Breaking News

ಹುಬ್ಬಳ್ಳಿ ಗಲಭೆ, ಮತ್ತೆ 11 ಜನ ಅರೋಪಿಗಳ ಬಂಧನ.‌

Cnewstv.in / 21.04.2022 / ಹುಬ್ಬಳ್ಳಿ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಹುಬ್ಬಳ್ಳಿ ಗಲಭೆ, ಮತ್ತೆ 11 ಜನ ಅರೋಪಿಗಳ ಬಂಧನ.‌

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ಶನಿವಾರ ರಾತ್ರಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮತ್ತೆ 11 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದ್ದು, ಪ್ರಕರಣದ ಪ್ರಮುಖ ರುವಾರಿ ಎಂದೇ ಹೇಳಲಾಗುತ್ತಿರುವ ತಲೆಮರೆಸಿಕೊಂಡಿರುವ ಮೌಲ್ವಿಗಾಗಿ ಪೊಲೀಸರು ಹುಡುಕಾಟವನ್ನು ತೀವ್ರಗೊಳಿಸಿದ್ದಾರೆಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ನಿನ್ನೆ 11 ಮಂದಿಯನ್ನು ಬಂಧನಕ್ಕೊಳಪಡಿಸಿರುವುದರೊಂದಿಗೆ ಈ ವರೆಗೂ ಒಟ್ಟು 127 ಮಂದಿ ಬಂಧನಕ್ಕೊಳಗಾದಂತಾಗಿದೆ. ಜೊತೆಗೆ ಗಲಭೆ ನಡೆದ ಪ್ರದೇಶದಲ್ಲಿ ಏ.20ರ ಬೆಳಗ್ಗೆವರೆಗೆ ಇದ್ದ ಕಲಂ 144 ಅನ್ವಯ ನಿಷೇಧಾಜ್ಞೆಯನ್ನು ಏ.23ರವರೆಗೆ ವಿಸ್ತರಿಸಲಾಗಿದೆ. ಈ ನಡುವೆ ಶನಿವಾರ ರಾತ್ರಿ ನಡೆದಿದ್ದ ಗಲಾಟೆಯಿಂದ ಉದ್ವಿಗ್ನಗೊಂಡಿದ್ದ ಹುಬ್ಬಳ್ಳಿ ಶಾಂತವಾಗಿದೆ.

ಅಂದು ನಡೆದ ಗಲಾಟೆಗೆ ಸಂಬಂಧಪಟ್ಟಂತೆ ಈವರೆಗೂ 127 ಮಂದಿಯನ್ನು ಬಂಧಿಸಲಾಗಿದ್ದು, ಎಲ್ಲರನ್ನೂ ಕಲಬುರಗಿಗೆ ರವಾನಿಸಲಾಗಿದೆ. ಬುಧವಾರ ಮತ್ತೆ 11 ಮಂದಿಯನ್ನು ಬಂಧಿಸಲಾಗಿದೆ.

ಇದನ್ನು ಒದಿ‌ : https://cnewstv.in/?p=9502

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*