Breaking News

ಪುಣ್ಯಕೋಟಿ ಕಥೆಯ ವ್ಯಕ್ತಿತ್ವ ಹೊಂದಿರುವವರು ನನ್ನ ಸಹೋದರಿ ಶಾರದಾ ಪೂರ್ಯಾನಾಯ್ಕ್ – ಹೆಚ್ ಡಿ ಕುಮಾರಸ್ವಾಮಿ

Cnewstv.in / 22.04.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಪುಣ್ಯಕೋಟಿ ಕಥೆಯ ವ್ಯಕ್ತಿತ್ವ ಹೊಂದಿರುವವರು ನನ್ನ ಸಹೋದರಿ ಶಾರದಾ ಪೂರ್ಯಾನಾಯ್ಕ್ – ಹೆಚ್ ಡಿ ಕುಮಾರಸ್ವಾಮಿ

ಶಿವಮೊಗ್ಗ : ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆಗ್ರಹಿಸಿ ಜೆಡಿ ಎಸ್ ನಿಂದ ಹಮ್ಮಿಕೊಂಡಿರುವ ಜನತಾ ಜಲಧಾರೆ ರಥಯಾತ್ರೆ ಇಂದು ಶಿವಮೊಗ್ಗದಲ್ಲಿ ನಡೆಯಿತು.‌

ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ರವರು ಪುಣ್ಯಕೋಟಿ ಕಥೆಯ ವ್ಯಕ್ತಿತ್ವವನ್ನು ಹೊಂದಿದ್ದಾರೆ.

ಕಳೆದ ಚುನಾವಣೆಯಲ್ಲಿ ಅವರು ಸೋತಿರಬಹುದು ಆದರೆ ಅನೇಕ ಕುಟುಂಬಗಳು ಅವರಿಗೆ ಅನ್ಯಾಯವಾಗಿದೆಯೆಂದು ಕಣ್ಣೀರಾಕಿ ನೊಂದುಕೊಂಡಿದ್ದಾರೆ. ಪುಣ್ಯಕೋಟಿ ಕಥೆಯಲ್ಲಿ ಬರುವ ಹಾಗೆ ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒದೆಯಬೇಡಿ ಎಂಬ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಜನಪ್ರತಿನಿಧಿಯಾಗಿ ಕೆಲಸ ಮಾಡಲು ಅತ್ಯಂತ ಸೂಕ್ತವಾದ ವ್ಯಕ್ತಿ ಎಂದರು.

ಇದನ್ನು ಒದಿ‌ : https://cnewstv.in/?p=9528

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*