್ಲಿ ಧರೆಗುರುಳಿದೆ.

ಬೆಂಗಳೂರು : ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ ಗ್ಯಾಲರಿ ಉದ್ಘಾಟನೆಯಾದ 2 ತಿಂಗಳಲ್ಲಿ ಧರೆಗುರುಳಿದೆ.

ಬೆಂಗಳೂರಿನ ಹೆಎಚ್ಎಸ್ ಆರ್ ಲೇಔಟ್ ನಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ 3.5 ಕೋಟಿ ರು ವೆಚ್ಚದ ಕಾಮಗಾರಿಯನ್ನು ಕಳೆದ ಮಾರ್ಚ್ 1ರಂದು ಸಿ.ಎಂ. ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದರು.

ಅದರೆ ಭಾನುವಾರ ಸುರಿದ ಭಾರೀ ಮಳೆ ಗಾಳಿಗೆ ಕ್ರೀಡಾಂಗಣದ ಗ್ಯಾಲರಿ ಕುಸಿದು ಬಿದ್ದಿದೆ. ಒಂದು ಗ್ಯಾಲರಿ ಮೇಲೆ ಮರ ಬಿದ್ದಿದ್ದು, ಮತ್ತೊಂದು ಗ್ಯಾಲರಿ ಸೀದಾ ಧರೆಗುರುಳಿದೆ. ಸುಮಾರು 4 ಕೋಟಿ ರೂ ನಷ್ಟ ಅಂದಾಜಿಸಲಾಗಿದೆ.

ಇನ್ನು ಗ್ಯಾಲರಿ ಹಿಂಭಾಗದಲ್ಲಿ ನಿಲ್ಲಿಸಿದ್ದ ವಾಹನಗಳು ಮೇಲೂ ಕಬ್ಬಿಣದ ಸರಳುಗಳು ಬಿದ್ದಿದ್ದು, ಹೊಸದಾಗಿ ಹಾಕಲಾಗಿದ್ದ ಗ್ರಾನೇಟ್ ಗಳು ಕಿತ್ತು ಹೋಗಿವೆ.

ಇದನ್ನು ಒದಿ‌ : https://cnewstv.in/?p=9757

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*