Breaking News

ಗೃಹಬಳಕೆ LPG ಸಿಲಿಂಡರ್ ದರ ಮತ್ತಷ್ಟು ಏರಿಕೆ..

Cnewstv.in / 07.05.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಗೃಹಬಳಕೆ LPG ಸಿಲಿಂಡರ್ ದರ ಮತ್ತಷ್ಟು ಏರಿಕೆ..

ನವದೆಹಲಿ : ಈಗಾಗಲೇ ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ಸಾರ್ವಜನಿಕರು ತತ್ತರಿಸುತ್ತಿದ್ದಾರೆ. ಇದೇ ಬೆನ್ನಲ್ಲೇ ಇದೀಗ ಗೃಹಬಳಕೆ LPG ಸಿಲೆಂಡರ್ ದರ ಕೂಡಾ ಏರಿಕೆಯಾಗಿದೆ. ಗೃಹಬಳಕೆಯ 14.2 KG ತೂಕದ ಸಿಲಿಂಡರ್ ಬೆಲೆ 50 ರೂಪಾಯಿ ಏರಿಕೆಯಾಗಿದೆ.

ಕೆಲದಿನಗಳ ಹಿಂದೆ ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆಯನ್ನು 2253 ರಿಂದ 2355 ರೂಪಾಯಿ ಅದರೆ 102.50 ಪೈಸೆ ಏರಿಕೆ ಮಾಡಲಾಗಿತ್ತು. ಇದೀಗ ಗೃಹಬಳಕೆ LPG ಸಿಲಿಂಡರ್ ದರವನ್ನು ಕೂಡ ಏರಿಕೆ ಮಾಡಲಾಗಿದೆ. ನೂತನ ದರ ಇಂದಿನಿಂದಲೇ ಜಾರಿಗೆ ಬರಲಿದೆ.‌

ನೂತನ ದರದ ಅನ್ವಯ 14.2 kg ತೂಕದ ಸಬ್ಸಿಡಿ ರಹಿತ ಗೃಹಬಳಕೆ ಸಿಲೆಂಡರ್ ನ ಬೆಲೆ 999 ರೂಪಾಯಿ 55 ಪೈಸೆ ಆಗಲಿದೆ.

ಇದನ್ನು ಒದಿ‌ : https://cnewstv.in/?p=9717

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*