Breaking News

ರಾಜಧಾನಿಯಲ್ಲಿ ಮತ್ತೆರಡು ದಿನ ಮಳೆಯಾಗುವ ಸಾಧ್ಯತೆ..

Cnewstv.in / 02.05.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ರಾಜಧಾನಿಯಲ್ಲಿ ಮತ್ತೆರಡು ದಿನ ಮಳೆಯಾಗುವ ಸಾಧ್ಯತೆ..

ಬೆಂಗಳೂರು : ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಮತ್ತೊಂದೆಡೆ ಭಾರಿ ಮಳೆ ರಾಜಧಾನಿಯಲ್ಲಿ ಅವಾಂತರವನ್ನೇ ಸೃಷ್ಟಿಸಿದೆ.

ನಿನ್ನೆ ಸಂಜೆ ಎರಡು ಗಂಟೆ ಸುರಿದ ಭಾರೀ ಮಳೆಗೆ ರಾಜಧಾನಿ ನಗರ ತತ್ತರಿಸಿದೆ. ಜೆಸಿ ರಸ್ತೆ, ಚಂದ್ರ ಲೇಔಟ್ ಬನ್ನೇರುಘಟ್ಟ ರಸ್ತೆ, ಕೋರಮಂಗಲಣ ಜಯಮಹಲ್ ರಸ್ತೆ ಸೇರಿದಂತೆ ದಕ್ಷಿಣ ಬೆಂಗಳೂರಿನ ಸುತ್ತಮುತ್ತ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ವ್ಯತ್ಯಯವಾಗಿದೆ.

ಇನ್ನು ಎರಡು ದಿನ ರಾಜಧಾನಿಯಲ್ಲಿ ವರುಣನ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನು ಒದಿ‌ : https://cnewstv.in/?p=9645

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*