ರಣ ಬಿಸಿಲಿಗೆ ತತ್ತರಿಸಿದ ಉತ್ತರಭಾರತ : ಆರೆಂಜ್ ಅಲರ್ಟ್ ಘೋಷಣೆ.
Cnewstv.in / 29.04.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ರಣ ಬಿಸಿಲಿಗೆ ತತ್ತರಿಸಿದ ಉತ್ತರಭಾರತ : ಆರೆಂಜ್ ಅಲರ್ಟ್ ಘೋಷಣೆ.
ನವದೆಹಲಿ : ಉತ್ತರಭಾರತ ರಣ ಬಿಸಿಲಿಗೆ ತತ್ತರಿಸಿದೆ. ಬಿಸಿಲ ಬೇಗೆಗೆ ಜನ ಹೈರಾಣಾಗುತ್ತಾರೆ. ಬಿಸಿಲು ಭಾರತದಲ್ಲಿ ದಾಖಲೆಯ ಪ್ರಮಾಣಕ್ಕೆ ಏರಿಕೆಯಾಗಿದ್ದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಭಾರತಿಯ ಹವಾಮಾನ ಇಲಾಖೆಯ ಪ್ರಕಾರ ಉತ್ತರ ಭಾರತದ ಈ ಐದು ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಉಷ್ಣಾಂಶ ಮತ್ತಷ್ಟು ಏರಿಕೆಯಾಗಲಿದೆ ಎಂದು ಆರೆಂಜ್ ಅಲರ್ಟ್ ಘೋಷಿಸಿ ಜನರಿಗೆ ಎಚ್ಚರಿಕೆಯನ್ನು ನೀಡಿದೆ.
ದೆಹಲಿ, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ಈಗಾಗಲೇ ಸರಿ ಸುಮಾರು 45 ಡಿಗ್ರಿ ಸೆಲ್ಸಿಯಸ್ ಗಿಂತಲೂ ಅಧಿಕ ಪ್ರಮಾಣದಲ್ಲಿ ತಾಪಮಾನ ದಾಖಲಾಗಿದೆ. ಇನ್ನು ಮುಂದಿನ ಎರಡು ಮೂರು ದಿನಗಳಲ್ಲಿ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಏರಿಕೆ ಆಗಲಿದೆಯಂತೆ..
ಪ್ರಸ್ತುತ ಮಧ್ಯಪ್ರದೇಶ 43.5 ಸೆಲ್ಸಿಯಸ್, ರಾಜಸ್ಥಾನ 45.5 ಸೆಲ್ಸಿಯಸ್, ಓಡಿಸಾ 44.5 ಸೆಲ್ಸಿಯಸ್, ನವದೆಹಲಿ 43.5 ಸೆಲ್ಸಿಯಸ್, ಉತ್ತರ ಪ್ರದೇಶ 45.9 ಸೆಲ್ಸಿಯಸ್ ನಷ್ಟು ಉಷ್ಣಾಂಶ ದಾಖಲಾಗಿದೆ.
ಇದನ್ನು ಒದಿ : https://cnewstv.in/?p=9623
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ರಣ ಬಿಸಿಲಿಗೆ ತತ್ತರಿಸಿದ ಉತ್ತರಭಾರತ : ಆರೆಂಜ್ ಅಲರ್ಟ್ ಘೋಷಣೆ. 2022-04-29