Cnewstv.in / 05.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನೂರಾರು ಜನ ಓಡಾಡುವ ರಸ್ತೆ ಡಿವೈಡರ್ ನಲ್ಲಿ ರಾಶಿ ರಾಶಿ ಖಾಲಿ ಮದ್ಯದ ಬಾಟಲಿಗಳು..
ಶಿವಮೊಗ್ಗ : ಶಿವಮೊಗ್ಗ ಸ್ಮಾರ್ಟ್ ಸಿಟಿ ಯಾಗಿದ್ದು ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಲಾಗಿದೆ ಎಂಬ ಮಾತು ಕೇವಲ ಮಾತಾಗಿಯೇ ಉಳಿದಿದೆ. ಪ್ರತಿದಿನ ಕಸವನ್ನು ತೆಗೆದುಕೊಂಡು ಹೋಗಲು ಕಸದ ಗಾಡಿ ಬರುತ್ತಿದ್ದರು ಸಹ ಜನರು ರಸ್ತೆ ಮಧ್ಯೆ ಕಸವನ್ನು ಹಾಕುವುದನ್ನು ಬಿಟ್ಟಿಲ್ಲ.
ನಗರದ ಪ್ರಮುಖ ರಸ್ತೆಯಲ್ಲಿ ನೂರಾರು ಜನ ಓಡಾಡುವ ರಸ್ತೆಯ ಮಧ್ಯದಲ್ಲಿಯೇ ಮದ್ಯದ ಬಾಟಲಿಗಳನ್ನು ಬಿಸಾಡಲಾಗಿದೆ.
ಇಂದು ಬೆಳ್ಳಂಬೆಳಗ್ಗೆ ನೂರಾರು ಜನ ಓಡಾಡುವ ಎಪಿಎಂಸಿ ತರಕಾರಿ ಮಾರುಕಟ್ಟೆಯ ಡಿವೈಡರ್ ಮಧ್ಯೆ ರಾಶಿಗಟ್ಟಲೆ ಖಾಲಿ ಮದ್ಯದ ಬಾಟಲಿಗಳನ್ನು ಹಾಗೂ ಕಸವನ್ನು ಬಿಸಾಡಲಾಗಿದೆ.
ಈ ರಸ್ತೆಯಲ್ಲಿ ಪ್ರತಿದಿನ ನೂರಾರು ಮಂದಿ ತರಕಾರಿ ಕೊಳ್ಳಲು ಬರುತ್ತಾರೆ ಹಾಗೂ ಅನೇಕ ಮಂದಿ ವಾಕಿಂಗ್ ಮಾಡುತ್ತಾರೆ. ಈ ರೀತಿ ರಸ್ತೆ ಮಧ್ಯೆ ಖಾಲಿ ಬಾಟಲಿಗಳು ಬಿದ್ದಿದ್ದರು ಸಹ ಸಂಬಂಧಪಟ್ಟವರು ಇತ್ತ ಗಮನ ಹರಿಸುತ್ತಿಲ್ಲ.
ಈ ಭಾಗದಲ್ಲಿ ಹಿಂದೆಯೂ ಸಹ ಇದೇ ರೀತಿ ಸಮಸ್ಯೆಯಾಗಿತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಎದುರಾಗದಂತೆ ಮಹಾನಗರ ಪಾಲಿಕೆಯವರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ಸಾರ್ವಜನಿಕರ ಆಶಯ..
ಇದನ್ನು ಒದಿ : https://cnewstv.in/?p=9689
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
C News TV Kannada News Online in cnewstv