Breaking News

ಡಿವೈಡರ್ ಗೆ ಡಿಕ್ಕಿ ಹೊಡೆದ ಬೈಕ್. ಸ್ಥಳದಲ್ಲೇ ಇಬ್ಬರು ಸವಾರರ ಸಾವು..

Cnewstv.in / 07.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಡಿವೈಡರ್ ಗೆ ಡಿಕ್ಕಿ ಹೊಡೆದ ಬೈಕ್. ಸ್ಥಳದಲ್ಲೇ ಇಬ್ಬರು ಸವಾರರ ಸಾವು..

ಶಿವಮೊಗ್ಗ : ಇಬ್ಬರು ಬೈಕ್ ಸವಾರರು ಡಿವೈಡರ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಸಂಜೆ ನಗರದ ಹಾಲ್ಕೊಳ ಸರ್ಕಲ್ ಬಳಿ ನಡೆದಿದೆ.‌

ಮೃತರನ್ನು ಅಭಯ್ ಮತ್ತು ವರುಣ್ ಎಂದು ಗುರುತಿಸಲಾಗಿದೆ. FCI ಗೋಡನ್ ಹತ್ತಿರ ತಿರುವಿನಲ್ಲಿ ಅತ್ಯಂತ ವೇಗವಾಗಿ ಬೈಕನ್ನ ಚಲಾಯಿಸಿದ್ದು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿದೆ.‌ ಪರಿಣಾಮವಾಗಿ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.‌

ಇದನ್ನು ಒದಿ‌ : https://cnewstv.in/?p=9721

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*