Breaking News

ಕರ್ನಾಟಕದಲ್ಲಿ ರೈತ ಮಂತ್ರ ಪಠಿಸುತ್ತಿರುವ ಎಎಪಿ. ಹೊಸ ಅಲೆ ಸೃಷ್ಟಿ ಮಾಡುತ್ತಿದ್ದಾರಾ ಅರವಿಂದ್ ಕೇಜ್ರಿವಾಲ್ ??

Cnewstv.in / 22.04.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕರ್ನಾಟಕದಲ್ಲಿ ರೈತ ಮಂತ್ರ ಪಠಿಸುತ್ತಿರುವ ಎಎಪಿ. ಹೊಸ ಅಲೆ ಸೃಷ್ಟಿ ಮಾಡುತ್ತಿದ್ದಾರಾ ಅರವಿಂದ್ ಕೇಜ್ರಿವಾಲ್ ??

ಬೆಂಗಳೂರು : ಮುಂಬರಲಿರುವ ಚುನಾವಣೆಗೆ ಎಎಪಿ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವ ಅರವಿಂದ್ ಕೇಜ್ರಿವಾಲ್ ಇದೀಗ ಕರ್ನಾಟಕದಲ್ಲಿ ರೈತ ಮಂತ್ರ ಪಠಿಸುವ ಮೂಲಕ ಹೊಸ ಅಲೆಯನ್ನು ಸೃಷ್ಟಿ ಮಾಡಲು ಹೊರಟಿದ್ದಾರೆ.

ಈಗಾಗಲೇ ಪಂಜಾಬ್ ನಲ್ಲಿ ದಿಗ್ವಿಜಯ ಸಾಧಿಸಿರುವ ಎಎಪಿ. ಇತರ ರಾಜ್ಯಗಳಲ್ಲೂ ಸಹ ತಮ್ಮ ವಿಜಯಯಾತ್ರೆಯನ್ನು ವಿಸ್ತರಣೆ ಮಾಡುವ ಗುರಿಯನ್ನು ಹೊಂದಿದೆ. ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಮಾಡುವುದರ ಮೂಲಕ ಅರವಿಂದ್ ಕೇಜ್ರಿವಾಲ್ ಎಎಪಿ ಪಕ್ಷವನ್ನು ಮತ್ತಷ್ಟು ಸದೃಢ ಗೊಳಿಸಿದ್ದಾರೆ.

ದೇಶದೆಲ್ಲೆಡೆ ಗಲಭೆಗಳು ನಡೆಯುತ್ತಿದ್ದು ಅದನ್ನ ಯಾರು ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ದೇಶದ ಜನರಿಗೆ ಶಾಂತಿ ಬೇಕು, ಗಲಭೆ ಅಲ್ಲ. ನಿಮಗೆ ದಂಗೆಕೋರರು ಬೇಕಾದರೆ ಅವರಿಗೆ ಮತ ನೀಡಿ ನಿಮಗೆ ಶಾಲೆ,ಆಸ್ಪತ್ರೆಗಳು ಬೇಕಾದರೆ ನಮಗೆ ಮತ ನೀಡಿ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಹಿಂದಿನ ಸರ್ಕಾರ 20% ಸರ್ಕಾರ, ಈಗ 40% ಸರ್ಕಾರ. ದೆಹಲಿಯಲ್ಲಿ ಒಂದು ಪೈಸೆ ಲಂಚ ತೆಗೆದುಕೊಳ್ಳದ ನಿಷ್ಠಾವಂತ ಪ್ರಾಮಾಣಿಕ ಸರ್ಕಾರವಿದೆ, ಅದರ ಪ್ರಮಾಣಪತ್ರವನ್ನು ನಾನು ಪ್ರಧಾನಿ ಮೋದಿಯಿಂದ ತಂದಿದ್ದೇನೆ. ಪ್ರಧಾನಿಗೆ ಸಿಬಿಐ, ಐಟಿ ದಾಳಿಯಾದರೂ ಏನೂ ಸಿಗಲಿಲ್ಲ ಎಂದರು.

ಇದನ್ನು ಒದಿ‌ : https://cnewstv.in/?p=9522

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*