Breaking News

ಕುವೆಂಪು ವಿಶ್ವವಿದ್ಯಾಲಯದ 32ನೇ ವಾರ್ಷಿಕ ಘಟಿಕೋತ್ಸವ.

Cnewstv.in / 01.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕುವೆಂಪು ವಿಶ್ವವಿದ್ಯಾಲಯದ 32ನೇ ವಾರ್ಷಿಕ ಘಟಿಕೋತ್ಸವ.

ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ 32ನೇ ವಾರ್ಷಿಕ ಘಟಿಕೋತ್ಸವವು ಮೇ-2022ರಲ್ಲಿ ಜರುಗಲಿದ್ದು, ಮಾರ್ಚ್-2021ರ ನಂತರದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ರೆಗ್ಯೂಲರ್‍ನ ವಿವಿಧ ಸ್ನಾತಕ/ಸ್ನಾತಕೋತ್ತರ ಪದವಿ, ಡಿಪ್ಲೊಮಾ/ಪಿಹೆಚ್.ಡಿ., ಪಡೆದವರು ಹಾಗೂ ಪಿಹೆಚ್.ಡಿ. ಪದವಿಯ ಅರ್ಹ ಅಭ್ಯರ್ಥಿಗಳು ಮತ್ತು ದೂರಶಿಕ್ಷಣದ ಮೂಲಕ ಆಗಸ್ಟ್-2021ರಲ್ಲಿ ನಡೆದ ಅಂತಿಮ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಹಾಗು ಪಿಹೆಚ್.ಡಿ. ಪದವಿ ಪಡೆದ ಅರ್ಹ ಅಭ್ಯರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಗುವುದು.

ಅರ್ಜಿಯನ್ನು ನೇರವಾಗಿ ಆನ್‍ಲೈನ್‍ನಲ್ಲಿ ವಿಶ್ವವಿದ್ಯಾಲಯದ ವೆಬ್‍ಸೈಟ್ www.kuvempur.ac.in ಮೂಲಕ ನೋಂದಣಿ ಸಂಖ್ಯೆಗಳನ್ನು ಬಳಸಿ ಸಲ್ಲಿಸಬಹುದಾಗಿದೆ.

ಈ ಕುರಿತು ವಿವರ ಹಾಗೂ ನಿಗದಿತ ಶುಲ್ಕ ಮತ್ತು ಇತರೆ ಮಾಹಿತಿಗಳಿಗೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವೆಬ್‍ಸೈಟ್‍ನಲ್ಲಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸ್ನಾತಕ ಪದವಿ(ರೆಗ್ಯೂಲರ್)-7022254997, ಸ್ನಾತಕೋತ್ತರ ಪದವಿ/ವೃತ್ತಿಪರ ಕೋರ್ಸ್ (ರೆಗ್ಯೂಲರ್)-7022254993, ದೂರಶಿಕ್ಷಣ-7022255891, ತಾಂತ್ರಿಕ ಸಹಾಯಕ್ಕಾಗಿ 7022255745/ 8183098136/ 8183098138 ಅಥವಾ ಇಮೇಲ್ kusconvo@gmail.com ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಕುವೆಂಪು ವಿವಿ ಕುಲಸಚಿವರು (ಮೌಲ್ಯಮಾಪನ) ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಇದನ್ನು ಒದಿ‌ : https://cnewstv.in/?p=9631

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

 

Leave a Reply

Your email address will not be published. Required fields are marked *

*