Breaking News

ಇಂದಿನಿಂದ ಶಿವಮೊಗ್ಗದಿಂದ ತಿರುಪತಿ ಮತ್ತು ಚೆನ್ನೈಗೆ ಹೊಸ ರೈಲು ಸೇವೆ ಆರಂಭ.

Cnewstv.in / 17.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಇಂದಿನಿಂದ ಶಿವಮೊಗ್ಗದಿಂದ ತಿರುಪತಿ ಮತ್ತು ಚೆನ್ನೈಗೆ ಹೊಸ ರೈಲು ಸೇವೆ ಆರಂಭ.

ಶಿವಮೊಗ್ಗ : ಇಂದಿನಿಂದ ಶಿವಮೊಗ್ಗದಿಂದ ತಿರುಪತಿ ಮತ್ತು ಚೆನ್ನೈಗೆ ಹೊಸ ರೈಲು ಸೇವೆ ಆರಂಭವಾಗಿದೆ.

ನೈಋತ್ಯ ರೈಲ್ವೆಯು ಶಿವಮೊಗ್ಗದಿಂದ ವಾರಕ್ಕೆ ಎರಡು ದಿನ ರೇಣಿಗುಂಟಾ (ತಿರುಪತಿ ಸಮೀಪ) ಮಾರ್ಗವಾಗಿ ಚೆನ್ನೈಗೆ ಹೋಗುವ ಹೊಸ ವಿಶೇಷ ಎಕ್ಸ್‍ಪ್ರೆಸ್ ರೈಲು ಸೇವೆಯನ್ನು ಪ್ರಾರಂಭಿಸಿದೆ. ಈ ವಿಶೇಷ ಎಕ್ಸ್‍ಪ್ರೆಸ್ ರೈಲು ಮೆಟ್ರೋಪಾಲಿಟನ್ ನಗರವಾದ ಚೆನ್ನೈ ಮತ್ತು ಯಾತ್ರಿ ಕೇಂದ್ರವಾದ ತಿರುಪತಿ (ರೇಣಿಗುಂಟ)ಗೆ ನೇರ ಸಂಪರ್ಕವನ್ನು ಒದಗಿಸಲಿದೆ.

ಇಂದಿನಿಂದ ಆರಂಭವಾಗಿರುವ ಈ ವಿಶೇಷ ರೈಲಿಗೆ ಸಂಸದರಾದ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಮತ್ತು ಇತರೆ ಗಣ್ಯರು ಶಿವಮೊಗ್ಗ ಟೌನ್ ರೈಲು ನಿಲ್ದಾಣದಲ್ಲಿ ಹಸಿರು ಬಾವುಟ ತೋರಿಸುವ ಮೂಲಕ ನೆರವೇರಿಸುವರು. ಈ ವೇಳೆ ವಿಧಾನ ಪರಿಷತ್ ಶಾಸಕರಾದ ಆಯನೂರ್ ಮಂಜುನಾಥ, ರುದ್ರೇಗೌಡ, ಪಾಲಿಕೆ ಮಹಾಪೌರರಾದ ಸುನಿತಾ ಅಣ್ಣಪ್ಪ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿ.ಪಂ. ಸಿಇಒ ಎಂ.ಎಲ್.ವೈಶಾಲಿ ಇತರರು ಪಾಲ್ಗೊಂಡಿದ್ದರು.

ಇದನ್ನು ಒದಿ : https://cnewstv.in/?p=9445

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*