Breaking News

PSI ನೇಮಕಾತಿ ಪರೀಕ್ಷೆ ಹಗರಣ : ಕೊನೆಗೂ ಸಿಕ್ಕಿಬಿದ್ದ ಪ್ರಮುಖ ಅರೋಪಿ ದಿವ್ಯ ಹಾಗರಗಿ.

Cnewstv.in / 29.04.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

PSI ನೇಮಕಾತಿ ಪರೀಕ್ಷೆ ಹಗರಣ : ಕೊನೆಗೂ ಸಿಕ್ಕಿಬಿದ್ದ ಪ್ರಮುಖ ಅರೋಪಿ ದಿವ್ಯ ಹಾಗರಗಿ.

ಬೆಂಗಳೂರು : PSI ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿದ್ದ ಬಿಜೆಪಿಯ ನಾಯಕಿ ದಿವ್ಯ ಹಾಗರಗಿಯನ್ನು ಸಿಐಡಿ ತಂಡ ಬಂಧಿಸಿದ್ದಾರೆ.

ಕಲಬುರ್ಗಿಯ ದಿವ್ಯಾ ಮತ್ತು ಆಕೆಯ ಪತಿಯ ಒಡೆತನಕ್ಕೆ ಸೇರಿದ ಜ್ಙಾನಜ್ಯೋತಿ ಶಾಲೆಯಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ಕೇಂದ್ರವಾಗಿತ್ತು. ಅಲ್ಲಿ OMR ಶೀಟ್ ತಿದ್ದುಪಡಿ ಹಾಗೂ ಬ್ಲೂಟೂತ್ ಮೂಲಕ ಅಕ್ರಮ ನಡೆಸಲಾಗಿತ್ತು.

ಈ ಪ್ರಕರಣದಲ್ಲಿ FIR ದಾಖಲಾಗುತ್ತಿದ್ದಂತೆ ದಿವ್ಯ ನಾಪತ್ತೆಯಾಗಿದ್ದರು. ನೆನ್ನೆ ರಾತ್ರಿ ಮಹಾರಾಷ್ಟ್ರದ ಪುಣೆಯ ಹೋಟೆಲೊಂದರಲ್ಲಿ ಊಟ ಮಾಡುವ ಸಮಯದಲ್ಲಿ ಸಿಐಡಿ ಪೊಲೀಸರು ದಾಳಿ ನಡೆಸಿ ದಿವ್ಯಾನನ್ನು ಬಂಧಿಸಿದ್ದಾರೆ.

ಪಿಎಸ್ಐ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 23 ಆರೋಪಿಗಳನ್ನು ಬಂಧಿಸಿದ್ದಾರೆ. ದಿವ್ಯಾ ಬಂಧನದ ನಂತರ ಈ ಪ್ರಕರಣ ಯಾವ ರೀತಿಯ ಸ್ವರೂಪವನ್ನು ಪಡೆದುಕೊಳ್ಳುತ್ತದೆ ಎಂದು ಕುತೂಹಲವನ್ನು ಮೂಡಿಸಿದೆ.

ಇದನ್ನು ಒದಿ‌ : https://cnewstv.in/?p=9621

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*