Breaking News

“ನೆರವಿನ ವಾಸಿಸುವ ಮನೆ” ಗಾಗಿ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ.

Cnewstv.in / 28.04.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

“ನೆರವಿನ ವಾಸಿಸುವ ಮನೆ” ಗಾಗಿ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ.

ಶಿವಮೊಗ್ಗ : ಬೆಂಗಳೂರಿನಲ್ಲಿ “ಪಾವತಿಸಿ & ವಾಸಿಸು” (PAY & STAY) ಎಂಬ ಪರಿಕಲ್ಪನೆಯಡಿಯಲ್ಲಿ ಹಿರಿಯ / ವಯೋವೃದ್ದ ಮಾಜಿ ಸೈನಿಕರಿಗಾಗಿ “ನೆರವಿನ ವಾಸಿಸುವ ಮನೆ” (Assisted Living Home) ಯನ್ನು ಸ್ಥಾಪಿಸುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರಸ್ತಾವನೆಗಾಗಿ ಸಮೀಕ್ಷೆಯನ್ನು ನಡೆಸಲಾಗುತ್ತಿದ್ದು, ಆಸಕ್ತ ಅರ್ಹ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಷರತ್ತುಗಳಿಗೆ ಒಳಪಟ್ಟು ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರಿಗೆ ಮಾಹಿತಿಯನ್ನು ನೀಡಲು ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಅರ್ಹತೆ: ಎಲ್ಲಾ ಹಿರಿಯ ಮಾಜಿ ಸೈನಿಕರು : ಸ್ವತಃ / ದಂಪತಿಗಳು.

ವಯೋಮಿತಿ : 70 ವರ್ಷಗಳು & ಅದಕ್ಕಿಂತ ಮೇಲಿರುವವರು.
ವೈದ್ಯಕೀಯ ಸ್ಥಿತಿ: ಅಂಗೀಕರಿಸಲರ್ಹ ವೈದಕೀಯ ಸ್ಥಿತಿ & ಮಾನಸಿಕ ಸ್ಥಿತಿ, 24 ಘಂಟೆ ಗಮನಿಸಬೇಕಾದ ಕಾಯಿಲೆಗಳಿರಬಾರದು. ಜೀವಕ್ಕೆ ಆಪತ್ತುಳ್ಳ ಅಥವಾ ತೀವ್ರ ಅನಾರೋಗ್ಯದಿಂದಿರಬಾರದು. ಅಂಗವಿಕಲತೆ/ಹಾಸಿಗೆ ಹಿಡಿದ/ಗಾಲಿಕುರ್ಚಿ ಹಿನ್ನೆಲೆಯುಳ್ಳವರಾಗಿರಬಾರದು. ನಿರಂತರ ವೈದ್ಯಕೀಯ ಆರೈಕೆಯಲ್ಲಿರದ ಮಾರಣಾಂತಿಕ ಕಾಯಿಲೆಯವರು.

ಆದ್ಯತೆ: ಆಸ್ತಿ / ಮಕ್ಕಳನ್ನು ಹೊಂದಿರದ ವಿಧವೆಯರು/ಪತಿ ಅಥವಾ ಪತ್ನಿ/ದಂಪತಿಗಳು. ಆಸ್ತಿಯನ್ನು ಹೊಂದಿರದ ವಿಧವೆಯರು/ಪತಿ ಅಥವಾ ಪತ್ನಿ/ದಂಪತಿಗಳು. ಮಕ್ಕಳಿಲ್ಲದ ವಿಧವೆಯರು/ಪತಿ ಅಥವಾ ಪತ್ನಿ/ದಂಪತಿಗಳು. ವಿದೇಶದಲ್ಲಿರುವ ಮಕ್ಕಳನ್ನು ಹೊಂದಿರುವ ವಿಧವೆಯರು/ಪತಿ ಅಥವಾ ಪತ್ನಿ/ದಂಪತಿಗಳು.

ಸೌಲಭ್ಯಗಳು: ಆಹಾರ ಸೌಲಭ್ಯ, ಭೋಜನಾಲಯದೊಂದಿಗೆ ಊಟೋಪಚಾರದ ವ್ಯವಸ್ಥೆ. ಮನೋರಂಜನೆಯ ಕೊಠಡಿ. ಸರ್ವ ಧರ್ಮ ಸ್ಥಳ. ಗ್ರಂಥಾಲಯ (ಲೈಬ್ರರಿ). ಲಿಫ್ಟ್/ಗಾಲಿ ಕುರ್ಚಿ. ವಿದ್ಯುತ್ ಬ್ಯಾಕಪ್. ದೈನಂದಿನ ಶುಚಿತ್ವ. 24 ಘಂಟೆಗಳ ಭದ್ರತೆ. ಡಿ.ಟಿ.ಎಚ್ / ಕೇಬಲ್ ಟಿ.ವಿ. ಹಾಗೂ ವ್ಯಾಯಾಮ ಶಾಲೆ (ಜಿಮ್). ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಕಛೇರಿಯ 08182-220925 ಸಂಖ್ಯೆಯನ್ನು ಅಥವಾ ಇಮೇಲ್ : soldiersshimoga@gmail.com ಗೆ ಸಂಪರ್ಕಿಸಬಹುದಾಗಿದೆ.

ಇದನ್ನು ಒದಿ‌ : https://cnewstv.in/?p=9598

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Hosanagara JDS Kerala K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments