Breaking News

ಗೃಹಖಾತೆ ನಿಭಾಯಿಸುವ ಶಕ್ತಿ ಇದೆ : ಬಿಸಿ ಪಾಟೀಲ್

Cnewstv.in / 22.04.2022 / ಮೈಸೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಗೃಹಖಾತೆ ನಿಭಾಯಿಸುವ ಶಕ್ತಿ ಇದೆ : ಬಿಸಿ ಪಾಟೀಲ್.

ಮೈಸೂರು : ಗೃಹ ಇಲಾಖೆಯನ್ನು ಖಂಡಿತವಾಗಿ ನಿಭಾಯಿಸುವ ಶಕ್ತಿ ಇದೆ ಎಂದು ಬಿಸಿ ಪಾಟೀಲ್ ಹೇಳಿದ್ದಾರೆ.

ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಖಾತೆ ಬದಲಾವಣೆಯಾಗಿ ನನಗೆ ಗೃಹಖಾತೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ. 25 ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.

ಗೃಹಖಾತೆಯನ್ನು ಅರಗ ಜ್ಞಾನೇಂದ್ರ ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ. ನಾನು ಗೃಹ ಖಾತೆ ಬಗ್ಗೆ ಚಿಂತನೆ ಮಾಡಿಲ್ಲ. ಅದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟದ್ದು ಎಂದರು.

ಇದನ್ನು ಒದಿ‌ : https://cnewstv.in/?p=9515

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*