Cnewstv.in / 16.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಗರಾದ್ಯಂತ ಬಿರುಗಾಳಿ,ಗುಡುಗು, ಸಿಡಿಲು ಸಹಿತ ಮಳೆ.
ಮನೆಯ ಮೇಲೆ ಬಿದ್ದ ಬೃಹದಾಕಾರದ ಮರ.
ಶಿವಮೊಗ್ಗ : ಇಂದು ಮಧ್ಯಾಹ್ನದ ನಂತರ ನಗರಾದ್ಯಂತ ಬಿರುಗಾಳಿ ಸಹಿತ ಗುಡುಗು-ಸಿಡಿಲಿನ ಮಳೆಯಾಗಿದೆ.
ಬೇಸಿಗೆಯ ಸುಡು ಬಿಸಿಲಿಗೆ ಹೈರಾಣಾಗಿದ್ದ ಜನರಿಗೆ ಅಕಾಲಿಕ ಮಳೆ ತಂಪೆರೆದಿದೆ ಆದರೆ ಜೋರಾಗಿ ಬೀಸಿದ ಗಾಳಿ, ಗುಡುಗು-ಸಿಡಿಲಿಗೆ ಜನ ನಡುಗಿದ್ದಾರೆ. ಮಳೆಯ ಪ್ರಮಾಣ ಕೊಂಚ ಕಡಿಮೆ ಇದ್ದರೂ ಸಹ ಗುಡುಗು-ಸಿಡಿಲಿನ ಆರ್ಭಟ ಇನ್ನೂ ಮುಂದುವರೆದಿದೆ.
ಬಿರುಗಾಳಿಗೆ ಹೊಸಮನೆ ಬಡಾವಣೆಯ 4ನೇ ತಿರುವಿನಲ್ಲಿರುವ ಮನೆಯ ಮೇಲೆ ಬೃಹದಾಕಾರದ ಮರವೊಂದು ಬಿದ್ದಿದ್ದು ಮನೆಯ ಮೇಲ್ಚಾವಣಿ ಸಂಪೂರ್ಣ ಜಖಂ ಆಗಿದ್ದು ಮನೆಯ ಸದಸ್ಯರು ಕೂದಲೆಳೆ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಇದನ್ನು ಒದಿ : https://cnewstv.in/?p=9427
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
C News TV Kannada News Online in cnewstv