Breaking News

ಶಿವಮೊಗ್ಗ ಸೂಳೆಬೈಲು ರಸ್ತೆಯಲ್ಲಿ ಕಾರಿಗೆ ಕಲ್ಲುತೂರಿದ ದುಷ್ಕರ್ಮಿಗಳು.. ಕೆಲಕಾಲ ಬಿಗುವಿನ ವಾತಾವರಣ..

Cnewstv.in / 07.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಶಿವಮೊಗ್ಗ ಸೂಳೆಬೈಲು ರಸ್ತೆಯಲ್ಲಿ ಕಾರಿಗೆ ಕಲ್ಲುತೂರಿದ ದುಷ್ಕರ್ಮಿಗಳು.. ಕೆಲಕಾಲ ಬಿಗುವಿನ ವಾತಾವರಣ..

ಶಿವಮೊಗ್ಗ : ನಗರದ ಸೂಳೆಬೈಲು ಸಮೀಪದ ಇಂದಿರಾನಗರದಲ್ಲಿ ಮತ್ತೂರಿನ ಕಡೆಗೆ ಹೋಗುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.‌

ದುಷ್ಕರ್ಮಿಗಳ ಈ ಕೃತ್ಯದಿಂದಾಗಿ ಕಾರಿನ ಹಿಂಬದಿಯ ಗ್ಲಾಸ್ ಪೀಸ್ ಪೀಸ್ ಅಗಿದೆ.‌ ಕೆಲಸಮಯ ಸೂಳೆಬೈಲಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆದರೆ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿದ್ದು ತಿಳಿಗೊಳಿಸಿದ್ದಾರೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಅಂಗಡಿ-ಮುಂಗಟ್ಟುಗಳನ್ನು
ಬಂದು ಮಾಡಿಸಿ ಜನರು ಗುಂಪು ಸೇರದಂತೆ ನಿಯಂತ್ರಿಸಿದ್ದಾರೆ.‌

ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಹಾಗೂ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ.

ಇದನ್ನು ಒದಿ‌ : https://cnewstv.in/?p=9704

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*