Breaking News

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನೂ ಆಕಾಂಕ್ಷಿ – ವೈ.ಹೆಚ್. ನಾಗರಾಜ್

Cnewstv.in / 04.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನೂ ಆಕಾಂಕ್ಷಿ – ವೈ.ಹೆಚ್. ನಾಗರಾಜ್

ಶಿವಮೊಗ್ಗ : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನೂ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ವೈ.ಹೆಚ್. ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್‍ಗಾಗಿ ಒಂದು ಲಕ್ಷ ರೂ. ಡಿಪಾಜಿಟ್ ನೀಡಿ ಅರ್ಜಿ ಸಲ್ಲಿಸಿದ್ದೆ. ಪಕ್ಷ ಟಿಕೆಟ್ ನೀಡುವ ಭರವಸೆಯಿಂದ ನಾಮಪತ್ರವನ್ನೂ ಸಲ್ಲಿಸಿದ್ದೆ. ಅಗ ನಾಮಪತ್ರವನ್ನ ವಾಪಾಸ್ ಪಡೆಯಲು ಪಕ್ಷದ ಮುಖಂಡರು ತಿಳಿಸಿದ್ದರು ಮತ್ತು ಮುಂದಿನ ವಿಧಾನಸಭೆ ಚುನಾವಣೆಗೆ ಅವಕಾಶ ಕೊಡುವುದಾಗಿಯೂ ಭರವಸೆ ನೀಡಿದ್ದರಿಂದ ನಾಮಪತ್ರ ವಾಪಾಸ್ ಪಡೆದಿದ್ದೆ. ಈ ಬಾರಿಯ ಚುನಾವಣೆಗೆ ನನಗೆ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಡಿಎಸ್‍ಪಿ ಮಂಜಪ್ಪ, ನಿವೃತ್ತ ವೃತ್ತ ನಿರೀಕ್ಷಕ ಗಣೇಶ್, ನಿವೃತ್ತ ಡಿಡಿಪಿಐ ಎನ್.ಎಸ್. ಕುಮಾರ್ ಇದ್ದರು.

ಇದನ್ನು ಒದಿ‌ : https://cnewstv.in/?p=9680

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*