ಕಾಗೋಡು ತಿಮ್ಮಪ್ಪ ಪುತ್ರಿ ಡಾ. ರಾಜನಂದಿನಿಗೆ ಕೊಲೆ ಬೆದರಿಕೆ..
Cnewstv.in / 04.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕಾಗೋಡು ತಿಮ್ಮಪ್ಪ ಪುತ್ರಿ ಡಾ. ರಾಜನಂದಿನಿಗೆ ಕೊಲೆ ಬೆದರಿಕೆ..
ಶಿವಮೊಗ್ಗ : ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ
ಕಾಗೋಡು ತಿಮ್ಮಪ್ಪ ನವರ ಪುತ್ರಿ ಡಾ. ರಾಜನಂದಿನಿ ಅವರಿಗೆ ಯುವಕನೊಬ್ಬನ ಕೊಲೆ ಬೆದರಿಕೆ ಹಾಕಿ, ಕಾರು ಚಾಲಕನ ಮೇಲೆ ಹಲ್ಲೆ ಮಾಡಲು ಮುಂದಾದ ಘಟನೆ ನಡೆದಿದೆ.
ಕಾಗೋಡು ತಿಮ್ಮಪ್ಪ ಫೌಂಡೇಶನ್ ವತಿಯಿಂದ ಸಾಗರ ತಾಲೂಕಿನ ಸುತ್ತಮುತ್ತ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ. ಮೇ 2 ರಂದು ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದಲ್ಲಿ ಅಯೋಜನೆ ಮಾಡಿದ ಉಚಿತ ಆರೋಗ್ಯ ಶಿಬಿರ ಮುಗಿಸಿಕೊಂಡು ಸಾಗರಕ್ಕೆ ಹೋಗುವಾಗ ಈ ಘಟನೆ ನಡೆದಿದೆ.
ಅರೋಗ್ಯ ಶಿಬಿರ ಮುಗಿಸಿಕೊಂಡು ರಾಜನಂದಿನಿಯವರು ಬೇರೊಂದು ಕಾರಿನಲ್ಲಿ ತೆರಳಿದ್ದರು ಅವರ ಕಾರಿನಲ್ಲಿ ಫೌಂಡೇಶನ್ನಿನ ಇತರ ಸದಸ್ಯರು ಪ್ರಯಾಣಿಸುತ್ತಿದ್ದರು. ಈ
ವೇಳೆ ಮಾರಿಗುಡಿ ಸಮೀಪ ರಾಜನಂದಿಯವರ ಕಾರನ್ನು ಅಡ್ಡಗಟ್ಟಿ ಮಂಜು ಎಂಬ ಯುವಕ ರಾಜನಂದಿನಿಯವರ ಮೇಲೆ ಕೊಲೆಬೆದರಿಕೆ ಒಡ್ಡಿ, ಚಾಲಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಈ ಸಂಬಂಧ ಕಾರು ಚಾಲಕ ಪ್ರಕಾಶ್ ಅವರು ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಒದಿ : https://cnewstv.in/?p=9670
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ಕಾಗೋಡು ತಿಮ್ಮಪ್ಪ ಪುತ್ರಿ ಡಾ. ರಾಜನಂದಿನಿಗೆ ಕೊಲೆ ಬೆದರಿಕೆ.. 2022-05-04