ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರನ್ನು ಬಂಧಿಸದಿರುವುದನ್ನು ಗಮನಿಸಿದರೆ ಸರ್ಕಾರವೇ ಈ ಕೃತ್ಯವನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದೆ : ಕೆ.ಬಿ.ಪ್ರಸನ್ನ ಕುಮಾರ್.
Cnewstv.in / 18.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರನ್ನು ಬಂಧಿಸದಿರುವುದನ್ನು ಗಮನಿಸಿದರೆ ಸರ್ಕಾರವೇ ಈ ಕೃತ್ಯವನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದೆ : ಕೆ.ಬಿ.ಪ್ರಸನ್ನ ಕುಮಾರ್.
ಶಿವಮೊಗ್ಗ : 40 ಪರ್ಸೆಂಟ್ ಲಂಚದ ಹಗರಣದಲ್ಲಿ ಶಿವಮೊಗ್ಗ ಶಾಸಕ , ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರನ್ನು ಬಂಧಿಸದಿರುವುದನ್ನು ಗಮನಿಸಿದರೆ ಸರ್ಕಾರವೇ ಈ ಕ್ರಿಮಿನಲ್ ಕೃತ್ಯವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಪ್ರಯತ್ನ ನಡೆಸಿರುವುದು ಸ್ಪಷ್ಟವಾಗಿದೆ ಎಂದು ಮಾಜಿ ಶಾಸಕರು, ಕೆಪಿಸಿಸಿ ವಕ್ತಾರರಾದ ಕೆ.ಬಿ.ಪ್ರಸನ್ನಕುಕಮಾರ್ ಆರೋಪಿಸಿದ್ದಾರೆ.
ಲಂಚ ದಾಹದಿಂದ ನೊಂದು ಸಾವಿಗೀಡಾದ ಸಂತೋಷ್ ಪಾಟೀಲ್ ಯಾರೆಂಬುದೇ ತನಗೆ ಗೊತ್ತಿಲ್ಲವೆಂದು ರಾಜಾರೋಷವಾಗಿ ಈಶ್ವರಪ್ಪ ಹೇಳುತ್ತಿದ್ದಾರೆ. ಆದರೆ ಈಶ್ವರಪ್ಪರ ಪುತ್ರ ಕೆ.ಇ.ಕಾಂತೇಶ್ ಜೊತೆ ಪ್ರಕರಣದ 2ನೇ ಆರೋಪಿ ರಮೇಶ್ ಇರುವ ಛಾಯಾಚಿತ್ರ ಸಾಮಾಜಿಕ ಜಾಲತಾಣದಲ್ಲಿ ಕಂಡು ಬರುತ್ತಿದೆ. ಸತ್ತವನು ಗೊತ್ತೇ ಇಲ್ಲ ಎಂಬುದಾಗಿ ಈಶ್ವರಪ್ಪನವರು ಹೇಳುತ್ತಿರುವುದು ಆರೋಪಿಗಳೆಲ್ಲ ಅವರ ಕುಟುಂಬದವರ ಆಪ್ತರಾಗಿರುವುದು ತೀವ್ರ ಸಂಶಯಕ್ಕೆ ಕಾರಣವಾಗಿರುವ
ಸಂಗತಿಗಳಾಗಿದೆ.
ರಾಜೀನಾಮೆ ಕೊಟ್ಟ ನಂತರವೂ ಕೆ.ಎಸ್.ಈಶ್ವರಪ್ಪನವರು ಪೊಲೀಸ್ ಎಸ್ಕಾರ್ಟ್‌ನಲ್ಲಿ ಓಡಾಡಿಕೊಂಡಿದ್ದಾರೆ. ಉಡುಪಿ ಠಾಣೆಯಲ್ಲಿ ಈಶ್ವರಪ್ಪನವರ ಮೇಲೆ ಕ್ರಿಮಿನಲ್ ದೂರು ದಾಖಲಾಗಿದ್ದು, ತನಿಖೆ ಹಂತದಲ್ಲಿದ್ದರೆ, ಈಶ್ವರಪ್ಪನವರ ಹಿಂದೆ ಮುಂದೆ ರಕ್ಷಣೆಯ ಹೆಸರಲ್ಲಿ ಪೊಲೀಸರೇ ತುಂಬಿಕೊಂಡಿದ್ದಾರೆ. ಬಿಜೆಪಿ ಮುಖಂಡರು ಈಶ್ವರಪ್ಪನವರು ಆರೋಪ ಮುಕ್ತರಾಗುತ್ತಾರೆ ಎನ್ನುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಪ್ರಕರಣ ತನಿಖೆಯೇ ಇಲ್ಲದೇ ಮುಚ್ಚಿ ಹೋಗುವುದು ಖಚಿತವಾಗಿದೆ.
ಕೂಡಲೇ ಜನರ ತೆರಿಗೆ ಹಣ ದುರ್ವಿನಿಯೋಗವಾಗುವ ಪೊಲೀಸ್ ಎಸ್ಕಾರ್ಟ್ ಸೇವೆಯನ್ನು ಈಶ್ವರಪ್ಪರಿಗೆ ಒದಗಿಸಿರುವುದನ್ನು ಹಿಂತೆಗೆದುಕೊಂಡು ಸಂತೋಷ ಪಾಟೀಲ್ ಸಾವಿನ ಹಿಂದಿರುವ ಆರೋಪಿಗಳಿಗೂ ಈಶ್ವರಪ್ಪ ಕುಟುಂಬಕ್ಕೂ ಇರುವ ಸಂಬಂಧ -ಸಂಪರ್ಕ ಎಂತಹುದು ಎಂಬುದನ್ನು ತನಿಖೆ ಮಾಡಲು ಒತ್ತಾಯಿಸುತ್ತೇನೆ.
ಇದನ್ನು ಒದಿ : https://cnewstv.in/?p=9453
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರನ್ನು ಬಂಧಿಸದಿರುವುದನ್ನು ಗಮನಿಸಿದರೆ ಸರ್ಕಾರವೇ ಈ ಕೃತ್ಯವನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದೆ : ಕೆ.ಬಿ.ಪ್ರಸನ್ನ ಕುಮಾರ್. 2022-04-18
Recent Comments