ರಾಜ್ಯದಲ್ಲಿ ಕೊರೊನಾ 4 ನೇ ಅಲೆ ಭೀತಿ : ಕೋವಿಡ್ ನ R ಮೌಲ್ಯ 0.95ಕ್ಕೆ ಏರಿಕೆ.
Cnewstv.in / 23.04.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ರಾಜ್ಯದಲ್ಲಿ ಕೊರೊನಾ 4 ನೇ ಅಲೆ ಭೀತಿ : ಕೋವಿಡ್ ನ R ಮೌಲ್ಯ 0.95ಕ್ಕೆ ಏರಿಕೆ.
ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೋನಾ ನಾಲ್ಕನೆಯ ಅಲೆ ಎದುರಾಗುವ ಎಲ್ಲಾ ಸಾಧ್ಯತೆಗಳು ಗೋಚರವಾಗುತ್ತಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ 5 ರಾಜ್ಯಗಳ ಪೈಕಿ ಕರ್ನಾಟಕವೂ ಸೇರಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಭಾರತದಲ್ಲಿ ಕೊರೊನಾ R ಮೌಲ್ಯ 1 ದಾಟಿದೆ. ಈ ಬಗ್ಗೆ ಖ್ಯಾತ ಸಾಂಕ್ರಾಮಿಕ ರೋಗ ತಜ್ಞರು ಡಾ.ಗಿರಿಧರ ಬಾಬು ಟ್ವಿಟರ್ ನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಮುಂದಿನ ತಿಂಗಳಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
R ಮೌಲ್ಯವು ಒಂದಕ್ಕಿಂತ ಹೆಚ್ಚಾಗಿದ್ದಾರೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ ಅದರ ಮೌಲ್ಯ ಕಡಿಮೆ ಇದ್ದರೆ ಮಾತ್ರ ರೋಗ ಹರಡುವುದನ್ನು ತಡೆಗಟ್ಟಿ ನಿಲ್ಲಿಸುತ್ತದೆ.
R ಮೌಲ್ಯ ಎಂದರೇನು ??
R ಮೌಲ್ಯವು ಕೊರೋನಾ ವೈರಸ್ ಅಥವಾ ಯಾವುದೇ ರೋಗಗಳನ್ನು ಹರಡುವ ಸಾಮರ್ಥ್ಯವನ್ನು ರೇಟಿಂಗ್ ಮಾಡುವ ಒಂದು ವಿಧಾನ. R ಎಂಬುದು ಒಬ್ಬ ಸೋಂಕಿತ ವ್ಯಕ್ತಿಯು ಸರಾಸರಿಯಾಗಿ ವೈರಸ್ ಅನ್ನು ಹರಡುವ ಜನರ ಸಂಖ್ಯೆ. SARS-CoV02 ಸುಮಾರು ಮೂರು ಸಂತಾನೋತ್ಪತ್ತಿ ಸಂಖ್ಯೆಯನ್ನು ಹೊಂದಿರುತ್ತದೆ.
R ಮೌಲ್ಯ 1 ರ ಸಮೀಪದಲ್ಲಿರುವ ರಾಜ್ಯಗಳು. :
ಕರ್ನಾಟಕ 0.95, ಹಿಮಾಚಲ ಪ್ರದೇಶ 0.96, ಬಿಹಾರ 0.94, ಮಣಿಪುರ 0.99, ಮಹಾರಾಷ್ಟ್ರ 0.94, ರಾಜ್ಯಸ್ಥಾನ 0.93, ಗೋವಾ 0.93, ತಮಿಳುನಾಡು 0.92
ಇದನ್ನು ಒದಿ : https://cnewstv.in/?p=9530
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ರಾಜ್ಯದಲ್ಲಿ ಕೊರೊನಾ 4 ನೇ ಅಲೆ ಭೀತಿ : ಕೋವಿಡ್ ನ R ಮೌಲ್ಯ 0.95ಕ್ಕೆ ಏರಿಕೆ. 2022-04-23