Breaking News

ಅಕ್ರಮ ಕಸಾಯಿಖಾನೆಯ ಮೇಲೆ ದಾಳಿ ನಡೆಸಿದ ಸ್ವಯಂ ಸೇವಕ ಸಂಸ್ಥೆಯ ಕಾರ್ಯಕರ್ತ.‌ ಹಸುಗಳ ರಕ್ಷಣೆ, ಗೋಮಾಂಸ ವಶ.

Cnewstv.in / 08.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಅಕ್ರಮ ಕಸಾಯಿಖಾನೆಯ ಮೇಲೆ ದಾಳಿ ನಡೆಸಿದ ಸ್ವಯಂ ಸೇವಕ ಸಂಸ್ಥೆಯ ಕಾರ್ಯಕರ್ತ.‌ ಹಸುಗಳ ರಕ್ಷಣೆ, ಗೋಮಾಂಸ ವಶ.

ಶಿವಮೊಗ್ಗ : ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸಿಸುವ ಉದ್ದೇಶದಿಂದಾಗಿ ಕೂಡಿಹಾಕಿದ್ದ ಹಸುಗಳನ್ನ ರಕ್ಷಣೆ ಮಾಡಲಾಗಿದೆ.

ಭದ್ರಾವತಿ ಬೊಮ್ಮನಕಟ್ಟೆಯ ಮುಖ್ಯರಸ್ತೆಯಲ್ಲಿರುವ ಕಸಾಯಿಖಾನೆಯ ಮೇಲೆ ಖಚಿತ ಮಾಹಿತಿಯ ಮೇರೆಗೆ ಸ್ವಯಂಸೇವಕರ ಸಂಸ್ಥೆಯ ವ್ಯಕ್ತಿಯೊಬ್ಬರು ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ ಸಂಗ್ರಹಿಸಿದ್ದ ಗೋಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ 6 ಗೋವುಗಳನ್ನು ರಕ್ಷಣೆ ಮಾಡಿ ಅದನ್ನು ಸುರಕ್ಷಿತವಾಗಿ ಗೋಶಾಲೆಗೆ ಬಿಡಲಾಗಿದೆ.

ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾವುದೇ ಪರವಾನಗಿ ಹೊಂದಿರದೇ ಅಕ್ರಮ ಖಸಾಯಿಖಾನೆಯ ಮಳಿಗೆಗಳಲಿ ದನಕರುಗಳನ್ನು ಕಡಿದು ಗೋಮಾಂಸವನ್ನು ರಾಜಾರೋಷವಾಗಿ ನೇತು ಹಾಕಿ ಮಾರಾಟ ಮಾಡುತ್ತಿದ್ದಾರೆ. ಗೋವುಗಳ ವಧೆಯಾದ ಮೇಲೆ ರಕ್ತ ಮತ್ತು ಇನ್ನಿತರ ತ್ಯಾಜ್ಯವನ್ನು ಚರಂಡಿಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಸಾಡಿರುವುದು ಕಂಡುಬಂದಿದ್ದು, ಇದು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಾಂಕ್ರಾಮಿಕ ರೋಗ ರುಜಿನಗಳನ್ನು ಹರಡಲು ಕಾರಣವಾಗುತ್ತಿದೆ.

ಈ ಆಕ್ರಮ ಖಸಾಯಿಖಾನೆಗಳ ಮಳಿಗೆಗಳು
ಎಗಿಲದ ಕಾರ್ಯ ನಿರ್ವಹಿಸುತ್ತಿದ್ದು ದಿನ ನಿತ್ಯ ಗೋವುಗಳಹತ್ಯೆ ನಡೆಯುತ್ತಿದ್ರು, ಬೊಮ್ಮನಕಟ್ಟೆ ಖಸಾಯಿಖಾನೆಗಳ ಮೇಲೆ ದಾಳಿ ಮಾಡಿ ಕೂಡಿಹಾಕಿರುವ ದನಕರುಗಳನ್ನು ರಕ್ಷಣೆ ಮಾಡಿ ಗೋಶಾಲೆಗೆ ಸುರಕ್ಷಿತವಾಗಿ ಕಳುಹಿಸಿಕೊಟ್ಟು ಮಳಿಗೆಗಳಿ… ದಾಸ್ತಾನು ಮಾಡಿರುವ ದನಕರುಗಳ ಮಾಂಸೆ ಚರ್ಮಚನ್ನು ಮುಟ್ಟುಗೋಲು ಹಾಕಿಕೊಂಡು ವೈಜ್ಞಾನಿಕವಾಗಿ ನಷ್ಟವನ್ನುಂಟುಮಾಡಿ, ಮಳಿಗೆಗಳನ್ನು ಶಾಶ್ವತವಾಗಿ ಮುಚ್ಚಿಸಿಲಾಗಿದೆ ಎಂದು ದೂರಿನ ಹೇಳಲಾಗಿದೆ.

ಅಕ್ರಮ ಖಸಾಯಿಖಾನೆಗಳನ್ನು ನಡೆಸುತ್ತಿರುವ ಆರೋಪಿಗಳಾದ ಸಾಧಿಕ್, ರುಕಿಯಾ ನವಾಜ್ ಹಾಗೂ ಮಾಲೀಕರು ಮತ್ತು ಸಹಚರರುಗಳ ಮೇಲೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನು ಒದಿ‌ : https://cnewstv.in/?p=9746

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*