Breaking News

B H ರಸ್ತೆಯ ಫುಟ್‍ಪಾತ್‍ನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ.

Cnewstv.in / 06.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

B H ರಸ್ತೆಯ ಫುಟ್‍ಪಾತ್‍ನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ.

ಶಿವಮೊಗ್ಗ : ಏಪ್ರಿಲ್ 22 ರಂದು ನಗರದ ಬಿ.ಹೆಚ್ ರಸ್ತೆಯ ಪಿಂಗಾರ ಬಾರ್ ಎದುರಿನ ಫುಟ್‍ಪಾತ್‍ನಲ್ಲಿ ಸುಸ್ತಾಗಿ ಬಿದ್ದಿದ್ದ ಸುಮಾರು 40 ರಿಂದ 45 ವರ್ಷದ ಅಪರಿಚಿತ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದಾಗ ವ್ಯಕ್ತಿಯು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಅಪರಿಚಿತ ವ್ಯಕ್ತಿಯ ಶವವು ಸುಮಾರು 06 ಅಡಿ ಎತ್ತರವಿದ್ದು, ಕಪ್ಪು ಮೈಬಣ್ಣ, ಕೋಲು ಮುಖ, ತೆಳವಾದ ಮೈಕಟ್ಟು ಹೊಂದಿರುತ್ತಾನೆ. ತಲೆಯಲ್ಲಿ ಸುಮಾರು 03 ಇಂಚು ಉದ್ದದ ಕಪ್ಪು ಕೂದಲು, ಬಿಳಿ ಕಪ್ಪು ಮಿಶ್ರಿತ ಗಡ್ಡ ಮೀಸೆ ಇದ್ದು, ಕೆಂಪು ಗೆರೆಗಳುಳ್ಳ ಬಿಳಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಮಾಸಲು ಪ್ಯಾಂಟ್ ಧರಿಸಿರುತ್ತಾನೆ. ಈತನ ಶವವನ್ನು ಮೆಗ್ಗಾನ್ ಆಸ್ಪತೆ ಚಿತಾಗಾರದಲ್ಲಿ ಇರಿಸಲಾಗಿದೆ. ಈ ಶವದ ವಾರದುದಾರರು ಯಾರಾದರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಇದನ್ನು ಒದಿ‌ : https://cnewstv.in/?p=9701

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*